ಸೋಮವಾರ, ಜುಲೈ 19, 2021

ಆನ್ ಲೈನ್ ಪಾಠ ಮಾಡುವ ಅನುಭವ (ಲೇಖನ) - ಶ್ರೀಮತಿ ಸವಿತಾ ಆರ್ ಸ್ವಾಮಿ, ಬೆಂಗಳೂರು.

ಆನ್ ಲೈನ್ ಪಾಠ ಮಾಡುವ ಅನುಭವ.

ತರಗತಿಯಲ್ಲಿ ಪಾಠ ಮಾಡುವ ಅನುಭವ  ಒಂದು   ಬಗೆಯದ್ದಾಗಿದ್ದರೆ ಕರೋನಾ ವೆಂಬ ಮಹಾಮಾರಿಯಿಂದ ಉಂಟಾಗಿ ಮುಂತಾದ ಅನಾನುಕೂಲತೆಯಿಂದ ನಮಗೆ ಹೊಸದೊಂದು ಮಾರ್ಗ ತೆರೆದುಕೊಳ್ಳುವುದು ಎಂಬುವುದು ಯಾರು ಸಹ ಊಹಿಸದ ಪಾಠ ಮಾಡುವ ರೀತಿ ನಮ್ಮ ಮುಂದೆ ಧಿಡೀರನೆ ಎಂದು ಅಪ್ಪಳಿಸದಂತೆ ಬರುವುದು ಎಂದು ಊಹಿಸಲಾರದ ಸಂದರ್ಭವೊಂದು  ಬಂದೊದಗಿದ್ದು.
ಆದರೂ ನಮ್ಮ ಧೈರ್ಯಕ್ಕೆ ನಾವು ಮೆಚ್ಚಲೇಬೇಕು .ಯಾವುದೇ ತಿರಸ್ಕಾರ ಇಲ್ಲದೆ ನಾವು ಶಿಕ್ಷಕರು ಎಲ್ಲಾ ರೀತಿಯಿಂದ ಪಾಠ ಮಾಡಲು ಸಿದ್ಧ ಯಂತೆ ಮೊದಲ ಹೆಜ್ಜೆ ಇಡುತ್ತಾ ಬಂದೆವು  ಕಳೆದ  ಒಂದು ವರ್ಷದಿಂದ .ಒಂದು ಕಡೆ ಕರೋನಾ   ಅಲೆಗಳು ಜಗಕ್ಕೆ  ಅಪ್ಪಳಿಸಿದರೆ ಈ ಕಡೆ ಶಿಕ್ಷಕರ ಜೀವನದಲ್ಲಿ ಕೂಡ ತಲ್ಲಣ ಉಂಟುಮಾಡಿದ ಆನ್ ಲೈನ್ ಪಾಠ ಮಾಡುವ ಹೊಸ ಅಲೆಗಳು .ಶಿಕ್ಷಕರ ಜೀವನದಲ್ಲಿ ಅಬ್ಬರಿಸಿದಂತೆ ಅದಕ್ಕೆ ಯಾವುದೇ ತಿರಸ್ಕಾರಗಳು ಇಲ್ಲದೆ.ಎಲ್ಲಾ  ಶಿಕ್ಷಕರು ಅಳವಡಿಸಿಕೊಂಡದ್ದು    ಒಂದು ಮಹತ್ವಪೂರ್ಣವಾದ ಸಂಗತಿ ವೆಂದು ಹೇಳಬಹುದಾಗಿದೆ .ಶಿಕ್ಷಕರು  ಹಲವು ವರ್ಷಗಳಿಂದ ಪಾಠ ಮಾಡುವ ಹಳೆಯ ಪದ್ಧತಿಯು ತನ್ನ ಜೀವನದ ಅಂಗದಂತೆ ಭಾವಿಸಿಕೊಂಡಿರುವ ವಿಧಾನಗಳು ಇಂದು ಬದಲಾಗಿವೆ.ಶಿಕ್ಷಕರಿಗೆ ಕೇವಲ ಪುಸ್ತಕ ಮತ್ತು ಕಪ್ಪು ಬೋರ್ಡು ಸುಣ್ಣದ ಬಳಪ   ಹಳೆಯ ಸಾಮಗ್ರಿಗಳಿಂದ .  ವಿದ್ಯಾರ್ಥಿಗಳ ನೇರ ಚಟುವಟಿಕೆಗಳು ಆಲಿಸಿ ನೋಡಿ ತಿದ್ದಿ ಪಾಠ ಮಾಡುವ ಪದ್ಧತಿಯು ಅದಾಗಿತ್ತು .