ನನ್ನ ಪ್ರೀತಿಯ ಮಲ್ಲಿಗೆ
ಘಮ ಘಮ ಪರಿಮಳ ಬೀರುವ ಮಲ್ಲಿಗೆ
ಹೊರಟೆ ಎಲ್ಲಿಗೆ ನೀ ಹೊರಟೆ ಎಲ್ಲಿಗೆ
ಚಂದಿರನೂರಿನ ಬೆಳ್ಳಿಯ ಬಟ್ಟಲು
ಮುಡಿಯವೆ ಯಾರಿಗೆ ಪರಿಮಳ ಬೀರುವೆ ಯಾರಿಗೆ
ಜಾಜಿ ಮಲ್ಲಿ ಸೂಜು ಮಲ್ಲಿ ದುಂಡು ಮಲ್ಲಿಗೆಯೇ,
ಕಾಡು ಮಲ್ಲಿಗೆಯೇ ಮತ್ತೇ ಮುತ್ತು ಮಲ್ಲಿಗೆಯೇ
ಮತ್ತನು ಬೀರುತ ಕಂಪನು ಸೂಸುತ
ಯಾರಿಗೆ ಕಾದಿರುವೆ ನೀ ಎಲ್ಲಿಗೆ ಹೊರಟಿರುವೆ
ಹೂವನು ಮುಡಿಯುವ ತುರಬಿನ ಸಿರಿಯಾ
ತೋರುವೆ ಯಾರಿಗೆ ನೀ ಸೇರುವೆ ಯಾರಿಗೆ
ಮನಸಿಗೆ ಮುದವನು ನೀಡುವ ಮಲ್ಲಿಗೆ
ಯಾರಿಗೆ ಕಾದಿರುವೆ ನೀ ಎಲ್ಲಿಗೆ ಹೊರಟಿರುವೆ
ಹೆಣ್ಣಿಗೆ ವರ ನೀ ಕಳೆಯುವೆ ಕಳೆ ನೀ
ಪ್ರೀತಿಯ ಒಲುಮೆಯು ನೀ
ಚೈತನ್ಯದ ಚಿಲುಮೆಯು ನೀ
ಬಾಳಿನ ಜ್ಯೋತಿಯ ಪಗಡೆಯನಾಡಲು
ಎಲ್ಲಿಗೆ ಹೊರಟಿರುವೆ ನೀ ಯಾರಿಗೆ ಕಾದಿರುವೆ
✍ ಶ್ರೀಧರ ಗಸ್ತಿ ಧಾರವಾಡ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಸೊಗಸಾಗಿದೆ ಮಲ್ಲಿಗೆ 🎊🎉👌
ಪ್ರತ್ಯುತ್ತರಅಳಿಸಿ