*ತನುಶ್ರೀ ಪ್ರಕಾಶನ ಸಂಸ್ಥೆ ಸೂಲೇನಹಳ್ಳಿ*
*ಸ್ಪರ್ಧೆಯ ವಿಜೇತರು*
*(ಫಲಿತಾಂಶ)*
*ಪ್ರಥಮ ಬಹುಮಾನ*
🥇🥇🏆🥇🥇
೧. ಶ್ರೀಮತಿ ಮಂಜುಳಾ ರಾಮಡಗಿ
*ದ್ವಿತೀಯ ಬಹುಮಾನ*
🥈🥈🏆🥈🥈
೨. ವೀಣಾ ಗಣಪತಿ ಹೆಗಡೆ ಶಿರಸಿ
ಮೂರನೇ ಬಹುಮಾನ
🥉🥉🏆🥉🥉
೩.ಶಿವಪ್ರಸಾದ್
ಪುರುಷೋತ್ತಮ ಪೆಮ್ನಳ್ಳಿ
*ಸಮಾಧಾನಕರ ಬಹುಮಾನ*
🏅🏅🎗️🏅🏅
೧. ಉಷಾ ದಿನೇಶ್ ಶಿವಮೊಗ್ಗ
೨. ಅನ್ನಪೂರ್ಣ ಹಿರೇಮಠ್ ಬೆಳಗಾವಿ
೩. ಶೋಭಾ ಸತೀಶ್ ಶಿವಮೊಗ್ಗ
೪. ಮಂಜಮ್ಮ ಎಸ್. ಪಾವಗಡ
೫. ಗಿರಿಜಮ್ಮ ಹೆಚ್. ಎಸ್. ತುಮಕೂರು
೬. ಸಾತುಗೌಡ ಬಡಿಗೇರಿ ಅಂಕೋಲಾ
*ತೀರ್ಪುಗಾರರ ನುಡಿ*:
*ಹಕ್ಕಿಯ ಬದುಕು*
ಇದರ ಜೀವನದ ಕುರಿತು ಕವನ ರಚಿಸಲು ಕೊಟ್ಟು. ಸಾಹಿತಿಗಳಲ್ಲಿ ಹಕ್ಕಿ ಪಕ್ಷಿ ಗಳ ಬಗ್ಗೆ ಜಾಗೃತಿಯನ್ನು ಮೂಡಿಸಿದ, ಆಸಕ್ತಿಯನ್ನು ಬೆಳಸಿದ ರಾಜು ಸುಲೇನಹಳ್ಳಿ ರವರಿಗೆ ನನ್ನ ಹೃದಯ ಪೂರ್ವಕ ಅಭಿನಂದನೆಗಳು 🙏🙏🌹.
ಯಾವುದೇ, ಯಾರದೇ ಬೆಂಬಲವಿಲ್ಲದೆ ಸ್ವಪ್ರಯತ್ನದಿಂದ ಬೆಳೆದು ನಿಂತವರು ನೀವು, ನಿಮ್ಮ ಪ್ರಕಾಶನವು ನಿಮ್ಮೆತ್ತರಕ್ಕೆ ಬೆಳೆಯಲೆಂದು ಹಾರೈಸುವೇ.
*ತೀರ್ಪುಗಾರರು : ಶ್ರೀಮತಿ ದಯಾ ಪುತ್ತೂರ್ಕರ್*
ಜಿಲ್ಲಾಧ್ಯಕ್ಷರು
ಚೀನ್ಮೂಲಾದ್ರಿ ಸಾಹಿತ್ಯ ವೇದಿಕೆ ಚಿತ್ರದುರ್ಗ.
