ಶನಿವಾರ, ಜನವರಿ 11, 2025

ಕೃತಿ ವಿಮರ್ಶೆ...

ಕೃತಿ ವಿಮರ್ಶೆ...


ಕವಿ ಸಾಧಕರ ಕಾವ್ಯಕೃತಿ ಮಹಾನ್ ಚೇತನಗಳಿಗೆ ನಮನಗಳು 

-ಗೊರೂರು ಅನಂತರಾಜು. 

ನಾನು ಅಕ್ಷರ ಕಲಿಯುವ ಮೊದಲೇ ನಮ್ಮ ತಂದೆ ನನಗೆ ಕನ್ನಡ ಜೈಮಿನಿ ಭಾರತದ ಮೊದಲ ಪ್ರಾರ್ಥನಾ ಪದ್ಯ ಕಲಿಸಿದ್ದರು. ಮನೆಯಲ್ಲಿ ಕುಮಾರವ್ಯಾಸ ಭಾರತ, ಜೈಮಿನಿ ಭಾರತ ಓದುತ್ತಿದ್ದರು. ಅದನ್ನು ಕೇಳುತ್ತಿದ್ದ ನನಗೂ ವಾಚನ ಮಾಡುವ ಅಭ್ಯಾಸವಾಯಿತು ಎನ್ನುವ ಲಕ್ಷ್ಮಿದೇವಿ ದಾಸಪ್ಪ ಅವರ ಮಹಾನ್ ಚೇತನಗಳಿಗೆ ನಮನಗಳು ಕವನ ಸಂಕಲನದ ೨೩ ಕವಿತೆಗಳು ಸೊಗಸಾಗಿ ಓದಿಸಿಕೊಂಡು ಹೋಗುತ್ತವೆ. ಸರಳ ಭಾಷೆಯಲ್ಲಿ ಹೆಣೆದ ಕವಿತೆಗಳಲ್ಲಿ ಹಳಗನ್ನಡದ ಕಂಪಿದೆ. 
ಕುಮಾರವ್ಯಾಸ ನನ್ನ ಮೆಚ್ಚಿನ ಕವಿ. ನನ್ನ ಮೆಚ್ಚಿನ ಕಾವ್ಯ ಕರ್ಣಾಟ ಭಾರತ ಕಥಾಮಂಜರಿ. ನನಗೆ ತುಂಬಾ ಬೇಸರವಾದಾಗ ಈ ಕಾವ್ಯದ ಯಾವುದಾದರೂ ಸ್ವಾರಸ್ಯಕರ ಸನ್ನಿವೇಶವನ್ನು ಓದಿದರೆ ಸಾಕು ನನ್ನ ಮನಸ್ಸು ನಿರಾಳವಾಗುತ್ತದೆ. ಆ ಶಕ್ತಿ ಕಾವ್ಯಗಳಿಗಿದೆ. ನಾನು ಬೇಕಾದಷ್ಟು ಕಥೆ ಕಾದಂಬರಿ ಓದಿದ್ದರೂ ಗದ್ಯಕ್ಕಿಂತ ಪದ್ಯವೇ ನನಗೆ ಹೃದ್ಯವಾಗಿ ತೋರುತ್ತದೆ. ಅದರಲ್ಲೂ ಹಳಗನ್ನಡ, ನಡುಗನ್ನಡ ಸಾಹಿತ್ಯದ ಪದ್ಯಗಳಲ್ಲಿರುವ ಅಲಂಕಾರಗಳು, ಉಚಿತ ಪದ ಪ್ರಯೋಗ, ಲಯ, ಪ್ರಾಸಗಳು ನನ್ನನ್ನು ಅತೀವವಾಗಿ ಆಕರ್ಷಿಸುತ್ತವೆ.. ಎನ್ನುವ ಇವರ ಕವಿತೆಗಳಲ್ಲಿ ಹಳಗನ್ನಡ ಪ್ರಭಾವವಿದೆ. ಕನ್ನಡ ಸಾಹಿತ್ಯದ ಖ್ಯಾತ ಚಂಪೂಕವಿಗಳು, ಷಟ್ಪದಿ ಕವಿಗಳು, ವಚನಕಾರರು, ಹರಿದಾಸರ ಕುರಿತ ಕಾವ್ಯಗಳಿವೆ. ಮೊದಲ ಕವಿತೆ ಆದಿಕವಿಗೆ ನಮನದಲ್ಲಿ ಪಂಪನಿಗೆ ನಮಿಸಿ

