ಬಾರೇ ಮುದ್ಧು ಮನದ ಒಡತಿ
ಬಂತು ಹೋಳಿಹಬ್ಬ ಆಡುವ ಬಣ್ಣದ ಓಕಳಿ
ಮನದೊಳಗಿನ ರಂಗುರಂಗಿನ ಆಸೆಗಳಿಗೆ
ಬಣ್ಣವ ಹಾಕುತ ಕಳೆಯೋಣ ಹರುಷದಿ ಆ ಘಳಿಗೆ
ಪ್ರೀತಿ ಪ್ರೇಮದಲಿ ಸಾವಿರದೆಂಟು ಬಣ್ಣ
ಸಾಗುತ ಇರೋಣ ಹೀಗೆ ಏಳೇಳು ಜನ್ಮ
ಸಾಗೋಣ ರಂಗು ರಂಗಿನ ಕನಸುಗಳ
ಏರೋಣ ನನಸುಗಳ ಮೆಟ್ಟಿಲುಗಳ
ಆಡೋಣ ಬಣ್ಣ ನಲಿಯೋಣ ಚಿನ್ನ
ಜೀವನದಿ ಮಾಡೋಣ ಆ ಕ್ಷಣಗಳ ಹೊನ್ನ
ನೆನಪುಗಳೆಂಬ ಬಣ್ಣದಿ ಬರೆದಿಡೋಣ
ನಮ್ಮಿಬ್ಬರ ಈ ರಂಗು-ರಂಗಿನ ಮಿಲನ
ಶಿವಾ ಮದಭಾಂವಿ
ಗೋಕಾಕ
8951894526
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