ನೀ ಮಾಯೆಯೋ,
ನೀ ಛಾಯೆಯೋ
ಕಣ್ಣಿಗೆ ಕಾಣದೆ ಭಯದ ಬೆನ್ನತ್ತಿ
ಅಟ್ಟಹಾಸದಿ ವಿಜೃಂಭಿಸುತ್ತಿಹ ಮಾಯೆಯೋ
ಯುಗದ ಪರಿವರ್ತನೆಗೆ ಬಂದ
ಜಗದ ಹಣೆಬರಹವ ಕಸಿದ ಛಾಯೆಯೋ
ಸೃಷ್ಟಿಯ ಸ್ಥಿತಿ ಗತಿಯನ್ನೇ ಎದುರಿಸಿ
ಸವಾಲಾದ ನೀ ದೈತ್ಯ ಮಾಯೆಯೋ
ಬದುಕಿನ ಪದತಾಳಗತಿಯ
ಅಲುಗಿಸಿದ ಬವಣೆಗಳ ಛಾಯೆಯೋ
ಉಳ್ಳವರು ಬೆಚ್ಚಗಿನ ಮಹಡಿಯಲಿರಲು
ಅವರ ಆವರಿಸಿದ ಭಯದ ಮಾಯೆಯೋ
ಬಡವರ ತುತ್ತು ಅನ್ನಕ್ಕೂ ಹೊಂಚಾಕಿ
ಬೆಂಬಿಡದೆ ಕಾಡುತಿಹ ಕ್ರೂರ ಛಾಯೆಯೋ
ಸಂಸ್ಕೃತಿ-ಭಾಂದವ್ಯಗಳಿಗೆ ಮರುವುಟ್ಟು
ಕಲ್ಪಿಸಿದ ಮೃಗಜಲದ ಮಾಯೆಯೋ
ನಿನ್ನಿಂದ ಮಣ್ಣಲ್ಲಿ ಮಣ್ಣಾದವರಿಗೆ
ಮಣ್ಣಾಕಲು ಬಾರದ ಸ್ವಾರ್ಥದ ಛಾಯೆಯೋ
ನೀ ಮಾಯೆಯಾದರೆ ನಿನ್ನ ಆರ್ಭಟಕ್ಕೆ
ಅಂತ್ಯವಾಡಿ ನಮ್ಮ ಶಕ್ತಿ ತೋರುವೆವು
ನೀ ಛಾಯೆಯಾದರೆ ನಿನಗೆ ವಿಲ್ಯೆಯವನ್ನಿಟ್ಟು
ಜ್ಞಾನಜ್ಯೋತಿ ಬೆಳಗಿಸಿ ಮುಕ್ತಿನೀಡುವೆವು
(ಪ್ರಸ್ತುತ ಕವನದಲ್ಲಿ ವಿಶ್ವಕ್ಕೆ ವಿನಾಶಕಾರಿಯಾಗಿ ಪರಿಣಮಿಸಿ, ಅಗೋಚರವಾಗಿ, ಮನುಕುಲದ ಭಯದ ಬೆನ್ನೇರಿ, ಅಟ್ಟಹಾಸದಿಂದ ಮೆರೆದು, ಉಗ್ರರೂಪ ತಾಳಿ ಅಪಾರ ಕಷ್ಟ ನಷ್ಟಗಳಿಗೆ ನಮ್ಮನು ಗುರಿಮಾಡಿರುವ ಕರೋನದ ನೈಜ್ಯಸ್ಥಿತಿಯನ್ನು ಚಿತ್ರಿಸಲಾಗಿದೆ. ಹಾಗೂ ಅದರ ಆರ್ಭಟದಿಂದ ನಮಗೆ ಮುಕ್ತಿ ದೊರೆಯುವುದು ಎಂಬ ಭರವಸೆಯನ್ನು ಇಲ್ಲಿ ಅಭಿವ್ಯಕ್ತಿಸಲಾಗಿದೆ.)
ರಚನೆ : ಶ್ರೀಮತಿ ಆಶಾಮುನಿರಾಜ್
ಕನ್ನಡ ಶಿಕ್ಷಕಿ
೭೨೦೪೭೭೨೬೩೧
ವಿಳಾಸ: ಕೃಷ್ಣರಾಜಪುರ, ಬೆಂಗಳೂರು-೩೬.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ :9448713659 ವಾಟ್ಸಪ್ ಮಾತ್ರ )
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