ವರುಷ ಸಾವಿರ ಉರುಳಿ ಶತಮಾನ ಕಳೆದರೂ
ಹರಡಿಹುದು ನಾಡಿನಲಿ ನಿನ್ನ ಕೀರ್ತಿಯ ಕಂಪು
ಪಪನೆಂಬಾ ಪೆಂಪಿನ ಪೆಸರಾಂತು
ಎಂದೆಂದು ಕನ್ನಡಕ್ಕೊರ್ವನೆ ಒಡೆಯನಾದೆ..

ಪಂಪ (ಕ್ರಿ.ಶ.೯೪೦) ಕನ್ನಡದ ಆದಿಕವಿ. ಆದಿಪುರಾಣ ಮತ್ತು ವಿಕ್ರಮಾರ್ಜುನ ವಿಜಯ ಇವನ ಕೃತಿ ರತ್ನಗಳು. ವೃಷಭನಾಥನನ್ನು ಕುರಿತ ಆದಿಪುರಾಣ ಜೈನಧಾರ್ಮಿಕ ಸಂಗತಿಗಳಿಂದ ತುಂಬಿ ಅತ್ಯಂತ ಚೇತೋಹಾರಿ ಮಹೋನ್ನತ ಕಲ್ಪನೆಗಳಿಂದ ದರ್ಶನಧೀಧಿತಿಯಿಂದ ಸತ್ವಸಂಪನ್ನ ಕಾವ್ಯ.

ಪುರುದೇವ ಬಾಹುಬಲಿ ಪಾತ್ರದೊಳ್
ಎರಕ ಹೊಯ್ದಿಹೆ ವೈರಾಗ್ಯದುನ್ನತಿಯ..

ಸನ್ನಿವೇಶ ನಿರ್ಮಾಣ ಪಾತ್ರ ಪರಿಪೋಷಣೆ ರಸನಿರ್ಭರತೆ ಪರಂಪರೆಯ ಪ್ರಜ್ಞೆಯೊಂದಿಗೆ ಮಿಳಿತ ಗಾಢ ಸಮಕಾಲೀನ ದೃಷ್ಟಿ ಪರಿಣಿತ ಭಾಷಾ ಪ್ರಯೋಗ ಚಾತುರ‍್ಯಗಳಿಂದ ಕೂಡಿದೆ ಪಂಪ ಭಾರತ.  
ಬಾದರಾಯಣ ಬರೆದ ಭಾರತಕೆ ಮರುಹುಟ್ಟು
ಪಂಪಭಾರತವು ಉಡುಗೆ ಬದಲಾದೊಡೇಂ
ರೂಪಮೊಂದಲ್ತೆ.

ಎಂಬುದು ತುಂಬಾ ಅರ್ಥಪೂರ್ಣ ಸೊಗಸಾದ ಮಾತು ಎನಿಸಿತು ಆದರೆ 

ವ್ಯಾಸಕಥೆಯಂ ಮೀರಿಹಾಸು ಬೀಸಲಿ
ನಡೆದು ತತ್ತರಿಸಿದಾ ಬಗೆಯು
ಪಂಪ ಪ್ರತಿಭಾ ಪ್ರಭಾಕರ ಪ್ರಖರತೆಯಿದಿರೊಳ್
ಮಸುಕಾಯ್ತು ಮಿಣುಕು ದೀಪದಂತೆವೋಲ್..

