ಘಟಕ ಉದ್ಘಾಟನೆ ಹಾಗೂ ಲಾವಣಿ ವಾಚನ ಕಾರ್ಯಕ್ರಮದ ವರದಿ : ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ - ಕರ್ನಾಟಕ.
'ಎಳೆಯ ವಯಸ್ಸಿನ ಅಭಿವೃದ್ಧಿಯ ಹರಿಕಾರ ಮುಮ್ಮಡಿ ಕೃಷ್ಣರಾಜ ಒಡೆಯರು '
ದಿನಾಂಕ 18: 07: 2021 ರ ಭಾನುವಾರ ಮೈಸೂರು ಜಿಲ್ಲೆ ತಿ. ನರಸೀಪುರದಲ್ಲಿ ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆಯ ಉದ್ಘಾಟನೆ ಪ್ರಯುಕ್ತ ರಾಜ್ಯ ಮಟ್ಟದ ' ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದ ಸಾಹಿತ್ಯ ಮತ್ತು ಸಂಸ್ಕೃತಿ ' ವಿಶೇಷ ಉಪನ್ಯಾಸ ಕಾರ್ಯಕ್ರಮ ಮತ್ತು ರಾಜ್ಯ ಮಟ್ಟದ ಸ್ವರಚಿತ ಲಾವಣಿ ರಚನೆ ಮತ್ತು ವಾಚನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲ ಹಳೆ ಹೊಸ ಯುಗಗಳ ಸಂಧಿ ಕಾಲವೆಂದೇ ವರ್ಣಿಸಲಾಗಿದೆ. ಆಂಗ್ಲೋ ಮೈಸೂರು ಯುದ್ಧಗಳಿಂದ ತತ್ತರಿಸಿದ ನಾಡಿನ ರಾಜಕೀಯ ಅಸ್ಥಿರತೆಯನ್ನು ಹೋಗಲಾಡಿಸಿ ಸ್ಥಿರತೆಯನ್ನು ಕಾಪಾಡಿಕೊಳ್ಳಲು ವ ಗುರುತರವಾದ ಜವಾಬ್ದಾರಿಯ ಕಾಲವದು. ಅಲ್ಲದೆ ಸಾಮಾನ್ಯ ಜನರಿಗೆ ಸಾಹಿತ್ಯ, ಸಂಗೀತ, ಕಲೆ, ಇವೆ ಮುಂತಾದ ಸಿರಿವಂತಿಕೆಯನ್ನು ಮೂಡಿಸಿದ ಕೀರ್ತಿ ಮುಮ್ಮಡಿ ಕೃಷ್ಣರಾಜ ಒಡೆಯರ ಆಡಳಿತದ ಕಾಲ ಘಟ್ಟಕ್ಕೆ ಸಲ್ಲುತ್ತದೆ. ಇವರ ಆಡಳಿತ ಕಾಲವು ಔದಾರ್ಯ, ಕ್ಷಮಾಶೀಲತೆ, ತ್ಯಾಗ, ಮುಂತಾದ ಮೌಲ್ಯಾಧಾರಿತ ಬೆಳಕನ್ನು ಜನರಿಗೆ ಕಟ್ಟಿಕೊಟ್ಟ ಮತ್ತು ಇತಿಹಾಸ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡ ಬೇಕಾದದು. ಶ್ರೀ ತತ್ವ ನಿಧಿ, ಸೌಗಂಧಿಕಾ ಪರಿಣಯ ಇವೆ ಮುಂತಾದ ಮೌಲ್ಯಾಧಾರಿತ ಕೃತಿಗಳನ್ನು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡುತ್ತಾರೆ. ಇಷ್ಟೆ ಅಲ್ಲದೆ, ಅನೇಕ ಕವಿಗಳಿಗೆ ಆಶ್ರಯವನ್ನು ನೀಡಿ ಸಾಹಿತ್ಯ ರಚನೆಗೆ , ಪ್ರತಿಭೆಗಳಿಗೆ ಆದ್ಯತೆ ನೀಡಿದ್ದು ಬಹಳ ವಿಶೇಷವಾದುದು. ಬಹು ಭಾಷೆಗಳಲ್ಲಿ ಕೃತಿಯ ರಚನೆಗೆ ಅವಕಾಶ ನೀಡಿದ ಇವರನ್ನು ಸಾರಸ್ವತ ರತ್ನ ಎಂದು ಕೂಡ ಕರೆಯಬಹುದು. ಇನ್ನು ಸಾಂಸ್ಕೃತಿಕವಾಗಿ ನೃತ್ಯ, ರಂಗಭೂಮಿ, ಯಕ್ಷಗಾನ, ಸಂಗೀತ ಮುಂತಾದ ಕ್ಷೇತ್ರಗಳ ಏಳಿಗೆಗಾಗಿ ಶ್ರಮಿಸಿದ್ದರು. ಇವರ ಕಾಲದಲ್ಲಿ ಪ್ರಸಿದ್ಧ ವೀಣೆ ಶೇಷಣ್ಣ ನವರು, ನೃತ್ಯಗಾರ್ತಿ ಜಟ್ಪಿ ತಾಯಮ್ಮ ಮುಂತಾದ ಖ್ಯಾತ ಕಲಾವಿದರು ಇದ್ದರು. ಅಲ್ಲದೆ ಗಂಜೀಫಾ ಕಲೆಯ ಮೂಲಕ ದೈವ ಭಕ್ತಿ, ವೈಭವದಿಂದ ಕೂಡಿದ ಅನೇಕ ಚಿತ್ರಗಳ ಅನಾವರಣ ಇವೆ ಮುಂತಾದ ಹೊಸ ಆಯಾಮಗಳನ್ನು ಬೆಳಕಿಗೆ ತಂದರು.
ಇವರ ಒಟ್ಟಾರೆ ಆಡಳಿತದ ಸೇವೆಯನ್ನು ನವರತ್ನ ಸೇವೆಗಳ ಸರದಾರ ಎಂದು ಕರೆಯಬಹುದು. ಏಕೆಂದರೆ ಕೃಷಿ, ಧರ್ಮ, ಸಾಹಿತ್ಯ, ಸಂಸ್ಕೃತಿ ಮುಂತಾದ ಕ್ಷೇತ್ರಗಳ ಅಭಿವೃದ್ಧಿಗೆ ಯುವಕರಾಗಿ ಹೆಚ್ಚು ಆದ್ಯತೆ ನೀಡಿ, ಸೇವರತ್ನ, ಧರ್ಮರತ್ನ, ಕೀರ್ತಿರತ್ನ, ದಾನರತ್ನ, ಸಾರಸ್ವತ ರತ್ನ, ಉಪಕಾರ ರತ್ನ ಎಂದು ಕರೆಸಿಕೊಂಡಿದ್ದರು ಎಂದು ಇತಿಹಾಸ ತಜ್ಞರು ವರ್ಣಿಸಿದ್ದಾರೆ .
ಇಂತಹ ಅಮೂಲ್ಯ ರತ್ನದ ಜನುಮ ದಿನದ ಸಂಸ್ಮರಣೆಯ ಪ್ರಯುಕ್ತ ಮತ್ತು ತಿ. ನರಸೀಪುರದಲ್ಲಿ ಉದ್ಘಾಟನೆ ಗೊಳ್ಳುತ್ತಿರುವ ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ ಘಟಕ ಹಮ್ಮಿಕೊಂಡಿರುವ * ಮುಮ್ಮಡಿ ಕೃಷ್ಣರಾಜ ಕಾಲದ ಸಾಹಿತ್ಯ ಮತ್ತು ಸಂಸ್ಕೃತಿ * ವಿಶೇಷ ಉಪನ್ಯಾಸ ಬಹಳ ಮಹತ್ವವಾದುದು ಎಂದು ಆಧ್ಯಾತ್ಮಿಕ, ಇತಿಹಾಸ, ವಿಮರ್ಶಾ ಚಿಂತಕರು, ಮೈಸೂರು ಜಿಲ್ಲಾ ಘಟಕದ ಗೌರವ ಅಧ್ಯಕ್ಷರು ಆದ
