ಆಧ್ಯಾತ್ಮ ಮತ್ತು ಪರಿಸರ ಒಂದಕ್ಕೊಂದು ಪೂರಕ
ಆಧ್ಯಾತ್ಮ ಮತ್ತು ಪರಿಸರ ಒಂದಕ್ಕೊಂದು ಪೂರಕ
ಆಧ್ಯಾತ್ಮ ಎನ್ನುವುದು ಬದುಕಿನೊಂದಿಗೆ ಬಿಡಿಸಲಾರದ ಸಂಬಂಧವನ್ನು ಹೊಂದಿದೆ. ನಮ್ಮ ಸುತ್ತಲಿನ ಪರಿಸರದಲ್ಲಿ ಅಮೂರ್ತ ರೂಪದಲ್ಲಿರುವ ಚೈತನ್ಯದಲ್ಲಿರುವುದು ಆಧ್ಯಾತ್ಮವೆ. ಆಧ್ಯಾತ್ಮ ಎಂದರೆ ಅವ್ಯಕ್ತವಾದ ಒಂದು ಶಕ್ತಿ ಮತ್ತು ಸ್ಥಿರತೆಯುಳ್ಳ ಒಂದು ಸ್ಥಿತಿಯಾಗಿದೆ. ಆಧ್ಯಾತ್ಮವು ಬದುಕಿನಲ್ಲಿ ನಿಜವಾದ ಆಸ್ವಾದನೆಯ ಹಾದಿಯನ್ನು ತೋರುತ್ತದೆ. ನಾವೀಗ ಸಂತೋಷವೆಂದು ಅಂದುಕೊಂಡಿರುವ ಪ್ರಾಪಂಚಿಕ ಸುಖ ಅದು ಕೇವಲ ಸುಖವಾಗಿದ್ದು ಅದು ಆತ್ಮಾನಂದವಲ್ಲ. ಪ್ರಾಪಂಚಿಕ ಸುಖಕ್ಕೆ ಜೋತು ಬಿದ್ದಿರುವ ನಮಗೂ ಆಧ್ಯಾತ್ಮಿಕ ವ್ಯಕ್ತಿಗಳಿಗೂ ಸಾಕಷ್ಟು ವ್ಯತ್ಯಾಸವಿದ್ದು. ಮಹಾನ್ ಗುರುಜಿಯೊಬ್ಬರ ಪ್ರಕಾರ “ಪ್ರಾಪಂಚಿಕ ವ್ಯಕ್ತಿಗಳು ಎಂದರೆ ರೇಸನ್ನು ಗೆಲ್ಲಲು ತನ್ನ ಮುಂದೆ ನೇತಾಡುತ್ತಿರುವ ಮೂಳೆಗಾಗಿ ಒಂದೇ ಸಮನೆ ಓಡುತ್ತಿರುವ ನಾಯಿಯಂತೆ. ಆ ನಾಯಿಯು ಮೂಳೆಯನ್ನು ಹಿಡಿಯಲು ಹೆಚ್ಚು ಹೆಚ್ಚು ಓಡುತ್ತಲೆ ಇರುತ್ತದೆ. ಆದರೆ ಆ ಆತ್ಮಾನಂದ ಎನ್ನುವ ಮೂಳೆ ಅವರಿಗೆ ಎಂದೂ ದೊರೆಯದೆ ಅವರು ಬಾಹ್ಯ ಸನ್ನಿವೇಶಗಳಿಂದ ಹೊಡೆತ ತಿನ್ನುತ್ತಲೇ ಇರುತ್ತಾರೆ” ಆದರೆ ಆಧ್ಯಾತ್ಮದ ಸಂಸ್ಕಾರವಿರುವ ವ್ಯಕ್ತಿ ಸ್ಪರ್ಧಾ ಜಗತ್ತಿನಲ್ಲಿ ತಾನು ನಾಯಿಯ ಹಾಗೆ ಎದುರು ಕಾಣುವ ಮೂಳೆಗಾಗಿ ಓಡುವ ನಾಯಿಯಂತಾಗದೆ. ಇತರರಿಗಿಂತ ವಿಭಿನ್ನ ಹಾದಿ ಹಾಗೂ ಕಂಡುಕೊಂಡು ತನಗೆ ಆನಂದ ನೀಡುವ ತನಗೆ ಇಷ್ಟವಾಗುವ ಕೆಲಸದಲ್ಲಿ ಮಾತ್ರ ತಲ್ಲೀನನಾಗಿರುತ್ತಾನೆ. ಇತರರನ್ನು ನೋಡಿ ಆನುಕರಿಸದೆ ತನಗೆ ಹೇಗೆ ಬೇಕೋ ಹಾಗೆ ಬದುಕುತ್ತಾನೆ. ಇದಕ್ಕೆ ಅಗಾಧವಾದ ಸಹನೆ ಖಂಡಿತಾ ಬೇಕು. ಹೌದು ಯಾರು ಆಧ್ಯಾತ್ಮಿಕ ವ್ಯಕ್ತಿಗಳಾಗಲು ಇಚ್ಚಿಸುತ್ತಾರೋ ಅವರು ಬದಿಕಿನಲ್ಲಿ ಹೆಚ್ಚು ತಾಳ್ಮೆಯಿಂದ ವರ್ತಿಸುತ್ತಾರೆ.
