ಇದು ಬಣ್ಣಗಳ ಜೊತೆಯಲ್ಲಿ
ಬೆಸೆದು ಕೊಡಿ ಹಾಡುವ ಹಬ್ಬ
ಎರಡು ಮನಸುಗಳು ಒಂದಾಗಿ
ನಲಿದು ಹಾಡುವ ಹಬ್ಬ
ಜಾತಿ - ಬೇಧ - ಭಾವ -ತೊರೆದು
ನಾವೆಲ್ಲ ಒಂದೇ ಎಂದು
ಒಟ್ಟು ಮಾಡುವ ಹಬ್ಬ
ನಿಮ್ಮೆಲ್ಲ ಕನುಸುಗಳು ಬಣ್ಣ ಬಣ್ಣದಂತೆ ಚಿಮ್ಮಿ ನನಸಾಗಲಿ
ಹಬ್ಬಗಳು ಬರುವುದು ನಮಗೆ
ವರುಷದಲ್ಲಿ ಸಂತಸ ಮೂಡಿಸಿ
ಸಂಭಂದಗಳನ್ನ ಗಟ್ಟಿಗೊಳಿಸುವುದಕ್ಕೆ
ಬಣ್ಣವು ನಿಮ್ಮಲ್ಲರ
ಬದುಕಲಿ ಸುಂದರವಾಗಿರಲಿ
ಬಣ್ಣದಂತೆ ಮೂಡದಿರಲಿ...
ನೀವು ಹಾಡುವ ಮಾತುಗಳು
ಮತ್ತೊಬ್ಬರ ಭಾವನೆಗಳ
ಜೊತೆಯಲ್ಲಿ ಬಣ್ಣವಾಗಿ
ಎಂದಿಗೂ ಹುಡುಗಾಟ
ತಮಾಷೆ ಆಡದಿರಲಿ
ಬದುಕು ಎಲ್ಲರಿಗೂ ಒಂದೇ
ಬಣ್ಣ ಹಬ್ಬವಾಗಿರಲಿ
ನಿಮ್ಮ ಬದುಕು ಬಂಗಾರವಾಗಿರಲಿ...
ಕಾರ್ತಿಕ್...✍️
( ಶ್ರವಣ ಬೆಳಗೊಳ )
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