ಮುಮ್ಮಡಿ ಕೃಷ್ಣರಾಜ ಒಡೆಯರ ಸಾಹಿತ್ಯ ಮತ್ತು ಸಂಸ್ಕೃತಿಯ ಸಿರಿವಂತಿಕೆಯನ್ನು ಸಾರುವುದರ ಜೊತೆಗೆ, ಸಾಹಿತ್ಯ ಶ್ರೀ ಮಂತಿಕೆಯನ್ನು ಬಹು ಎತ್ತರಕ್ಕೆ ಬೆಳೆಯುವಂತೆ ಮಾಡಿದ ಇವರ ಜನ್ಮ ದಿನದ ಅಂಗವಾಗಿ ಈ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ನೂತನವಾಗಿ ಪ್ರಾರಂಭವಾಗುವ ಮೈಸೂರು ಜಿಲ್ಲೆ ಯ ತಿ. ನರಸೀಪುರದ ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ ಹಮ್ಮಿಕೊಂಡಿರುವುದು ವಿನೂತನವಾಗಿದೆ. ಅಲ್ಲದೆ ಇತಿಹಾಸದ ವೀರಗೀತೆಯಾದ , ಕಥನಾತ್ಮಕವಾದ ಸಾಹಿತ್ಯ ಪ್ರಕಾರ ಲಾವಣಿ. ಇದರ ರಚನೆ ಅಷ್ಟು ಸುಲಭವಲ್ಲ ಇತಿಹಾಸ ಅರಿತರೆ ಮಾತ್ರ ಸಾಧ್ಯ. ಲಾವಣಿ ಎಂದರೆ ಪುಟ್ಟದೊಂದು ಕಥೆ ಹೇಳುವಂತೆ, ಹಾಡಲು ಮಧುರವಾಗಿ , ಜನರ ಮನಮಟ್ಟುವ ಜನಪದವೇ ಲಾವಣಿ. ಇದಕ್ಕೆ ಮುನ್ನೂರು ವರ್ಷದ ಇತಿಹಾಸವಿದೆ. ಕನ್ನಡ ಸಾಹಿತ್ಯ ಸಂಸ್ಕೃತಿಗೆ ಕರ್ನಾಟಕ ರಾಜಮನೆತನಗಳು ಅಪಾರ ಕೊಡುಗೆಯನ್ನು ನೀಡಿದೆ ಇಂತಹ ಕೊಡುಗೆಯನ್ನು ಕುರಿತು ರಾಜ್ಯ ಮಟ್ಟದ ಸ್ವರಚಿತ ಲಾವಣಿ ರಚನೆ ಮತ್ತು ವಾಚನ ಕಾರ್ಯಕ್ರಮವನ್ನು ತಾಲೂಕು ಘಟಕದಿಂದ ಹಮ್ಮಿಕೊಳ್ಳಲಾಗಿದೆ.
ಎಂದು ಶ್ರೀ ಸಿದ್ಧೇಶ್ವರ ಸಾಹಿತ್ಯ ವೇದಿಕೆಯ ರಾಜ್ಯ ಸಂಚಾಲಕರು ಮತ್ತು ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀಮತಿ ಶೋಭಾ ನಾಗಭೂಷಣ ಅವರು ಪ್ರಾಸ್ತಾವಿಕ ನುಡಿಯಲ್ಲಿ ತಿಳಿಸಿದರು.
ಕವಿ ಅಥವಾ ಸಾಹಿತಿ ಸಮಾಜದ ಮೂರನೇ ಕಣ್ಣು, ಇಂತಹ ಮನಗಳು ಬಹಳ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ತಮ್ಮ ಕವನ ವಾಚನದಷ್ಟೆ ,ಇತರ ಕವಿಮನಗಳ ಕವಿತೆಯನ್ನು ಆಲಿಸಿ ಬೇಕು ಇದು ಸಾಹಿತ್ಯ ರಚನೆಗೆ ಅದಮ್ಯ ಪದ ಸಂಪತ್ತನ್ನು ತಮ್ಮದಾಗಿಸುತ್ತದೆ. ಜ್ಞಾನೇಂದ್ರೀಯಗಳ ಅರಿವಿನ ಬಳಕೆಗೆ ಇದು ಅನುವು