ಎಂಬ ಅಭಿಪ್ರಾಯ ಒಪ್ಪುವುದು ಸಾಧ್ಯವಿಲ್ಲ ಎಂದಿದ್ದಾರೆ ಕೆ.ಆರ್.ಕೃಷ್ಣಯ್ಯನವರು.  
ಪಂಪನ ಹಾದಿಯಲ್ಲೇ ನಡೆದ ರನ್ನ (ಕ್ರಿ.ಶ.೯೯೩) ಅಜಿತ ತೀರ್ಥಂಕರ ಪುರಾಣವೆಂಬ ಆಗಮಿಕ ಗ್ರಂಥ ಸಾಹಸ ಭೀಮವಿಜಯ ಎಂಬ ಲೌಕಿಕ ಗ್ರಂಥ ಬರೆದಿದ್ದಾನೆ. ಪಂಪನ ವಿಕ್ರಮಾರ್ಜುನ ವಿಜಯದ ೧೩ನೇ ಆಶ್ವಾಸದ ಬುನಾದಿಯ ಮೇಲೆ ಕಟ್ಟಿದ ಸಾಹಸ ಭೀಮವಿಜಯ ಸಿಂಹಾವಲೋಕನ ಕ್ರಮದಿಂದ ಇಡೀ ಮಹಾಭಾರತ ಕಥೆಯನ್ನು ಸಂಕ್ಷಿಪ್ತವಾಗಿ ದರ್ಶನ ಮಾಡಿಸುತ್ತದೆ. 

ರಸಘಟ್ಟಂ ಗದಾಯುದ್ದ ಕಾವ್ಯದೊಳ್
ದುರ್ಯೋಧನ ವಿಲಾಪಂ..
ಮರುಗುವ ಆಕ್ರಂದನಗೈವ
ಚಿತ್ರಣಂ ಅನಾದೃಶ್ಯಂ ಕಾವ್ಯದೊಳ್..

ರಸಘಟ್ಟಿಯೆನಿಸಿದ ಗದಾಯುದ್ಧದ ಭೀಮನ ಚಿತ್ರಣವು ರನ್ನನ ಭಾಷೆಗೆ ಸರಿಹೊಂದುವಂತೆ ಓಜಸ್ಸನ್ನು ತುಂಬಿಕೊಂಡಿದೆ.
ಹೊಯ್ಸಳರ ಆಳ್ವಿಕೆಯಲ್ಲಿ ಬಾಳಿದ ಜನ್ನ (೧೧೯೦) ಇಮ್ಮಡಿ ವೀರಬಲ್ಲಾಳನಿಂದ ಕವಿ ಚಕ್ರವರ್ತಿ ಬಿರುದು ಪಡೆದವನು. ಅನಂತನಾಥ ಪುರಾಣ ಯಶೋಧರ ಚರಿತೆ, ಅನುಭವ ಮುಕುರ ಎಂಬ ಕೃತಿಗಳನ್ನು ರಚಿಸಿರುವ ಈತ ಶಾಸನ ಕವಿಯೂ ಹೌದು. ಯಶೋಧರ ಚರಿತೆಯ ರಾಣಿ ಅಮೃತಮತಿಯ ಸಾರ ಸಂಗ್ರಹ ಕವಿತೆಯಲ್ಲಿ ಪಡಿಮೂಡಿದೆ. 

ರಾಣಿ ಅಮೃತಮತಿ ಯಶೋಧರ ನೃಪನ
ಸತಿ ಮಾವುತನ ಗಾನಮಂ ಕೇಳ್ದು ಮನಸೋತು
ಅಷ್ಟಾವಂಕ ಪೆಸರ್ಗನ್ವರ್ಥನಂ ಬದಗನಂ..

ಕನ್ನಡದ ಮೇರು ಕವಿ ಕುಮಾರವ್ಯಾಸನ ಕುರಿತ ಕವಿತೆಯಲ್ಲಿ ಅಭಿಮನ್ಯು ಪ್ರಸಂಗವನ್ನು ಸೊಗಸಾಗಿ ಚಿತ್ರಿಸಿ ಕವಿ ಚೇತನಕೆ ನಡುಬಾಗಿ ನಮಿಸುತ್ತಾರೆ.

ಈ ಮಹಾಕವಿ ಚೇತನಕೆ ಮುಡಿಬಾಗಿ 
ನಡುಬಾಗಿ ಕರ ಮುಗಿದು ನಮಿಸುವೆನು..

