ಹೆಣ್ಣಿ ನಮ್ಮೆಲ್ಲರ ಕಣ್ಣು
ಕಸದ ಪೊರಕೆ ಇಲ್ಲವೆಂದರೆ ಮನೆ ಶುದ್ಧವಾಗದು
ಜ್ಞಾನವಿಲ್ಲವವೆಂದೆ ಮನಸ್ಸು ಪರಿಶುದ್ಧವಾಗದು
ಕನಸುಗಳಿಲ್ಲವೆಂದರೆ ಸಾಧನೆ ಬಾರದು
ಸಾಧಿಸುವವನಿಗೆ ನಿರಾಸೆ ಇರಬಾರದು
ಹೆಣ್ಣು ಇಲ್ಲವೆಂದರೆ ಮನೆ ಬೆಳಕಾಗದು
ಹೆಣ್ಣು ಇಲ್ಲದೆ ಸಂಸಾರವು ಉದ್ದಾರವಾಗದು
ಗುಂಡಿಗೆ ಧೈರ್ಯಕ್ಕೆ ಪ್ರತಿಬಿಂಬವೇ ಹೆಣ್ಣು
ಹೆಣ್ಣಿಲ್ಲದೆ ಎಲ್ಲಾ ಕೆಲಸಗಳೂ ಮಣ್ಣು
ಹೆಣ್ಣು ಸೃಷ್ಟಿಯ ಕಣ್ಣು ಜನ್ಮ ಸಂಜೀವಿನಿಯಂತೆ
ಫಲ ಕೊಡುವ ಮರಕ್ಕೆ ಗಂಡು ನೀರಿನಂತೆ
ಹೆಣ್ಣಲ್ಲದೆ ಮನಸ್ಸು ಮನೆಯು ಕತ್ತಲಂತೆ
ಹೆಣ್ಣಿಲ್ಲದೆ ಬದುಕುವೆನೆಂಬುವನು ನಪುಂಸಕನಂತೆ
ಹೆಣ್ಣು ಜನ್ಮದಾತೆ ಕರುಣೆಯ ಕಡಲು
ಹೆಣ್ಣನ್ನು ಹಿಂಸಿಸುವವನು ನರಭಕ್ಷಕರಂತೆ
ಹೆಣ್ಣು ಮನುಜನಿಗೆ ಆನಂದ ಜ್ಯೋತಿಯಂತೆ
ಹೆಣ್ಣು ಸಹ ಗಂಡಿಗೆ ಹಾಲು ಜೇನಂತಿರಬೇಕು
ಬಂದ ಕಷ್ಟ ಸುಖದಲ್ಲಿ ಇಬ್ಬರು ಭಾಗಿಯಾಗಬೇಕು
ನೂವುಗಳು ನೂರೆಂಟಿದ್ದರೂ ಸಹನೆ ಇರಬೇಕು
ಎಲ್ಲಾ ಗುಣಗಳು ಹೆಣ್ಣಲ್ಲಿವೆ ಭೂತಾಯಿಯಂತೆ
ಎಲ್ಲಾ ಕಷ್ಟ ಸುಖಗಳನ್ನು ಹೊತ್ತು ನಿಲ್ಲುವ ಹೆಣ್ಣಂತೆ
ಹೆಣ್ಣಿಗೆ ಅವಹೇಳನ ಮಾಡುವವನು ಕ್ರಿಮಿಗಳಂತೆ
ಲೋಕದೊಳಗೆ ಬದುಕಿದ್ದು ವೇಸ್ಟ್ ಕಸದಂತೆ
ನೀಚ ಬುದ್ಧಿಯ ಬಿಟ್ಟು ಹೆಣ್ಣನ್ನು ಗೌರವಿಸು
ಗಂಡಿಗೂ ಗೌರವ ಕೊಡುವ ಹೆಣ್ಣನ್ನು ಸಂತೈಸು
- ಜಿ ಟಿ ಆರ್ ದುರ್ಗ
ಬಂಗಾರಪೇಟೆ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