ಮಾಡಿಕೊಡುತ್ತದೆ. ಇದೆ ನಮ್ಮ ವೇದಿಕೆಯ ಮೂಲ ಉದ್ದೇಶ. ಈ ನಿಟ್ಟಿನಲ್ಲಿ ಹೊಸದಾಗಿ ಉದ್ಘಾಟನೆಯಾದ ಮೈಸೂರು ಜಿಲ್ಲೆಯ ತಿ. ನರಸೀಪುರ ಘಟಕವು ಮೂಗೂರು ಕುಮಾರಸ್ವಾಮಿ ಗೌರವಾಧ್ಯಕ್ಷರ ನೇತೃತ್ವದಲ್ಲಿ ಮತ್ತು ಮೈಸೂರು ಜಿಲ್ಲಾ ಸಹಯೋಗದಲ್ಲಿ ಉತ್ತಮ ಕಾರ್ಯಕ್ರಮ ಹಾಗು ರಾಜ್ಯ ಮಟ್ಟದ ಸ್ವರಚಿತ ಲಾವಣಿ ರಚನೆ ಮತ್ತು ವಾಚನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿರುವುದು ಶ್ಲಾಘನೀಯ ಎಂದು ರಾಜ್ಯ ಘಟಕದ ಸಂಸ್ಥಾಪಕ ಅಧ್ಯಕ್ಷರು, ಖ್ಯಾತ ಲೇಖಕರು, ಗುರುಕುಲ ಚಾಣಕ್ಯ ಪ್ರಶಸ್ತಿಗೆ ಭಾಜನರಾದ ಶ್ರೀಮತಿ ಗಿರಿಜಾ ಮಾಲಿ ಪಾಟೀಲ ಅವರು ತಮ್ಮ ಅತಿಥಿ ನುಡಿಯಲ್ಲಿ ತಿಳಿಸಿದರು.
ಸಾಹಿತ್ಯ ಪ್ರಕಾರಗಳಲ್ಲಿ ಅನೇಕ ಪ್ರಕಾರಗಳಿವೆ. ಇಂದಿನ ಕಾರ್ಯಕ್ರಮದಲ್ಲಿ ಮೂವತ್ತಕ್ಕೂ ಹೆಚ್ಚಿನ ಕವಿ ಮನಸ್ಸುಗಳು ಸ್ವರಚಿತ ಲಾವಣಿ ರಚನೆ ಮತ್ತು ವಾಚನ ಮಾಡಿದರು ಅದರಲ್ಲೂ ಹಾಡಿನ ದಾಟಿಯಲ್ಲಿ ವಾಚಿಸಿದು ವಿಶೇಷ ವಾದುದು. ಆದರೆ ಕಟ್ಟಿದ್ದೆಲ್ಲವು ಲಾವಣಿಯಾಗಲಾರದು. ಇದರ ರಚನೆಯಲ್ಲಿ ಬಹಳ ಸೂಕ್ಷ್ಮವಾಗಿ ವಿಷಯವಸ್ತಗಳ ಅಧ್ಯಯನ, ಬರವಣಿಗೆ ಶೈಲಿಯಲ್ಲಿನ ಪದ ಬಳಕೆ, ಲಯ ಮುಂತಾದ ಮುಖ್ಯ ಅಂಶಗಳುನ್ನು ಅರಿಯಬೇಕು. ನಿಜಕ್ಕೂ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗೆ ಮೈಸೂರು ಒಡೆಯರ ಮನೆತನದ ಕೊಡುಗೆ ಅಪಾರ ಅದನ್ನು ಕೇವಲ ಸೀಮಿತ ಅವಧಿಯಲ್ಲಿ ವರ್ಣಿಸಲು ಸಾಧ್ಯವಿಲ್ಲ . ಅಲ್ಲದೆ ಸಾಮಾನ್ಯ ಜನರ ಸಾಹಿತ್ಯ ಬರೆಯಲು ಕಾರಣೀಭೂತರಾದದು ಮೈಸೂರು ಒಡೆಯರ ಮನೆತನ ಎಂದು ಶ್ರೀ ಸಿದ್ಧೇಶ್ವರ ಸಾಹಿತ್ಯ ವೇದಿಕೆ ತಿ. ನರಸೀಪುರದ ತಾಲೂಕು ಘಟಕದ ಗೌರವ ಅಧ್ಯಕ್ಷರಾದ ಮೂಗೂರು ಕುಮಾರಸ್ವಾಮಿ ಅವರು ಅಧ್ಯಕ್ಷರ ನುಡಿಯಲ್ಲಿ ತಿಳಿಸಿದರು.
