ಬಾ ಪ್ರಿಯ ಒಲವಿನ ಹೋಳಿ ಆಡೋಣ
ಬಗೆ ಬಗೆ ಬಣ್ಣದಿ ಮೀಯೋಣ
ಎನ್ನುತ ಒಲವಿನ ಊರಿಗೆ ಕರೆದಿರುವೆ
ನೀ ಬಣ್ಣವ ಬಳಿಸಿಕೊಳ್ಳದೆ ಏಕೆ ದೂರ ಸರಿಯುತಿರುವೆ
ಬೇಕೆನುತಲೆ ಸತಾಯಿಸುತ್ತಿರುವೆ
ನನ್ನಲ್ಲಿ ಇನ್ನಷ್ಟು ಸವಿ ತಲ್ಲಣ ಹೆಚ್ಚಿಸಿರುವೆ
ನಿನ್ನ ಚೆಲುವು ಹೊದ್ದಿದೆ ಎಲ್ಲ ಬಣ್ಣ
ಸೆಳೆಯುತಿದೆ ನನ್ನಯ ಕಣ್ಣ
ನಸು ನಗುವಲಿ ನಾಚಿ ಹೊಮ್ಮಿದೆ ಬಂಗಾರದ ಬಣ್ಣ
ಕಣ್ಸನ್ನೆಯಲಿ ಬೆರೆಸಿರುವೆ ಒಲವಿನ ಬಣ್ಣ
ನಿನ್ನ ಕೆನ್ನೆಯಲಿ ಕಾಮನಬಿಲ್ಲಿನ ಏಳು ಬಣ್ಣ
ಹಣೆಯಲಿ ಮಿರುಗುತಿದೆ ಎಳೆ ಸೂರ್ಯನ ಬಣ್ಣ
ನಿನ್ನೆಯ ತುಟಿಯಲಿ ಸೇಬಿನ ಬಣ್ಣ
ನಿನ್ನಯ ಗಲ್ಲದಿ ಹಲವು ಹೂ ಬಣ್ಣ
ಬಣ್ಣದಲೆನಿದೆ ಬಣ್ಣಿಸಲು ಅಸದಳ
ನಿನ್ನಯ ಸದ್ಗುಣಗಳ
ಬಳಿ ಬಾ ಗೆಳತಿ ಅಚ್ಚುವೆ ಒಲವಿನ ಬಣ್ಣ
ಬಣ್ಣ ಬಣ್ಣ ಬದುಕಿನ ಬಣ್ಣ
ತರ ತರ ಖುಷಿಯಲಿ ಕುಣಿಯೋಣ
ನಾವಿಬ್ಬರು ಕೂಡಿ ನಲಿಯೋಣ
✍️ ಭವ್ಯ ಸುಧಾಕರ ಜಗಮನೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