ಪ್ರಾಪಂಚಿಕ ಬದುಕನ್ನು ನೆಚ್ಚಿ ಸ್ಪರ್ಧೆಯ ಬದುಕಿನಲ್ಲಿ ತೊಳಲಾಡುತ್ತಿರುವ ನಾವು ನಮ್ಮ ಬದುಕಿನ ನಿಜವಾದ ಆನಂದವನ್ನು ಆಸ್ವಾದಿಸುವಲ್ಲಿ ಸೋತಿದ್ದೀವಲ್ಲದೆ. ವೃತಾ ಅನಾವಶ್ಯಕ ವಿಷಯಗಳಿಗೆ ಮನಸ್ಸನ್ನು ಹರಿಬಿಟ್ಟು ನಾವು ಸ್ಫರ್ದೆಗಿಳಿದು ನಮ್ಮ ಆತ್ಮ ಸಂತೃಪ್ತಿಯನ್ನಷ್ಟೇ ಅಲ್ಲದೆ ಸುತ್ತಲಿನ ಪರಿಸರವನ್ನೂ ಹಾಳುಮಾಡುತ್ತಿದ್ದೇವೆ. ಆಧ್ಯಾತ್ಮ ಯಾವತ್ತು ಪ್ರಕೃತಿ ಆರಾಧನೆಗೆ ಹತ್ತಿರವಾಗಿದ್ದು ವ್ಯಕ್ತಿ ಪರಿಸರ ಸ್ನೇಹಿಯಾಗಿ ಬದಕಲು ನೆರವಾಗುತ್ತದೆ. ಮಾನಸಿಕ ಹಾಗೂ ದೈಹಿಕ ಆರೋಗ್ಯ ಸ್ವಸ್ಥ್ಯವಾಗಿರುವಂತೆ ನಮ್ಮನ್ನು ಕಾಪಾಡುತ್ತದೆ. ಹೌದು ನಾವು 99 ಪ್ರತಿಶತ ಜನರು ನಾವೇನು ಮಾಡುತ್ತಿದ್ದೇವೆ, ಏಕೆ ಮಾಡುತ್ತಿದ್ದೇವೆ ಎನ್ನುವುದನ್ನು ಸ್ವತಃ ನಾವೇ ಖಂಡುಕೊಳ್ಳದೆ ಬದುಕುತ್ತಿದ್ದೇವೆ. ಬಾಹ್ಯ ತೋರಿಕೆಗಾಗಿ, ಸ್ಪರ್ದೆಗಾಗಿ ನಮ್ಮ ಮಾನಸೀಕ ಹಾಗೂ ಬಾಹ್ಯ ವಾತವರಣವನ್ನು ಕಲುಷಿತ ಮಾಡುತ್ತಿದ್ದೇವೆ. ಹೌದು ವ್ಯಕ್ತಿ ಆಧ್ಯಾತ್ಮದ ಸಂಪರ್ಕಕ್ಕೆ ಬಂದು ತನ್ನಲ್ಲಿರುವ ಆಸೆ, ಈರ್ಶೇ,ಕೋಪ, ದುಖಃ, ಇವುಗಳಿಂದ ಹೊರ ಬಂದಿದ್ದಾದರೆ. ಖಂಡಿತಾ ನಮ್ಮ ಸುತ್ತಲಿನ ಪರಿಸರ ಸುರಕ್ಷಿತವಾಗಿರುವುದಲ್ಲದೆ ನಾವು ಸುರಕ್ಷತೆಯಿಂದಿರುತ್ತೇವೆ. ಪರಿಸರ ಕಾಳಜಿಯ ಶಿಕ್ಷಣವನ್ನು ನೀಡುವ ಮಾತು ದೂರದ್ದು ಇತ್ತೀಚೆಗೆ ಸ್ಪರ್ಧಾತ್ಮಕ ಶಿಕ್ಷಣ ವ್ಯವಸ್ಥೆಗಾಗಿಯೆ ಪರಿಸರವನ್ನು ಸಾಕಷ್ಟು ನಾಶ ಮಾಡಲಾಗುತ್ತಿದೆ. ಅಲ್ಲದೆ.