ಹೀಗೆ ಕನ್ನಡ ಸಾಹಿತ್ಯದ ಮೇರು ಶಿಖರ ಕವಿಗಳನ್ನು ಸ್ಮರಿಸಿ ಅವರ ಕೃತಿಗಳನ್ನು ಅವುಗಳ ಕಿರು ಸಾರಂಶ ಬಣ್ಣಿಸುತ್ತಾರೆ. ಪಂಪನಿಂದ ಕುವೆಂಪು ವರೆಗಿನ ಮಹತ್ವದ ಕವಿಗಳು ಇವರ ಕಾವ್ಯದಲ್ಲಿ ಚಿತ್ರಿಸಲ್ಪಟ್ಟಿದ್ದಾರೆ. ಅಕ್ಕಮಹಾದೇವಿ, ಬಸವಣ್ಣರ ಕುರಿತ ಕವಿತೆಗಳಲ್ಲಿ ಬಸವಣ್ಣರ ಕಥೆ ಕಿರಿದಾಗಿ ಅಕ್ಕನ ಜೀವನಗಾಥೆ ತುಸು ವಿಸ್ತಾರವಾಗಿದೆ. ಹರಿಹರ, ರಾಘವಾಂಕ, ಅಂಡಯ್ಯ, ಕುಮಾರವ್ಯಾಸ, ಲಕ್ಮೀಶ
 ಪುರಂದರದಾಸರು, ಕನಕದಾಸರು, ಕವಿ ಮುದ್ದಣ, ಡಿವಿಜಿ, ಬೇಂದ್ರೆ ಒಳಗೊಂಡ ಕವಿಗಳು ಹಾಗೂ ತಮ್ಮ ಸಾಧನೆಗಳಿಂದ ಜನರಿಗೆ ಪ್ರಿಯರಾದ ಸಾಧಕರು ಸಿದ್ಧಗಂಗೆಯ ಶಿವಕುಮಾರ ಸ್ವಾಮೀಜಿ, ವೃಕ್ಷಮಾತೆ ಸಾಲುಮರದ ತಿಮ್ಮಕ್ಕ, ಡಾ. ಬಿ.ಆರ್.ಅಂಬೇಡ್ಕರ್, ಡಾ.ರಾಜಕುಮಾರ್ ಕಡೆಯಲ್ಲಿ ಪುನೀತ್ ರಾಜಕುಮಾರ್ ಹೀಗೆ ಕವಿಗಳು ಮತ್ತು ಮಹಾನ್ ಸಾಧಕರು ಇವರ ಕವಿತೆ ಓದುತ್ತಿರಲು ಪುನರಪಿ ನೆನೆಪಾಗುವರು. 
  
ಗೊರೂರು ಅನಂತರಾಜು, ಹಾಸನ.
ಮೊ: ೯೪೪೯೪೬೨೮೭೯
ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ೩ನೇ ಕ್ರಾಸ್, ಹಾಸನ-೫೭೩೨೦೧.

ಬುಧವಾರ, ಜನವರಿ 1, 2025

ಜನಮನ ಗೆದ್ದ ಉಪನ್ಯಾಸಕಿ ಡಾ|| ಸುರೇಖಾ ಹೊರ್ತಿಕರ...

. ಜನಮನ ಗೆದ್ದ ಉಪನ್ಯಾಸಕಿ ಡಾ|| ಸುರೇಖಾ ಹೊರ್ತಿಕರ...


