ಪ್ರಕೃತಿ ಪ್ರೇಮ 🌱ಪ್ರಕೃತಿ ಸ್ನೇಹ
ಲಾಲಿ ಹಾಡಿದಳಾಕೆ ಮಣ್ಣಿನ ಮಡಿಲಲಿ
ಜೀವರಾಶಿಯ ಅಪ್ಪಿದಳಾಕೆ ಗಾಳಿಯ ಬಾಹುಗಳಲಿ
ಹಸಿವ ನೀಗಿಸಲು ತುತ್ತು ಉಣಿಸಿದಳಾಕೆ ಫಲದ ಕಾನನದಲಿ
ಬಿಕ್ಕಳಿಕೆ ಬಂದಿತೆ? ಜಲಪಾತ ಹರಿಸಿದಳಾಕೆ ತನ್ನ ಒಡಲಲಿ
ಧನ್ಯಳಾದೆ ನಾ ಹುಟ್ಟಿರಲು ಈ ಅಪೂರ್ವ ಸೃಷ್ಟಿಯಲಿ
ದಿನನಿತ್ಯ ಹೊಸತನಕೆ ಮಾದರಿ ಅವಳು
ಮುಂಜಾವಿನಲಿ ಹೊಸ ಬೆಳಕು ಹರಿಸಿ ಚೈತನ್ಯ ತುಂಬುವಳು
ಚಿಲಿಪಿಲಿ ರಾಗ ಹಾಡಿಸಿ ಜಗವ ಆನಂದದಿ ಕುಣಿಸುವಳು
ನೀಲಿ ಆಗಸದ ವಿಶಾಲ ಹೃದಯದವಳು
ಜೀವಿಗಳು ನೋಡುತಿರಲು,ಎಲ್ಲರ ಮನ ಅರಳಿಸುವಳು
ನಗೆ ಚೆಲ್ಲಿದಳಾಕೆ ಹೂ ಬನದಿ
ಜುಳು ಜುಳು ನಾದ ನುಡಿಸಿದಳಾಕೆ ಜಲದಿ
ಹೊತ್ತಳಾಕೆ ನಮ್ಮೆಲ್ಲರನು ಕರುಣೆಯದಿ
ಭಾವನೆಗಳ ಬಣ್ಣ ತುಂಬಿದಳಾಕೆ ಈ ಜಗದಿ
ಜೀವಿಸೋಣ ಅವಳ ಪ್ರೀತಿಗೆ ಪಾತ್ರರಾಗಿ,ಪ್ರೇಮದಿ
ಬೇಸಿಗೆಯಲಿ ತನು ಬೆವರಿಸುವಳು
ಮುನಿದರೆ ತನುವ ಸುಡುವಳು,ಜ್ವಾಲೆ ಹರಿಸುವಳು
ವಸಂತ ಮಾಸದಿ ಯುಗಾದಿ ಸಡಗರ ತುಂಬುವಳು
ಮಳೆಗಾಲದಿ,ಚಳಿಗಾಲದಿ ಭೂ ತಂಪಾಗಿಸುವಳು
ಮುನಿದರೆ ಪ್ರವಾಹದಿ ನುಂಗುವಳು
ಕಂಡಿರಾ ಅವಳ ಪೀತಿಯ
ನೊಂದರು ಪ್ರೀತಿ ಉಣಿಸುತಿಹಳು
ನಿಮ್ಮ ಕ್ರೂರ ವರ್ತನೆಯ ಕ್ಷಮಿಸುತಿಹಳು
ಅಮಾನವೀಯ ಕ್ರಿಯೆಗೆ ಶಿಕ್ಷಿಸುತಿಹಳು
ಮಿತಿ ಮೀರಿದಾಗ ಮಹಾಕಾಳಿಯೇ ಅವಳು
ಮೆರೆಯುವುದಾದರು ಏಕೆ ಇನ್ನೂ
ಅವಳದೇ ಸೃಷ್ಟಿ ನಾವು
ಸದ್ಮಾರ್ಗದಲಿ ನಡೆಯೋಣ ಇನ್ನು
ಅವಳಿಂದಲೇ ಸ್ವಲ್ಪ ವಿದ್ಯೆ ಕಲಿತ ನಾವು
ಮಗದೊಮ್ಮೆ ನಮಿಸೋಣ ಪ್ರಕೃತಿ ಮಾತೆಗೆ ನಾವಿನ್ನು
"ಉಳಿಸಿಕೊಳ್ಳೋಣ,ಬೆಳೆಸೋಣ ,ರಕ್ಷಿಸೋಣ ಈ ನಮ್ಮ ಅದ್ಭುತ ಪರಿಸರವನ್ನು🙏
ಸದಾ ಜೀವಿಸೋಣ ಈ ಪ್ರಕೃತಿ ಸ್ನೇಹದಲಿ ಹಾಗು ಪ್ರಕೃತಿ ಪ್ರೇಮದಲಿ"
✍ಯೋಗೇಶ್ವರಿ.ಎಸ್.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಚೆನ್ನಾಗಿದೆ ಪ್ರಕೃತಿ ಸೌಂದರ್ಯದ ಕವನ
ಪ್ರತ್ಯುತ್ತರಅಳಿಸಿ