ಗುರುವಾರ, ಜುಲೈ 22, 2021

ಎಲ್ಲಿಗೆ ಪಯಣ (ಕವಿತೆ) - ಶ್ರೀ ಜಿ ಟಿ ಆರ್ ದುರ್ಗಾ, ಬಂಗಾರಪೇಟೆ.

ಎಲ್ಲಿಗೆ ಪಯಣ

ಎಲ್ಲಿಗೆ ನಡೆಯುತ್ತಿದೆ ನನ್ನೀ ಪಯಣ
ಎಲ್ಲಿ ಇಲ್ಲವಂತೆ ಸುಂದರ ನಗರ ಇಲ್ಲೇ ಎಲ್ಲೋ
ನಡೆಯುತ್ತಿದ್ದೇನೆ,,,,, ಏನೋ.

ದಾರಿಯ ಉದ್ದಕ್ಕೂ ಬರೀ ಕಲ್ಲುಗಳು
ಎಲ್ಲೆಲ್ಲೂ ಸ್ಮಶಾನ ಮೌನದಿ ಕಾಣುತ್ತಿದೆ
ಕತ್ತಲೆ ಕವಿದ ದಾರಿಯಲ್ಲಿ ನನಗೆ ನನ್ನದೇ ಪ್ರಶ್ನೆ,

ಅಲ್ಲಲ್ಲಿ ನಾಯಿ ಬೊಗುಳುವ ಸದ್ದು
ಆಷಾಡ ತಂಪು ಗಾಳಿಗೆ ಎಲೆ ಎಲೆ ತೂಗಿ
ಪಟ ಪಟ ಉದುರುವ ತುಂತುರು ಮಳೆಹನಿ, ಆದರೂ,,, ನಿಶ್ಯಬ್ದತೆ?

ಯಾವುದೋ ಹೆಜ್ಜೆ ನನ್ನನ್ನೆ ಹಿಂಬಾಲಿಸುವಂತೆ
ಅಲ್ಲೋ ಎಲ್ಲೋ ಸಮೀಪದಲ್ಲಿ ದ್ವೇಷದ ಬೆಂಕಿ ಉರಿಯುತ್ತಿದೆ
ಬಹುಶ: ಸತ್ತ ಹೆಣಗಳ ಕೂಗತ್ತಿವೆ

 ವಾಸನೆ ಇಲ್ಲದ ಹೆಣಗಳ ರಾಶಿ ಮೂಗು ಕಟ್ಟುತಿದೆ
ಯಾವುದೀ ಗಿರಾಕಿ ? ನೇತು ಕೆಟ್ಟಿದೆ ಕತ್ತಿನ ಪಟ್ಟಿ 
ಹತ್ತಿರ ಬರಬಹುದು ಅದು ಎತ್ತರ ಇರಬಹುದು...
ಕಣ್ಣಿಗೆ ಕಾಣುತ್ತಿಲ್ಲವೇ ? ನನ್ನವರೆಂದು.

ದೂರ ಸಾಗಿದ ಪಯಣವು ಊರು ಕಾಣದೆ
ದಿಕ್ಕು ತಪ್ಪುತ್ತಿದೆ ಸುತ್ತಲು ಅನ್ಯಾಯ ಕಾಣುತ್ತಿದೆ
ಬೆತ್ತಲೆ ನಿಂತ ಬೆತ್ತನೆ ಬಿದುರು ಸವೆದಂತೆ
ಯುಗದಲ್ಲಿ ಚಿಗುರೊಡೆದ ಕಲ್ಲು ಜೀವವಲ್ಲವೇ ?

ದಿಕ್ಕೆಟ್ಟ ಮನಸ್ಸು ಓಡುತ್ತಿದೆ ನಿಲ್ಲದೆ
ಅಲ್ಲೇ ಈಗಷ್ಟೇ ಹಚ್ಚಿಟ್ಟ ಹಣತೆ ಬೆಳಕಿನಡೆಗೆ
ಮೊನ್ನೆ ಕೂಡಿಟ್ಟ ಹೆಣಗಳು ಎದ್ದು ಬಿದ್ದು ಬರುತ್ತಿವೆ 
ನಿರಾಸೆಯಿಂದ ಜೀವ ಕಳೆದುಕೊಂಡ ಜೀವವೇ ,,,

ಹಸಿವೆಗಾಗಿ ಗುಂಡುಗಲ್ಲುಗಳ ಹೂಡಿದೆ
ಅಂಬಲಿ ಕುಡಿಯಲು ಅಂಬಲಿಸಿ ಬೆಂಕಿ ಹಚ್ಚಿದೆ
ಕುದಿಯುತ್ತಿದೆ ಮಾಂಸ ಹೊಲಸು ಮಡಕೆಯಲ್ಲಿ
ನೀಚ ಬುದ್ಧಿಯ ಮನುಜನ ದೇಹವಿದೇ...

ಸುಡುವ ಆಕ್ರಂದನ, ಕಣ್ಣಿಗೆ ಕಾಣದ 
ಧ್ವನಿಯಲ್ಲಿ ನರಳಾಡುವ ಎಳೆ ಮನಸ್ಸಿನ
ಮೃದು ದೇಹವ ಕೊಂದು ತಿನ್ನುತ್ತಿದೆ
ಅನ್ಯಾಯದ ನಡುಗತ್ತಲೆಯಲ್ಲೇ.... ಸಿಲುಕಿ.
ಜಿ ಟಿ ಆರ್ ದುರ್ಗ
ಬಂಗಾರಪೇಟೆ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...