ಸಾಂಗಲಿ ಜಿಲ್ಲೆ ಜತ್ತ ತಾಲೂಕು ಕನ್ನಡ ಭಾಷಿಕರ ಪ್ರದೇಶ 80% ರಷ್ಟು ಕನ್ನಡವನ್ನು ಮಾತನಾಡುವ ಪ್ರದೇಶ, ಕನ್ನಡ ಭಾಷೆ ಸಾಹಿತ್ಯ ರಾಜಕೀಯ ಸಂಸ್ಕೃತಿ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ತನ್ನದೇ ಆದಂತಹ ಛಾಪನ್ನು ಮೂಡಿಸಿದೆ. ಸಾಹಿತ್ಯ ಕ್ಷೇತ್ರ .. ಶಿವಕುಮಾರ ಹಿರೇಮಠ, ಮಲ್ಲಿಕಾರ್ಜುನ ಗುರವ ಶಿವಣ್ಣ ಎಂ. ಹದಿಮೂರ ಚಂದ್ರಶೇಖರ ಕಾರಕಲ್, ಶಂಕರಯ್ಯಾ ಮಠಪತಿ ಅರವಿಂದ ಕರಡಿ ಪ್ರಕಾಶ ಐಹೊಳೆ ಧರೆಪ್ಪ ಕಟ್ಟಿಮನಿ ಗುರುಪಾದ ಕುಂಬಾರ ಮಲ್ಲಿಕಾರ್ಜುನ ಬಾಲಗಾಂವ ಮೆಹಬೂಬ ಜಿಡ್ಡಿ ಡಾ|| ಕೆ.ಕೆ. ಪತ್ತಾರ ಚೆನ್ನಪ್ಪ ಸುತಾರ ಸುಜಾತಾ ಪಾಟೀಲ,ರವಿ ಶಿವರಾಯಿಗೋಳ ಕಾಶೀನಾಥ ಹಿಟ್ಟಳ್ಳಿ , 
ಕನ್ನಡ ಕಟ್ಟಾಳು....
ಚೆನ್ನಪ್ಪಣ್ಣ ಹೊರ್ತಿ ಕರ, ತಮ್ಮಣ್ಣ ಗೌಡ ರವಿ ಪಾಟೀಲ ಪರಣ್ಣ ಬಗಲಿ ಮಲ್ಲಿಕಾರ್ಜುನ ಬಾಲಗಾಂವ ಡಾ ಕೆ.ಕೆ ಪತ್ತಾರ ಶ್ರೀಶೈಲ ಅವಟಿ ಎಂ.ಬಿ.ಪಾಟೀಲ ರೇವಪ್ಪ ಪಟ್ಟಣಶೆಟ್ಟಿ, ಆರ್.ಜಿ.ಬಿರಾದಾರ ಗುರುಬಸಪ್ಪ ವಾಗ್ಲೋಲಿ ಮಲ್ಲೇಶಪ್ಪ ತೇಲಿ ಪ್ರಲ್ಹಾದ ಕುಂಡಲೆ, ಮುಂತಾದವರು....
ಅದೇ ರೀತಿ ಖಾಸಗಿ ಶಿಕ್ಷಣ ಸಂಸ್ಥೆಗಳು ಕನ್ನಡ ಹಾಗೂಕನ್ನಡ ಮಕ್ಕಳ ಪಾಲಿಗೆ ಆಶಾಕಿರಣ ಯೆ೦ದರೆ ತಪ್ಪಗಲಾರದು. ತಾಲೂಕಿನ ಸವೋ೯ದಯ ಶಿಕ್ಷಣ ಸಂಸ್ಥೆ ಪ್ರಮುಖವಾಗಿ ಕಂಡುಬರುತ್ತದೆ. ಸಂಸ್ಥೆಯ ಆರಂಭಕ್ಕೆ ಶಿಕ್ಷಣ ಮಹರ್ಷಿ ಕಲ್ಲಪ್ಪ ಅಣ್ಣಾ ಹೋರ್ತಿ ಕರಯವರು ಕನ್ನಡ ಮಕ್ಕಳ ಸಲುವಾಗಿ ಕನ್ನಡ ಶಾಲೆ ಪ್ರಾರಂಭಿಸಿ ಶಿಕ್ಷಣ ಕ್ರಾಂತಿ ಮಾಡಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ ಏಕೆಂದರೆ ಶಿಕ್ಷಣಕ್ಕಾಗಿ ದೂರದ ನಗರಗಳಿಗೆ ಕಲಿಯುವ ಅನಿವಾರ್ಯತೆ ಇರುವುದರಿಂದ ಕಲ್ಲಪ್ಪ ಅಣ್ಣಾ ಹೋರ್ತಿಕರ ಹಾಗೂ ಇವರ ಸಂಗಡಿಗರು ಸೇರಿಕೊಂಡು ತಾಲೂಕಿನ ಅನೇಕ ಹಳ್ಳಿಗಳಲ್ಲಿ ಶಾಲೆ ಪ್ರಾರಂಭಕ್ಕೆ ಆಧ್ಯತೆ ನೀಡಿದ್ದು ಶ್ಲಾಘನೀಯವಾದದು ತಾಲೂಕಿನ ಬಡವರ ಅನಾಥ ಮಕ್ಕಳ ಸಲುವಾಗಿ ಆಶ್ರಮದಲ್ಲಿ ಅನುಕೂಲ ಮಾಡಿ ಕೊಡಲಾಗಿದೆ. ಅನೇಕ ಸಾಮಾಜಿಕ ಕಾರ್ಯದಲ್ಲಿ ಹೋ ತಿ೯ಕರ ಮನೆತನ ಮೇಲುಗೈ ಸಾಧಿಸಿದೆ. ಮನೆತನದ ಡಾ|| ಸುರೇಖಾ ಹೊರ್ತಿ ಕರಯವರು ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶಿಕ್ಷಣ ಗುಣಮಟ್ಟ ಹಾಗೂ ವಿದ್ಯಾರ್ಥಿಗಳ ಪ್ರಗತಿಗಾಗಿ ಹಗಲು ಇರುಳು ಎನ್ನದೇ ಕೆಲಸ ಮಾಡುತ್ತಿರುವ ಡಾI ಸುರೇಖಾ ಹೋರ್ತಿ ಕರಯವರು..
ಸದಸ್ಯರು... ಕನ್ನಡ ಅಭ್ಯಾಸ ಮಂಡಳಿ ಶಿವಾಜಿ ವಿಶ್ವವಿದ್ಯಾಲಯ ಕೋಲ್ಲಾಪೂರ
ಸಾಹಿತ್ಯ ಸೇವೆ... ದಿವಾಣಿಜಿಯವರ ಬದುಕು ಬರಹ ..
ಮಾರ್ಗದರ್ಶಕರು ಡಾ|| ಬಿ. ಬಿ. ಪೂಜಾರಿ..
ಗಡಿ ಕನ್ನಡ ನುಡಿತೋರಣ ಸಂಪಾದನೆ ಕೃತಿ...
ರಾಷ್ಟೀಯ - ಅಂತರರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡನೆ.
ಜತ್ತ ಕನ್ನಡಿಗರ ಸ್ಥಿತಿಗತಿ,
ಭೈರಪ್ಪನವರ ಕಾದಂಬರಿಗಳಲ್ಲಿ ಸ್ತ್ರೀ ಪಾತ್ರ..
ಕನಕದಾಸರ ಕೀರ್ತನೆಗಳಲ್ಲಿ ಭಕ್ತಿತತ್ವ ನೀತಿ ಭೋಧನೆ,
ಕನ್ನಡ ಜನಪದ ಸಾಹಿತ್ಯದಲ್ಲಿ ಸಂಸ್ಮತಿ ಹೀಗೆ ಹತ್ತು ಹಲವು ಪ್ರಬಂಧ ಮಂಡನೆ ಮಾಡಿದ್ದಾರೆ..
ಡಾII ಸುರೇಖಾ ಹೋರ್ತಿಕರ ಯವರು ತಾಲೂಕಿನ ಉಮರಾಣಿಯಲ್ಲಿ ನಡೆಯುವ ಗಡಿನಾಡು ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಅವರಿಗೆ ತಾಲೂಕಿನ ಮಹಾಜನತೆಯಿಂದ ತುಂಬು ಹೃದಯದ ಅಭಿನಂದನೆಗಳು..

