ಶುಕ್ರವಾರ, ಜೂನ್ 25, 2021

ಗುರಿ (ಲೇಖನ ಬರಹ) - ಪೃಥ್ವಿರಾಜ್ ಕುಲಕರ್ಣಿ

 

ಗುರಿ


ಖುಷಿ ತೋರುವ ಆ ಕ್ಷಣಗಳು

ಜೀವನದಲ್ಲಿ ಕನಸಿರಬೇಕು

ಕನಸಿನೊಡನೆ ಮನಸಿರಲಿಬೇಕು

ಕನಸಿಗೆ ತಕ್ಕ ಶ್ರಮ ಇರಬೇಕು 

ಪಾಠವಾಗಿ ವೈಫಲ್ಯವಿರಬೇಕು

ಮಾರ್ಗದರ್ಶನಕ್ಕೆ ಗುರು ಇರಬೇಕು 

ಬೆನ್ನೆಲುಬಾಗಿ ತಂದೆ ಇರಬೇಕು 

ಶಕ್ತಿಯಾಗಿ ತಾಯಿ ಇರಬೇಕು 

ಧೈರ್ಯ ತುಂಬಲು ಸಹೋದರ ಇರಬೇಕು 

ಮುಖದ ನಗು ಆಗಿ ಸಹೋದರಿ ಇರಬೇಕು. 


ಬರಿ ಗುರಿ ಸಾಧಿಸಿದರೆ ಜೀವನ ಸಾರ್ಥಕವೆ ಎನ್ನುವ ಪ್ರಶ್ನೆ ಸಹಜವಾಗಿ ಎಲ್ಲರಿಗೂ ಬಂದಿರುತ್ತೆ.

         ಸಾಮಾನ್ಯವಾಗಿ ನಾವು ಬರಿ ದುಡ್ಡು , ಗುರಿ , ಕನಸ್ಸು ಅಥವಾ ಅನೆಖ ಆಸೆ ಆಕಾಂಶಗಳಲ್ಲಿ ನಾವು ನಮ್ಮ ಸಮಯವನ್ನು ತೊಡಗಿಸುತ್ತೆವೆ ಇದರ ಮಧ್ಯ ಸಂಬಂಧಗಳ,ಸಂಸ್ಕೃತಿಯ ಜತೆಗೆ ಜಿವನಕ್ಕೆ ಖುಷಿ ತರುವ ಚಿಕ್ಕ ಚಿಕ್ಕ ಸಂಗತಿಗಳಿಂದ ನಾವು ಬಹುತೇಕ ದುರಾಗಿರುತ್ತೆವೆ. ವೈಯಸ್ಸಿಗೆ ತಕ್ಕಂತೆ ಪಾಠ ಗುರಿ ದುಡ್ಡಿನ ಹಿಂದೆ ಓಡುವ ನಾವು ಜೀವನದಲ್ಲಿ ನಮ್ಮ ಮುಂದೆ ಹಾದು ಹೋಗುವ ಚಿಕ್ಕ ಚಿಕ್ಕ ಸಂಗತಿಗಳು ಆಂತರಿಕ ಬೆಳವಣಿಗೆ ಮತ್ತು ಮರೆಯಲಾಗದ ಖುಷಿ ತಂದುಕೊಡುತ್ತವೆ ಕೆಲವೊಮ್ಮೆ ಸಣ್ಣ ಪುಟ್ಟ ಸಂಗತಿಗಳು ಜೀವನದ ದಿಕ್ಕನ್ನೆ ಬದಲಾಯಿಸುತ್ತವೆ. 

