॥ಶಿವಸ್ತುತಿ ॥
ಓಂ ಓಂ ಓಂ ನಮ ಶಿವಾಯ ।
ಅಯೋನಿಜ ಆಕಾಯ ಅಗೋಚರ ಶಿವ ।
ಅಜನ್ಮ ಅದೃಶ್ಯ ಅಹಿಂಸಾತ್ಮಕ ಶಿವ।
ಇವನೇ ನಮ್ಮ ಪರಮಾತ್ಮ ॥
ಜನನಿ ಗರ್ಭಧಿ ಜನಿಸದ ಅಯೋನಿಜ ।
ಜನನ ಮರಣ ಚಕ್ರವಿರದ ಜಗದೀಶ್ವರ ।
ದೃಷ್ಟಿಗೆ ಕಾಣದ ಸೃಷ್ಟಿಕರ್ತನಿವ ಅಗೋಚರ ।
ಇವನೇ ನಮ್ಮ ಪರಮಾತ್ಮ ॥
ಜ್ಯೋತಿಗಳ ಪರಂಜ್ಯೋತಿ ಕೈಲಾಸಪತಿ ।
ಆತ್ಮಗಳ ಚೇತನಶಕ್ತಿ ಪಶುಪತಿ ।
ನಿರಾಕಾರ ನಿರ್ವರ್ಣ ನೀಲಕಂಠ ।
ಇವನೇ ನಮ್ಮ ಪರಮಾತ್ಮ ॥
ದೇವಾತ್ಮ ಧರ್ಮಾತ್ಮರ ಅಶುತೋಷ ।
ಪುಣ್ಯಾತ್ಮ ಮಹಾತ್ಮರ ಮಾರ್ಕಂಡೇಯ ।
ಪಾಪಾತ್ಮಾ ದುಷ್ಟಾತ್ಮಗಳ ವಿನಾಶಕ।
ಇವನೇ ನಮ್ಮ ಪರಮಾತ್ಮ ॥
ತ್ಯಾಗ ಜೀವನದ ಮಹಾತ್ಮರ ಪಿತ।
ದಾನಧರ್ಮದ ಪುಣ್ಯಾತ್ಮರ ಜನಕ।
ಧರ್ಮಸಂಸ್ಥಾಪಕ ಧರ್ಮಾತ್ಮರ ಪ್ರಜಾಪಿತ ।
ಇವನೇ ನಮ್ಮ ಪರಮಾತ್ಮ ॥
ವಿಶ್ವಾಂಭರ ಮಹೇಶ್ವರ ಅರ್ಧನಾರೀಶ್ವರ ।
ಶಿವ ಪರಶಿವ ರುದ್ರದೇವ ।
ಭೋಲೇನಾಥ ಭೋಲೇಬಾಬಾ ಭೀಮಾಶಂಕರ ।
ಇವನೇ ನಮ್ಮ ಪರಮಾತ್ಮ ॥
- ಶ್ರೀಮತಿ ಸುಮಂಗಲಾ ಕೃಷ್ಣ ಕೊಪ್ಪರದ
ಶಿಕ್ಷಕ ಎ.ಸಿ.ಒ ಕನ್ನಡ ಮಾಧ್ಯಮ ಪ್ರೌಢಶಾಲೆ ಇಲಕಲ್ಲ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