ಕರ್ನಾಟಕದ ಪ್ರತಿಷ್ಠಿತ ಸಂಘಟನೆಯಾದ ಗುರುಕುಲ ಕಲಾ ಪ್ರತಿಷ್ಠಾನ ಕೊಡ ಮಾಡುವ "ಗುರುಕುಲ ಚಾಣಕ್ಯ" ಪ್ರಶಸ್ತಿಗೆ ಶ್ರೀಮತಿ ಗಿರಿಜಾ ಮಾಲಿ ಪಾಟೀಲ ಆಯ್ಕೆ
ನಾಡಿನಾದ್ಯಂತ ಬರಹಗಾರರಿಗೆ ಪ್ರೋತ್ಸಾಹ ನೀಡುವ ಅತ್ಯುತ್ತಮ ಸಂಘಟನೆಯಾದ ಗುರುಕುಲ ಕಲಾ ಪ್ರತಿಷ್ಠಾನ ಕೊಡ ಮಾಡುವ 'ಗುರುಕುಲ ಚಾಣಕ್ಯ' ಪ್ರಶಸ್ತಿಗೆ ಶ್ರೀಮತಿ ಗಿರಿಜಾ ಮಾಲಿ ಪಾಟೀಲರನ್ನು ಆಯ್ಕೆ ಮಾಡಿರುವುದು ವೇದಿಕೆ ನಿಷ್ಕಲ್ಮಷ ಆಯ್ಕೆ ಪ್ರಕ್ರಿಯೆಗೆ ಹಿಡಿದ ಕನ್ನಡಿಯಾಗಿದೆ. ಸಧ್ಯದಲ್ಲೇ ನಡೆಯುವ ಗುರುಕುಲ ಸಾಹಿತ್ಯ ಸಮ್ಮೇಳನದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದು. ವೇದಿಕೆಯು ವಿಭಿನ್ನ ಕ್ಷೇತ್ರದಲ್ಲಿ ವಿಶೇಷ ಪರಿಣಿತಿ ಹೊಂದಿದವರನ್ನು ಗುರುತಿಸಿ ನಿಷ್ಪಕ್ಷಪಾತ ನೆಲೆಯಲ್ಲಿ ಎಲ್ಲರನ್ನೂ ಪ್ರೋತ್ಸಾಹಿಸುತ್ತಿರುವುದು ವೇದಿಕೆಯ ಘನತೆಗೆ ಸಾಕ್ಷಿಯಾಗಿದೆ.
ಶ್ರೀಮತಿ ಗಿರಿಜಾ ಮಾಲಿ ಪಾಟೀಲ ಅವರು ಸ್ವತಃ ಉತ್ತಮ ಸಾಹಿತಿಗಳಾಗಿ ಹಲವು ಪ್ರಕಾರಗಳಲ್ಲಿ ಸಾಹಿತ್ಯ ಕೃಷಿ ಕೈಗೊಂಡಿರುವುದಲ್ಲದೆ ನಾಡಿನ ಖ್ಯಾತ ಗಜಲ್ ಸಾಹಿತಿ, ಹಾಗೂ ಅಂಕಣ ಬರಹಗಾರ್ತಿಯಗಿದ್ದು ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆಯನ್ನು ನಾಡಿನಾದ್ಯಂತ ವಿಸ್ತರಿಸಿ ೨೦ ಕ್ಕೂ ಹೆಚ್ಚು ಜಿಲ್ಲೆಯ ಜಿಲ್ಲಾಧ್ಯಕ್ಷರನ್ನು ನೇಮಿಸಿರುವುದಷ್ಟೇ ಅಲ್ಲದೆ ಸಂಘಟನೆಯನ್ನು ವಿವಿಧ ತಾಲೂಕು ಘಟಕಗಳಿಗೂ ವಿಸ್ತರಿಸಿ ಯುವ ಬರಹಗಾರರನ್ನು ಪ್ರೋತ್ಸಾಹಿಸುವಲ್ಲಿ ನಿರಂತರವಾಗಿ ಪರಿಶ್ರಮ ವಹಿಸುತ್ತಿರುವುದು, ಛಲ ಬಿಡದೆ ಅತ್ಯುತ್ತಮ ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಸಾಕಷ್ಟು ಬರಹಗಾರರಿಗೆ ಪ್ರೋತ್ಸಾಹ ನೀಡುತ್ತಿರುವುದು ಅದರಲ್ಲೂ ತುಂಬಾ ಕಡಿಮೆ ಸಮಯದಲ್ಲಿ ಮಹಿಳೆಯೊಬ್ಬಳು ರಾಜ್ಯದಾದ್ಯಂತ ಛಲದಿಂದ ಸಂಘಟನೆ ಬೆಳಸುತ್ತಿರುವುದನ್ನು ಗುರುತಿಸಿದ
ಗುರುಕುಲ ಘಟಕದ ರಾಜ್ಯಾಧ್ಯಕ್ಷರಾದ ಶ್ರೀ ಹುಲಿಯೂರುದುರ್ಗ ಲಕ್ಷ್ಮಿ ನಾರಾಯಣ ಹಾಗೂ ಆಯ್ಕೆ ಸಮಿತಿಯು ಇವರನ್ನು ಆಯ್ಕೆ ಮಾಡಿರುವುದು ಪ್ರಶಸ್ತಿಗೆ ಸಂಧ ಗೌರವವೂ ಆಗಿದೆ. ಪ್ರಶಸ್ತಿ ಎನ್ನುವುದು ವ್ಯಕ್ತಿಗಳನ್ನು ಪ್ರಾಮಾಣಿಕವಾಗಿ ಗುರುತಿಸುವ ಅತ್ಯುತ್ತಮ ಮಾನದಂಡವಾಗಿರುವುದಲ್ಲದೆ ಮುಂದಿನ ಅವರ ನಡೆಗೆ ಪ್ರೋತ್ಸಹದಾಯಕವಾಗಿ ಬೆಳಕು ಚೆಲ್ಲುವ ಗೌರವವೂ ಹೌದು ಆದ್ದರಿಂದ ಪ್ರಶಸ್ತಿಗಳನ್ನು ನೀಡುವಾಗ ತುಂಬಾ ನಿಷ್ಕಲ್ಮಷ ಧೋರಣೆ ಅನುಸರಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಯಾವತ್ತೂ ತನ್ನ ಕಾರ್ಯ ತತ್ಪರತೆ ಹಾಗೂ ಯುವ ಬರಹಗಾರರನ್ನು ಪ್ರೋತ್ಸಾಹಿಸುವಲ್ಲಿ ಗುರುಕುಲ ಘಟಕವು ರಾಜ್ಯದಲ್ಲಿಯೆ ಮುಂಚೂಣಿಯಲ್ಲಿರುವ ವೇದಿಕೆಯಾಗಿದೆ.
(ಶ್ರೀಮತಿ ಗಿರಿಜಾ ಮಾಲಿ ಪಾಟೀಲ ರಾಜ್ಯಾಧ್ಯಕ್ಷರು, ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ ಇವರಿಗೆ ವಿಚಾರ ಮಂಟಪ ಸಾಹಿತ್ಯ ವೇದಿಕೆಯ ಪರವಾಗಿ ಹೃಯಯಪೂರ್ವಕ ಅಭಿನಂದನೆಗಳು 💐💐💐)
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