ಈ ವೇದಿಕೆಯ ರಾಜ್ಯ ಪತ್ರಿಕೆ ಕಾರ್ಯದರ್ಶಿಗಳಾದ ಬಾಗಳಿ ಮಹೇಶ್ , ತಾಲೂಕು ಉಪಾಧ್ಯಕ್ಷರಾದರ ಶ್ರೀಮತಿ ರಜನಿ, ಜಂಟಿ ಕಾರ್ಯದರ್ಶಿ ನವೀನ್ ಶಂಭು, ತೀರ್ಪುಗಾರರಾಗಿ ಶ್ರೀಯುತ ಹಾಸನದ ಸಾಹಿತಿ ಚೆನ್ನೆಗೌಡರು, ಶ್ರೀಯುತ ಮಹದೇವಪ್ರಸಾದ್ ಕೆಸ್ತೂರು ( ವಿಲಾಸ್) ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಶ್ರಿ ಸಿದ್ದೇಶ್ವರ ಸಾಹಿತ್ಯ ವೇದಿಕೆ ಮೈಸೂರು ಜಿಲ್ಲಾ ಘಟಕದ ತಾಂತ್ರಿಕ ಹಾಗೂ ಪದಾಧಿಕರಿಗಳಾದ ಮಧುಶ್ರೀ ಅವರು ಕಾರ್ಯಕ್ರಮದ ಗಣ್ಯರನ್ನು, ಕವಿ ಮನಗಳನ್ನು ಹೃದಯ ತುಂಬಿ ಸ್ವಾಗತಿಸಿದರು.
ಕಾರ್ಯಕ್ರಮ ಯಾವುದೇ ಅಡೆತಡೆಯಿಲ್ಲದೆ ನಿರ್ವಿಘ್ನವಾಗಿ ನಡೆಯಲು ಕುವೆಂಪು ಅವರ ಸಚ್ಚಿದಾನಂದ ಗೀತೆಯನ್ನು ಹಾಡುವುದರ ಮೂಲಕ ಮೈಸೂರು ಜಿಲ್ಲಾ ಘಟಕದ ಸಂಚಾಲಕರಾದ ಶ್ರೀ ಪ್ರೇಮ್ ಕುಮಾರ್ ಕೆ ಅವರು ಪ್ರಾರ್ಥನೆ ಮಾಡಿದರು.
ಇಡೀ ಕಾರ್ಯಕ್ರಮವು ತಿ. ನರಸೀಪುರದ ತಾಲೂಕು ಘಟಕದ ಉಪಾಧ್ಯಕ್ಷರಾದ ಶ್ರೀಮತಿ ರಜನಿ ಅವರ ಅತ್ಯುತ್ತಮವಾದ ನಿರೂಪಣೆಯ ನಿರ್ವಹಣೆಯಲ್ಲಿ ಮೂಡಿ ಬಂತು.
ಈ ಕಾರ್ಯಕ್ರಮದಲ್ಲಿ ಬೆಳಗಾವಿ, ಚಿತ್ರದುರ್ಗ, ಮೈಸೂರು, ಮಂಡ್ಯ, ಧಾರವಾಡ, ಹುಬ್ಬಳ್ಳಿ, ಕಲ್ಬುರ್ಗಿ, ರಾಯಚೂರು, ಮಂಗಳೂರು, ಮಂಡ್ಯ, ಚಾಮರಾಜನಗರ, ಕೊಡಗು, ಹಾಸನ ಮುಂತಾದ ಜಿಲ್ಲೆಗಳ, ತಾಲೂಕಿನ, ಗ್ರಾಮೀಣ ಲಾವಣಿ ಕಾರರು ಸ್ವರಚಿತ ಲಾವಣಿ ರಚಿಸಿ
ರಾಗಬದ್ಧವಾಗಿಯೂ ಕೂಡ ಹಾಡಿ ಕನ್ನಡದ ಪ್ರಸಿದ್ಧ ರಾಜಮನೆತನಗಳ ಐತಿಹಾಸಿಕ ಕೊಡುಗೆಯನ್ನು ಸಾರಿದರು.
ಇಡೀ ಕಾರ್ಯಕ್ರಮವು ಸುಮಾರು ನಾಲ್ಕು ಗಂಟೆಗಳ ಕಾಲ ಆನ್ಲೈನ್ ಗೂಗಲ್ ಮೀಟ್ ನಲ್ಲಿ ನಡೆದದ್ದು ವಿಶೇಷವಾಗಿತು.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