*ಆಯೋಜಕರು : ಕು. ಸಿಂಚನ ಜಿ. ಎನ್.*
ಪ್ರಧಾನ ಮಹಿಳಾ ಸಂಚಾಲಕರು
ತನುಶ್ರೀ ಪ್ರಕಾಶನ ಸೂಲೇನಹಳ್ಳಿ
*ಅಧ್ಯಕ್ಷರ ನುಡಿ:*
ತನುಶ್ರೀ ಪ್ರಕಾಶನ ಸಂಸ್ಥೆ , ಸೂಲೇನಹಳ್ಳಿ. ಇವರ ವತಿಯಿಂದ ದಿನಾಂಕ ೧೬.೦೭.೨೦೨೧ ಶುಕ್ರವಾರ 'ಹಕ್ಕಿ ಬದುಕು' ಎಂಬ ವಿಷಯದ ಮೇಲೆ ಹಮ್ಮಿಕೊಂಡಿದ್ದ ಸ್ಪರ್ಧಾ ಕಾರ್ಯಕ್ರಮ ಬಹಳ ಯಶಸ್ವಿಯಾಗಿದೆ. ಸುಮಾರು ೫೫ ಜನ ಕವಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿರುವುದು ಸಂತೋಷದ ವಿಷಯ. ಇದಕ್ಕಾಗಿ ಮಾನ್ಯ ರಾಜು ಸೂಲೇನಹಳ್ಳಿ ಸಂಸ್ಥಾಪಕರು, ತನುಶ್ರೀ ಪ್ರಕಾಶನ ಇವರಿಗೆ ಹಾಗೂ ಕು. ಸಿಂಚನ ಜಿ.ಎನ್. ಪ್ರಧಾನ ಮಹಿಳಾ ಸಂಚಾಲಕರು ತನುಶ್ರೀ ಪ್ರಕಾಶನ ಸೂಲೇನಹಳ್ಳಿ ಇವರಿಗೆ ಹಾಗೂ ಸಂಸ್ಥೆಯ ಎಲ್ಲಾ ಪಧಾದಿಕಾರಿಗಳಿಗೆ ಹಾಗೂ ಸದಸ್ಯರಿಗೆ ಅದರಲ್ಲೂ ಮುಖ್ಯವಾಗಿ ಈ ಸ್ಪರ್ಧೆಯಲ್ಲಿ ಪಾಲ್ಗೊಂಡು ಸ್ಪರ್ಧೆಯನ್ನ ಯಶಸ್ವಿಗೊಳಿಸಿರುವ ಎಲ್ಲಾ ಸ್ಪರ್ಧಾರ್ಥಿಗಳಿಗೆ ಹಾಗೂ ವಿಜೇತರಿಗೆ ಹೃದಯ ಪೂರ್ವಕ ಅಭಿನಂದನೆಗಳನ್ನು ತಿಳಿಸುವೆ.
ಈ ಕಾರ್ಯಕ್ರಮದ ತೀರ್ಪುಗಾರರಾದ ಶ್ರೀಮತಿ ದಯಾ ಪುತ್ತೂರ್ಕರ್ ಜಿಲ್ಲಾಧ್ಯಕ್ಷರು ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ, ಚಿತ್ರದುರ್ಗ ಇವರಿಗೆ ಹಾಗೂ ಮಾನ್ಯ ಓಬಳೇಶ್ ಚಿಕ್ಕೂಬನಹಳ್ಳಿ, ಸಂಶೋಧಕರು ಕನ್ನಡ ವಿಶ್ವವಿದ್ಯಾಲಯ, ಹಂಪಿ ಇವರಿಗೆ ಹಾಗೂ ಎಲ್ಲಾ ಅತಿಥಿ ಮಹೋದಯರಿಗೆ ಹೃದಯಪೂರ್ವಕ ನಮಸ್ಕಾರಗಳು.