ಲೇಖಕರು.ದಯಾನಂದ ಪಾಟೀಲ ಅಧ್ಯಕ್ಷರು ಭಾರತೀಯ ಕನ್ನಡ ಸಾಹಿತ್ಯ ಬಳಗ ಮಹಾರಾಷ್ಟ್ರ...

ಚುಟುಕು...

ವಿದಾಯ
              
ಸಹಿ ಹಾಕಬೇಕಿದೆ ನೆನೆಪುಗಳ ಪುಟಕೆ
ಮಿಂದೆದ್ದ ನೋವು-ನಲಿವಿನ ಚಿತ್ರಣಕೆ 
ಕಳೆದು ಹೋದ ಹರುಷಕೆ ಆ ನಿಮಿಷಕೆ
ಹೇಳಲೇಬೇಕಿದೆ ವಿದಾಯ ಈ ವರುಷಕೆ

ಸ್ವಾಗತ

ಸಾಗೋಣ ದೃಢ ನಿರ್ಧಾರದ ಕೂಟಕೆ
ತೇಲೋಣ ಭರವಸೆ ಹೊತ್ತು ಆ ದಿನಕೆ
ಹಾಕೋಣ ನನಸುಗಳಾಗಲು ಪೀಠಿಕೆ
ಹೇಳೋಣ ಸ್ವಾಗತವ ಹೊಸ ಅಂಕಿ ವರುಷಕೆ

ಶಿವಾ ಮದಭಾoವಿ
 ಗೋಕಾಕ
8951894526

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...