ತಿಂಗಳ
ಹೇ ಐಸರ ಸುಧಾಸೂತಿಯೆ
ಬಾನಹಂದರದಿ ಮಿನುಗುತಾರೆಗಳಿರೆ
ಜಿಲ್ಲಿಮೋಡಗಳ ತುಂತುರುಹನಿ ಹನಿತಿರೆ
ಇರುಳಳಿವ ಸುಜ್ಞಾನದ ಬೆಳ್ಳಕ್ಕಿ ನೀ
ಹೇ ತಿಂಗಳ ಬಾನಸುಂದರ ಬಾರ...
ಅತ್ರಿಸುತ ಇಹಪರ ದಿಕ್ಪಾಲಕನೆ
ಅಚ್ಚುತನ ಬೆಣ್ಣೆ ಮುರುಕು ನೀ
ಕಾಳ ವಿಪಿವೈಯ್ಯಾರಿಗೆ ಹಂಸನೆ
ಒಕ್ಕಲ ಮಕ್ಕಳ ಸುಖನಿದ್ರ ವಿಧು ನೀ
ಹೇ ತಿಂಗಳ ಬಾನಸುಂದರ ಬಾರ...
ನೀಲಾಗಸದ ಬೆದರುಬೊಂಬೆಯೆ
ನಿನ್ನಲ್ಲಿಗೆ ಗರಿಬಿಚ್ಚಿ ಹಾರಲಾರೆನು
ಕಾರ್ಮೋಡಗಳ ಭಯವಿದೆನನಗೆ
ಧರೆಗಿಳಿದು ನನ್ನ ಮುದಲಿಸಲಾರೆಯ
ಈ ತಿಂಗಳ ಬಾನಸುಂದರ ಬಾರ...
ಭೂವಿಯಲ್ಲಿ ನಿನ್ನಂತ ಚೆಲುವಿಲ್ಲ
ಮುಗಿಲಲ್ಲಿ ನಿನ್ನಂತ ನಗುವಿಲ್ಲ
ಹರೆಯಲೆದ್ದು ನಿನ್ನ ಕಾಣಲಾರೆನು
ಬೇಡುವೆ ದೇವರಲ್ಲಿ ನೀ ನಿರೆನ್ನಲ್ಲಿ
ಹೇ ತಿಂಗಳ ಬಾನಸುಂದರ ಬಾರ...
ಊರಗಲ ಬೆಳದಿಂಗಳ ಬಿಂಬಕಂಡು
ಅಂಬರಾಗಿ ಚಂದಿರನಕಂಡು ಸಬ್ಬನೆಯಿಂದ
ಸಕಣದ ಕನಸುಗಳು ಚಿಗುರಿಹವು
ಮಳೆ ಗದ್ದರಕೀಳಿ ಬೆಚ್ಚಗೆ ಮಲಗಿಹೆನು
ಹೇ ತಿಂಗಳ ಬಾನಸುಂದರ ಬಾರ...
- ಆದರ್ಶ್ ಕೆ.ಎಸ್.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