ಇತ್ತೀಚೆಗಂತು ಯೋಗ ಧ್ಯಾನ ಆಧ್ಯಾತ್ಮ ಸಸ್ತಂಗದ ಪೂರ್ಣ ಅರ್ಥ ತಿಳಿಯದೆ ಇವುಗಳ ಹೆಸರಿನಲ್ಲೂ ಪರಿಸರ ನಾಶ ಮಾಡುತ್ತಿರುವುದು ಖೇದಕರ ಸಂಗತಿ. ಇಲ್ಲಿ ಬಳಸುವ ಪ್ಲಾಸ್ಟಿಕ್ ವಸ್ತು ಹಾಗೂ ಕೆಲವು ಐಶಾರಾಮಿ ವಸ್ಥುಗಳು ಪರಿಸರ ನಾಶಕ್ಕೆ ಕಾರಣವಾಗುತ್ತವೆ. ಮಕ್ಕಳಿಗೆ ಪ್ರಾಥಮಿಕ ಹಂತದಿಂದಲೇ ತಮ್ಮಗಿಷ್ಟವಾದಂತೆ ಬದುಕಲು ಬದುಕನ್ನು ಅವರ ಮಹತ್ವಾಕಾಂಕ್ಷೆಯ ಆಯ್ಕೆಗೆ ಬಿಡುವುದು ಆಧ್ಯಾತ್ಮದ ಅವಿಭಾಜ್ಯ ಅಂಗವಾಗಿದೆ. ಮಕ್ಕಳ ಭವಿಷ್ಯವನ್ನು ನಮ್ಮ ಆಯ್ಕೆಯಂತೆ ನಿರ್ಧರಿಸಿ ಇತರರಿಗೆ ಹೋಲಿಸಿ ಸ್ಪರ್ಧೆಗೆ ಹಚ್ಚುವುದು ಪ್ರಕೃತಿಗೆ ವಿರುದ್ದವಾಗಿದ್ದು ಈ ರೀತಿ ಮಾಡದೆ. ಅವರ ಭವಿಷ್ಯವನ್ನು ಅವರ ಆಯ್ಕೆಗೆ ಬಿಟ್ಟು ಬದುಕಿನ ಮೂಲಭೂತ ಮೌಲ್ಯಗಳನ್ನು ಬೋದಿಸಿ ಉತ್ತಮ ನಾಗರೀಕರನ್ನಾಗಿ ನಿರ್ಮಿಸಿದ್ದಲ್ಲಿ ಉತ್ತಮ ನಾಡು ಉತ್ತಮ ಪರಿಸರ ಎರಡೂ ರೂಪಗೊಳ್ಳಲು ಸಾಧ್ಯವಾಗುತ್ತದೆ. ಆಧ್ಯಾತ್ಮ ಎಂದರೆ ನಮ್ಮನ್ನು ಅರಿಯುವುದು ಎಂದಾದಮೇಲೆ ಇಲ್ಲಿ ಮೊದಲು ನಾವೇನೆಂದು ಅರಿಯಬೇಕು ಹಾಗೆ ಅವರಿವರೊಂದಿಗೆ ನಮ್ಮನ್ನು ಸಮಾನಿಕರಿಸದೆ ವೈಯಕ್ತಿಕ ಭಿನ್ನತೆಗಳನ್ನು ಅರಿತು ತಾಳ್ಮೆಯಿಂದ ನಮಗೆ ಬೇಕಾದ ವಿಷಯದಲ್ಲಿ ಪರಿಣಿತಿ ಹೊಂದಬೇಕು.