ಇಂದು ಅಮೂರ್ತವಾದ ರೀತಿಯಲ್ಲಿ ವಿದ್ಯಾರ್ಥಿಗಳ ನೇರ ಸಂಪರ್ಕ ಇಲ್ಲದೆ ಒಂದು ತಂತ್ರಜ್ಞಾನದ ಮೂಲಕ ಪಾಠ ಮಾಡುವ ಮಾಡುವ ಹೊಸ ಪದ್ಧತಿ ಅಳವಡಿಸಿಕೊಂಡಿದ್ದು .    ವಿದ್ಯಾರ್ಥಿಗಳಿಗೆ ಸರಿ ಯಾದ ರೀತಿಯಲ್ಲಿ ಜ್ಞಾನ ಲಭ್ಯವಾಗುವಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ . ಎಲ್ಲ ಶಿಕ್ಷಕರ ಮೇಲೆ ದಿಢೀರಂತೆ ಅಪ್ಪಳಿಸಿ ಇಡೀ ಹೊಣೆಗಾರಿಕೆ .ಇದರಿಂದ ವಿಮುಖರಾಗದೆ. ನಾವು ಸಕ್ರಿಯವಾಗಿ ನಮ್ಮನ್ನು ನಾವು ತೊಡಗಿಸಿಕೊಂಡ ವಿಚಾರ ಶ್ಲಾಘನೀಯವಾಗಿದೆ. ವೆಂದು ಹೇಳಿದರೂ ಅತಿಶಯೋಕ್ತಿ ಎನಿಸಲಾರದು    .
ಮೊಬೈಲ್ ಕಂಪ್ಯೂಟರ್ ಗಳ ತಂತ್ರಜ್ಞಾನದಿಂದ ದೂರ ಉಳಿದ ಅನೇಕ ಶಿಕ್ಷಕರು ಇಂದು ಅದರ ಆಪ್ತತೆಗೆ ಒಳಗಾಗಿ ತನ್ನ ಸೇವೆಯನ್ನು ನೀಡುವ ಪ್ರಯತ್ನದಲ್ಲಿ ಎಲ್ಲರೂ ಮುಂದಾಗಿದ್ದಾರೆ . ಜೂಮ್, ಗೂಗಲ್ ಮೀಟ್ ,ಟೀಮ್ , ಹೀಗೆ ನಾನಾ ರೀತಿಯ ಹಲವಾರು ಮಾಧ್ಯಮಗಳ ಮೂಲಕ ತಮ್ಮ ಪಾಠ ಪ್ರವಚನವನ್ನು ಸೂಕ್ತ ರೀತಿಯಲ್ಲಿ ಲಭ್ಯವಾಗುವಂತೆ ನೋಡಿಕೊಳ್ಳುತ್ತಿದ್ದಾರೆ .ಇದು ಸೋಜಿಗದ ವಿಷಯ ಆಗಿದ್ರೂ ಕೂಡ ಇದು ಪ್ರಸ್ತುತ ವಿಷಯವಾಗಿದೆ .ಆನ್ ಲೈನ್ ಪಾಠ ಮಾಡುವುದರ ಹಿಂದೆ ಅನೇಕ ಸಣ್ಣಪುಟ್ಟ ತೊಂದರೆಗಳು ಉಂಟಾಗುವುದು ಸಹಜ .ಆದ್ದರಿಂದ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ನಮ್ಮ ಸಮಾಜದಲ್ಲಿ ಶಿಕ್ಷಣ ನೀಡುವ ಪದ್ದತಿಯೂ ರೂಢಿಸಿಕೊಂಡೆವು ಇಂದು . ಎಲ್ಲಾ ವಿಷಯಕ್ಕೂ ಸಾಧಕ ಬಾಧಕಗಳು ಇದ್ದೇ ಇರುತ್ತದೆ ಆದರೂ ಎಲ್ಲವೂ ಗೆಲ್ಲುತ್ತಾ ಸರಿದೂಗಿಸಿಕೊಂಡು ಹೋಗುವುದು ನಮ್ಮೆಲ್ಲರ ಹೊಣೆ ಅದೇ ಜೀವನದ ಮಾರ್ಗವೂ ಹೌದು .
ಪಾಲಿಗೆ ಬಂದದ್ದು ಬರಲಿ ಮೇಲೆ ದೇವರ ದಯೆ ವಿರಲಿ .
    - ಸವಿತಾ ಆರ್ ಸ್ವಾಮಿ.





(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...