  ಎಷ್ಟೇ ಸಂಪತ್ತು ಇದ್ದರು ಮಾನಸಿಕ  ಕಿರುಕುಳತೆ ಹೊಂದಿದ್ದರೆ ಅದು ವ್ಯರ್ಥ. ನಾವು ಎಷ್ಟೆ ದುಡ್ಡು ಗಳಿಸಿದರು ಖುಷಿಯನ್ನು ಕೊಂಡುಕೋಳ್ಳಲು ಆಗುವದಿಲ್ಲ ಅದರಲ್ಲೂ ಮಾನಸಿಕ ಕಿರುಕುಳತೆಗೆ ಯಾವ ಮದ್ದು ಕೂಡ ಸಿಗುವದಿಲ್ಲಾ. ಅದಕ್ಕೆ ಪರಿಹಾರವೆಂದರೆ  ಸಂಭಂದಿಗಳಿಂದ ತೊರಿಸಲ್ಪಡುವ ಪ್ರೀತಿ , ದುಖವನ್ನು ಮರಿಸುವ ಖುಷಿಗಳಿಂದ ಮಾತ್ರವೇ ಸಾಧ್ಯವಾಗಿದೆ. ಚಿಕ್ಕದಾಗಿ ಆಚರಿಸುವ ಸಂಗತಿಗಳು ಹಲವಾರು ಸಾಧಕರ ಸಾಧನೆಗೆ ಕಾರಣವಾಗಿವೆ. ಹೀಗೆ ಪರಿವಾರದ ಜತೆಗೆ ಆಚರಿಸುವ ಹುಟ್ಟುಹಬ್ಬ, ಮದುವೆ ವಾರ್ಷಿಕೊತ್ಸವ ಅಥವಾ ಇನ್ನೆತರ ಚುಟುಕು ಆಚರಣೆಗಳು ಅದೆಷ್ಟೋ ಖುಷಿ ತರುತ್ತದೆ. ಅವುಗಳನ್ನು ಬಿಟ್ಟರು ನಮ್ಮ ಕೆಲಸದ ಸಮಯದ ತಕ್ಕಂತೆ ನಾವು ಮಾಡುವ ಊಟವನ್ನು ಪರಿವಾರದ ಸಮೇತ ಎಲ್ಲರೂ ಹರಟೆ ಹೊಡೀತಾ ಮಾಡಿದರೆ ಅದೆಷ್ಟೋ ಮನಸ್ಸಿಗೆ ಹಗುರವಾಗಿರುತ್ತದೆ.

    ಸಹೋದರ ಸಹೋದರಿಯೊಂದಿಗೆ ಹರಟೆ ಹೊಡೆಯುವಾಗ ಸಿಗುವ ಮೋಜು ಯಾವ ವಿಕೆಂಡ್ ಪಾರ್ಟಿಗಳಲ್ಲು ಸುಗುವದಿಲ್ಲ. ಇನ್ನು ನಮ್ಮ ಹುಟ್ಟುಹಬ್ಬ ಅಂದರೆ ನಮ್ಮಗಿಂತ ಕುತೂಹಲ ಮತ್ತು ಉತ್ಸಾಹ ನಮ್ಮ ಸ್ನೇಹಿತರಿಗೆ ಇರುತ್ತದೆ ಮಿತ್ರರ  ಜೊತೆಗಿನ ಹುಟ್ಟುಹಬ್ಬ ಯಾರಿಂದಲೂ ಮರೆಯಲು ಸಾಧ್ಯವಿಲ್ಲ ಇಂತಹ ಅನೆಕ ಚಿಕ್ಕ ಚಿಕ್ಕ ಸಂಗತಿಗಳು ಜೀವನ ಬದಲಾಯಿಸುವದರ ಜತೆಗೆ ಅರ್ಥ ರಹಿತ ಜಿವನಕ್ಕೆ ಅರ್ಥವನ್ನು ನೀಡುತ್ತದೆ.  ಬರಿ ಧನಾತ್ಮಕವಾಗಿ ಅಲ್ಲದೆ ಚಿಕ್ಕ ಸಂಗತಿ ಅಥವಾ ಮಾತುಗಳು ಕೆಲವೊಮ್ಮೆ ವಿಷವಾಗುತ್ತವೆ ಉತ್ಸಾಹ , ಕೂಪ ಅಥವಾ ಸಂತೋಷದಲ್ಲಿ ಆಡುವ ಒಂದು ಚಿಕ್ಕ ಮಾತುಗಳು ಕೆಲವೊಮ್ಮೆ ಭಾಂದವ್ಯಗಳಿಗೆ ವಿಷ ಹಾಗು ಹಲವಾರು ಸಂತೋಷದ ಸಂಗತಿಗಳಿಗೆ ಮುಳ್ಳಾಗಿರಿತ್ತವೆ.



    -   ಪೃಥ್ವಿರಾಜ ಕುಲಕರ್ಣಿ ಪತ್ರಿಕೋದ್ಯಮ ವಿಧ್ಯಾರ್ಥಿ ವಿಜಯಪುರ.



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448241450 ಸಂಪಾದಕರು ವಿ ಮ ಸಾ ಪತ್ರಿಕೆ )

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ..

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ...  ಭೂಮಿಯ ಮೇಲೆ ಹುಟ್ಟಿರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಸಾಧನೆ ಮಾಡಬೇಕೆಂಬ ಹಂ...