ತನುಶ್ರೀ ಪ್ರಕಾಶನ ಸಂಸ್ಥೆ ಯುವ ಬರಹಗಾರರಿಗೆ ಲೇಖಕರಿಗೆ ಪ್ರೋತ್ಸಾಹ ಒದಗಿಸುವ ಹಾಗೂ ಅವರಿಗೆ ಒಂದು ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಹಲವಾರು ಸರಣಿ ಕಾರ್ಯಕ್ರಮಗಳನ್ನ ನಡೆಸಿಕೊಂಡು ಬರುತ್ತಿರುವುದು ಬಹಳಾ ಸಂತೋಷದ ವಿಷಯ , ಇದರ ಮುಂದುವರೆದ ಭಾಗವಾಗಿ 'ಹಕ್ಕಿ ಬಹುಕು' ಎಂಬ ವಿಷಯದ ಮೇಲೆ ಕವನ ರಚನೆ ಸ್ಪರ್ಧೆಯನ್ನ ಆಯೋಜಿಸಿದ್ದಾರೆ ಇದಕ್ಕಾಗಿ ಮತ್ತೊಮ್ಮೆ ಸಂಸ್ಥೆಯನ್ನ ಅಭಿನಂದಿಸುವೆ. 'ಹಕ್ಕಿ ಬದುಕು' ಈವತ್ತಿನ ಸಂಧರ್ಭಕ್ಕೆ ಬಹಳಾ ಪ್ರಸ್ತುತವಾದ ವಿಷಯ ಅನಿಸುತ್ತೆ. ಹಕ್ಕಿಗಳನ್ನ ಸ್ವಾತಂತ್ರದ ರೂಪಕವಾಗಿ, ಬಿಡುಗಡೆಯ ರೂಪಕವಾಗಿ ನವೋದಯ ಕಾಲದಿಂದಲೂ ಹಕ್ಕಿಗಳ ಮೇಲೆ ಕವಿತೆ ಬರೆಯುವುದು ಇದೆ. ಬೇಂದ್ರೆ ಅವರ 'ಹಕ್ಕಿ ಹಾರುತಿದೆ ನೊಡಿದಿರಾ....' ಕವಿತೆಯನ್ನ ಇಲ್ಲಿ ನೆನೆಯಬಹುದು. ಆದರೆ ಈವತ್ತು ಹಕ್ಕಿಗಳ ಬದುಕು ಕೇವಲ ಸ್ವಾತಂತ್ರ್ಯ ಬಿಡುಗಡೆ ಅಷ್ಟಕ್ಕೆ ಅಲ್ಲದೇ, ಬದಲಾಗುತ್ತಾ ಇರುವ ಪರಿಸರ, ಪ್ರಕೃತಿ ನಾಶ , ಭೂತಾಪಮಾನ ಏರಿಕೆ ಅತಿಯಾದ ರೆಡಿಯೇಷನ್ ಮುಂತಾದ ಕಾರಣಗಳಿಂದ ಹಲವಾರು ಪಕ್ಷಿ ಜಾತಿಗಳು ನಿರ್ಣಾಮ ಆಗ್ತಾ ಇರುವುದರಿಂದ ಈ ಹಿನ್ನೆಲೆಯಲ್ಲಿಯೂ ಪಕ್ಷಿಗಳ ಬದುಕನ್ನ ನೋಡಬೇಕು. ನಮ್ಮ ಸುತ್ತಮುತ್ತ ಇರುತ್ತಿದ್ದ ಗುಬ್ಬಚ್ಚಿ, ಗಿಳಿ, ಮೈನಾಗಳ ಜೊತೆಗೆ ಕಾಗೆ ಹದ್ದುಗಳು ಸಹಾ ಈಗೀಗ ತುಂಬಾ ಕಡಿಮೆ ಆಗಿಬಿಡ್ತಾ ಇದ್ದಾವೆ. ನಮ್ಮ ಪ್ರಕೃತಿ ಚಕ್ರದಲ್ಲಿ ಎಲ್ಲಾ ಪಕ್ಷಿ ಪ್ರಾಣಿ ಕೀಟಗಳು ಸಹಾ ಬಹಳಾ ಪ್ರಮುಖ ಪಾತ್ರ ವಹಿಸ್ತವೆ. ಸಲೀಂ ಅಲಿ, ತೇಜಸ್ವಿ , ಕಾರಂತರು ಮುಂತಾದವರು ಪಕ್ಷಿಗಳ ಕುರಿತು ಪುಸ್ತಕ ರಚಿಸಿದ್ದಾರೆ. ಇದು ಅವರ ಪಕ್ಷಿ ಪ್ರೀತಿಗೆ ಸಾಕ್ಷಿ , ಅದರ ಜೊತೆಗೆ ಪಕ್ಷಿಗಳ ಸೊಜಿಗದ ಬದುಕಿನ ಬಗ್ಗೆ ಜನರ ಗಮನ ಸೆಳೆಯುವ ಪ್ರಯತ್ನ ಸಹಾ ಇದರಲ್ಲಿ ಇದೆ. ಈ ಹಿನ್ನೆಲೆಯಲ್ಲಿ ಪಕ್ಷಿಗಳ ಕುರಿತು ಜಾಗೃತಿ ಮೂಡಿಸುವ ಕೆಲಸವನ್ನ ಅವುಗಳ ಸಂರಕ್ಷಣೆಯ ಪ್ರಾಮುಖ್ಯತೆ ಯನ್ನ ವಿವರಿಸುವ ಪ್ರಯತ್ನವನ್ನ ಸಾಹಿತ್ಯದ ಮೂಲಕ ಪ್ರಕಾಶನ ಸಂಸ್ಥೆಗಳು, ಸಾಹಿತ್ಯ ವೇದಿಕೆಗಳು ಸಹಾ ಮಾಡಬಹುದು ಅನ್ನುವುದಕ್ಕೆ ಈ ಸ್ಪರ್ಧೆ ಬಹಳಾ ಯಶಸ್ವಿ ಉದಾಹರಣೆ ಆಗಿದೆ. ಇಲ್ಲಿ ಸ್ಪರ್ಧೆ ಮಾಡಿರುವ ಹಲವಾರು ಕವಿಗಳು ಮೇಲೆ ಚರ್ಚಿಸಿದ ವಿಚಾರಗಳನ್ನ ತಮ್ಮ ಕವಿತೆಗಳ ಮೂಲಕ ಚಿತ್ರಿಸಿದ್ದಾರೆ. ಮೂಕ ವೇದನೆ, ಹಾರುವ ಹಕ್ಕಿ, ವಿಹಗಗಳ ಬಾಳು, ಪ್ರೇಮ ಜೀವನ, ಪ್ರೀತಿತುಂಬಿದ ಕೂಟ, ಪುಟಕ್ಕಿ, ಹಾರಾಟ, ಬಾನಾಡಿ ಬಾಳು, ಒಡಲ ಕುಡಿ, ಸ್ವತಂತ್ರರು, ಹಕ್ಕಿ ಹಾರುತಿದೆ, ಸ್ವಚ್ಚಂದ ಮುಂತಾದ ಕವಿತೆಗಳಲ್ಲಿ ಈ ಆಶಯಗಳ ಅಭಿವ್ಯಕ್ತಿ ಇದೆ. ಇಂತಹಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿರುವುದು ನನಗೆ ಬಹಳಾ ಹೆಮ್ಮೆಯ ವಿಷಯ. ಮತ್ತೊಮ್ಮೆ ಎಲ್ಲಾ ಸ್ಪರ್ಧಾರ್ಥಿಗಳಿಗೆ, ವಿಜೇತರಿಗೆ ಹಾಗೂ ಕಾರ್ಯಕ್ರಮ ಆಯೋಜಕರಿಗೆ ಅಭಿನಂದನೆಗಳು ಹಾಗೂ ಕಾರ್ಯಕ್ರಮದ ತೀರ್ಪುಗಾರರು, ವಿಮರ್ಶಕರು, ಹಾಗೂ ಎಲ್ಲಾ ಅತಿಥಿ ಗಳಿಗೆ ಪ್ರೀತಿಯ ನಮಸ್ಕಾರಗಳನ್ನು ತಿಳಿಸುತ್ತಾ ನನ್ನ ಮಾತಿಗೆ ವಿರಾಮ ನೀಡುವೆ.
ನಮಸ್ಕಾರ
*ಕಾರ್ಯಕ್ರಮದ ಅಧ್ಯಕ್ಷತೆ*
*ಶ್ರೀ ವರುಣ್ ರಾಜ್ ಜೀ*
ಗೌರವ ಅಧ್ಯಕ್ಷರು.
ವಿಚಾರ ಮಂಟಪ ವೇದಿಕೆ, ಕರ್ನಾಟಕ.
9448241450.
💐💐💐ಎಲ್ಲಾ ವಿಜೇತರಿಗೆ ಅಭಿನಂದನೆಗಳು 💐💐💐
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