ಆಧ್ಯಾತ್ಮ ಎನ್ನುವುದು ಇದು ಸಂಸ್ಕೃತದ ಪದವಾಗಿದ್ದು ಇದನ್ನು ಆದಿ+ಆತ್ಮ ಎಂದು ಬಿಡಿಸತಕ್ಕದ್ದು ಅಂದರೆ ಆತ್ಮದ ಕುರಿತಾದ ವಿಷಯ ಅಥವಾ ಪರಮಾತ್ಮನ ಕುರಿತಾದ ವಿಷಯ ಎಂದರ್ಥ. ಸಂಸ್ಕೃತದಲ್ಲಿ ಆತ್ಮ ಎಂದರೆ ತಾನು ಎಂದಾಗಿದೆ ಆದ್ದರಿಂದ ಆಧ್ಯಾತ್ಮ ಎಂದರೆ ತನ್ನನ್ನು ತಾನು ಅರಿಯುವುದು ಎಂದೂ ಆಗುತ್ತದೆ. ಹಾಗಾಗಿ ಇಂಗ್ಲೀಷಿನ ಫಿಲಾಸಫಿ ಅಥವಾ ಸ್ಪಿರಚವಾಲಿಟಿ ಎಂಬ ಶಬ್ಧಕ್ಕೆ ಇದನ್ನು ಪರ್ಯಾಯವಾಗಿ ಬಳಸಬಹುದು.
ಆಧ್ಯಾತ್ಮವೆಂದರೆ ಕೆಲವರ ಪ್ರಕಾರ ಪ್ರೀತಿ, ಮುಗ್ಧತೆ, ಹುಡುಕಾಟ, ಪ್ರತಿಭೆ, ಒಳ್ಳೆಯತನ, ನಿಷ್ಕಲ್ಮಶತೆ, ಸಜ್ಜನಿಕೆ, ಪ್ರಮಾಣಿಕತೆ, ಸತ್ಯ ಇವೆ ಮುಂತಾದವು ಆಧ್ಯಾತ್ಮದ ಕುರುಹುಗಳು. ಪ್ರಕೃತಿಯ ಪ್ರತಿ ಕಣ ಕಣದಲ್ಲಿರುವುದು ಆಧ್ಯಾತ್ಮಿಕತೆಯೆ. ಖಂಡಿತ ಒಳ್ಳೆಯ ಕಾರ್ಯಕ್ಕೆ ಒಳ್ಳೆಯ ಪ್ರತಿಫಲವೆನ್ನುವುದು ಆಧ್ಯಾತ್ಮದ ಬಹುಮುಖ್ಯವಾದ ಅಂಶವಾಗಿದ್ದು ಇದನ್ನು ಪ್ರಮಾಣಿಕವಾಗಿ ಪಾಲಿಸಿದವರಿಗೆ ಮಾತ್ರ ಖಂಡಿತಾ ಸತ್ಯ ದರ್ಶನವಾಗದೆ ಇರದು. ಪರಿಸರದಲ್ಲಿರುವ ನೆಲ, ಜಲ, ವಾಯು, ಗಿಡ, ಮರ ಬಳ್ಳಿ ಎಲ್ಲವನ್ನೂ ಪ್ರೀತಿಸುತ್ತಾ ಪೊರೆಯುತ್ತಾ ಬದುಕುತ್ತೇವೆಂದಾದರೆ ಅದು ಪರಿಪೂರ್ಣ ಹಾಗೂ ಆತ್ಮಾನಂದದ ಬದುಕು ಆದರೆ ಕ್ಷಣಿಕ ಆಮಿಷಗಳಿಗೆ ಮನಸ್ಸನ್ನು ಹರಿಬಿಟ್ಟು ನಮ್ಮಲ್ಲೇ ನಾವು ಸ್ಪರ್ಧೆಯನ್ನು ಏರ್ಪಡಿಸುವ ಮೂಲಕ ವೇಗದ ಒತ್ತಡದ ಬದುಕಿನಲ್ಲಿ ನಮ್ಮ ಅಗತ್ಯತೆಗಳನ್ನು ಪೂರೈಸಿಕೊಳ್ಳಲೆಂದು ಪರಿಸರಕ್ಕೆ ವಿರುದ್ದವಾಗಿ ನಡೆದುಕೊಂಡು ನಾಮ್ಮ ವಿನಾಶಕ್ಕೆ ನಾವೇ ಕಾರಣರಾಗುತ್ತಿದ್ದೇವೆ. ಪ್ರಕೃತಿಯಲ್ಲಿರುವ ಸೂರ್ಯ, ಚಂದ್ರ, ಭೂಮಿ ಎಲ್ಲವೂ ಕೊಂಚ ಅಹಂಕಾರವಿಲ್ಲದೆ ತಮ್ಮ ಕಾರ್ಯದಲ್ಲಿ ನಿರಂತರವಾಗಿ ತೊಡಗಿರುವಾಗ ಹುಲು ಮಾನವರಾದ ನಾವು ಸುಖಾ ಸುಮ್ಮನೆ ಎಲ್ಲವೂ ನನ್ನಿಂದಲೆ ಎನ್ನುವ ಅಹಂಕಾರದಲ್ಲಿ ಮುಳುಗಿರುವುದು ನಮ್ಮ ಮೂರ್ಖತನಕ್ಕೆ ಹಿಡಿದ ಕನ್ನಡಿಯಾಗಿದೆ. ಪರಿಸರದಷ್ಟೆ ವಿಶಾಲ ಮನಸ್ಸಿನಿಂದ ನಾವು ಬದುಕುವುದೇ ಆಧ್ಯಾತ್ಮದ ಬಹುಮುಖ್ಯ ಅಂಶವಾಗಿದೆ.
ಬದುಕಿನ ಪ್ರತಿ ಹೆಜ್ಜೆ ಪ್ರತಿ ಸನ್ನಿವೇಶವನ್ನು ನಾವು ಆಸ್ವಾದಿಸಬೇಕು. ಪ್ರಕೃತಿಯ ಪ್ರತಿ ಅಂಶದಲ್ಲೂ ಆಧ್ಯಾತ್ಮಿಕ ಆಸ್ವದನೆ ನಮಗೆ ಸಿಗುತ್ತದೆ. ಸೂರ್ಯೋದಯ, ಚಂದ್ರೋದಯ, ಶುಭ್ರ ಅನಂತ ನೀಲಾಕಾಶ, ಹಕ್ಕಿಗಳ ಕಲರವಚ, ಸಮುದ್ರ, ಹೂವು ಅರಳುವುದು, ಹಸಿರು ಎಲ್ಲವನ್ನು ಕಣ್ಣು ತುಂಬುಕೊಂಡು ಆನಂದಿಸುವುದರಲ್ಲೂ ಆಧ್ಯಾತ್ಮಿಕ ಚೈತನ್ಯವಡಗಿದೆ ಹಾಗೆ ತಾಯಿಯಾಗುವುದರಲ್ಲಿ ತಾಯ್ನತನವನ್ನು ಅನುಭವಿಸುವುದರಲ್ಲಿ ಯಾರನ್ನಾದರೂ ನಿಷ್ಕಲ್ಮಷವಾಗಿ ಪ್ರೀತಿಸುವುದರಲ್ಲಿ ಪ್ರಮಾಣಿಕವಾಗಿ ಬದುಕುವುದರಲ್ಲಿ ಆದ್ಯಾತ್ಮದ ಅನುಭೂತಿ ಸಿಗುತ್ತದೆ.
- ಶ್ರೀಮತಿ ಗಿರಿಜಾ ಮಾಲಿ ಪಾಟೀಲ ಸಂಸ್ಥಾಪಕ ಅಧ್ಯಕ್ಷರು ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