ಬುಧವಾರ, ಜುಲೈ 21, 2021

ಯಶಸ್ವಿಯಾಗಿ ಜರುಗಿದ ತನುಶ್ರೀ ಪ್ರಕಾಶನ ಸಂಸ್ಥೆ ಸೂಲೇನಹಳ್ಳಿ ವತಿಯಿಂದ ಆಯೋಜಿಸಿದ್ದ ಮೂರನೇ ಆನ್‌ಲೈನ್ ಗೂಗಲ್ ಮೀಟ್ ಕಾದಂಬರಿ ಸಂವಾದ ಕಾರ್ಯಕ್ರಮ.

ಯಶಸ್ವಿಯಾಗಿ ಜರುಗಿದ ತನುಶ್ರೀ ಪ್ರಕಾಶನ ಸಂಸ್ಥೆ ಸೂಲೇನಹಳ್ಳಿ ವತಿಯಿಂದ ಆಯೋಜಿಸಿದ್ದ ಮೂರನೇ ಆನ್‌ಲೈನ್ ಗೂಗಲ್ ಮೀಟ್ ಕಾದಂಬರಿ ಸಂವಾದ ಕಾರ್ಯಕ್ರಮ 

ತನುಶ್ರೀ ಪ್ರಕಾಶನದ ವತಿಯಿಂದ ನಡೆಸಲಾದ ಅಂತರ್ಜಾಲ ಆಧಾರಿತ ಕಾದಂಬರಿ ಉಪನ್ಯಾಸ ಆಯೋಜಿಸಲಾಗಿತ್ತು
ರಾಜ್ಯದ ನಾನಾ ಭಾಗಗಳಿಂದ ಸಾಹಿತಿಗಳು ಹಿರಿಯ ಹಾಗೂ ಯುವಬರಹಗಾರರು ಸೇರಿದ್ದರು ಕಾದಂಬರಿ ಹೇಗೆ ಬರೆಯುವುದು ಅದರ ರೂಪುರೇಷೆ ಹೇಗೆ  ಎನ್ನುವ ಉಪನ್ಯಾಸವನ್ನು ಶ್ರೀ ರಾಜು ಸೂಲೇನಹಳ್ಳಿ ಯವರು ಅದ್ಬುತವಾಗಿ ಉಪನ್ಯಾಸ ನೀಡುತ್ತಾ ಪ್ರಸ್ತುತ ದಿನ ಮಾನಗಳಲ್ಲಿ ಕೇವಲ ಕವಿತೆಗಳ ಸಾಧನೆ ತುಂಬಾ ಇದೆ ಕಾದಂಬರಿ ಹೇಗೆ ಆರಂಭ ಮಾಡಬೇಕು ಆದರ ರಚನೆ ಹೇಗಿರಬೇಕು ಆದರ ಮೂಲಗಳೇನು ಯಾವ ತರಹದ ಕಾದಂಬರಿ ಸೂಕ್ತ ಆದರ ರೂಪರೇಷೆಗಳು ಯಾವ ತರಹ ಇರಬೇಕು ಕಾದಂಬರಿಯಲ್ಲಿ ಪಾತ್ರಗಳ ಮಹತ್ವ ಜೊತೆಗೆ ಸುತ್ತಮುತ್ತಲಿನ ಸ್ಥಳೀಯ ವಿಷಯಗಳ ಕುರಿತು ವಿವರಣೆ ಹೀಗೆ ಇನ್ನೂ ಹಲವು ಕಾದಂಬರಿಯ ಸಂಪೂರ್ಣ ಮಾಹಿತಿ ತಮ್ಮ ಉಪನ್ಯಾಸ ಮೂಲಕ ತಿಳಿಸಿಕೊಟ್ಟರು.
ಹಾಗೂ ಭಾಗವಹಿಸಿದ ಕವಿಗಳು ಕಾದಂಬರಿ ರಚನೆಗೆ ‌ಸಂಬಂಧ ಪಟ್ಟ ಪ್ರಶ್ನೆ ಕೇಳಿದರು ಅದಕ್ಕೆ ಸಮರ್ಥ ಉತ್ತರವನ್ನು ಸಹ ನೀಡಿದರು ಈ ವೇಳೆ ಹೂವಿನಹಡಗಲಿ ಹಿರಿಯ ಸಾಹಿತಿಗಳಾದ ತೋ.ಮ.ಶಂಕ್ರಯ್ಯ ಇವರು ಕಾದಂಬರಿಯೇ ಹೀಗೆ ಓದುತ್ತಾ ಕೂತರೇ ಬರೆಯುತ್ತಲೋದರೆ ಮುಗಿಯದಂತೆ ರಸ ಸ್ವಾದವದು ಇಂತಹ ವಿಷಯದ ಬಗ್ಗೆ ಹಮ್ಮಿಕೊಂಡಿರುವುದು ತುಂಬಾ ಶ್ಲಾಘನೀಯ ಎಂದರು
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಯುವಕಾದಂಬರಿಕಾರ ಶ್ರೀಧರ್ ಇವರು ಕಾದಂಬರಿ ಇದು ಸಾಗರದಂತೆ ಇದಕ್ಕೆ ಇಳಿದಾಗ ಹೊರಬರಲು ಮನಸ್ಸೆ ಆಗದು ಅಂತಹ ವಿಶೇಷವದು ಎಂದು ಉತ್ಸಾಹಿಕ ಮಾತುಗಳಾಡಿದರು ಕಲ್ಲೇಶ ನಂದಕಲಾ ಇವರು ಬರಹಗಾರರರಾಗುವ ಮುನ್ನ ಓದುಗರಾಗಿ ಅದಕ್ಕೂ ಮುಂಚೆ ಕೇಳಿಗರಾಗಬೇಕು ಎಂಬ ಕಿವಿಮಾತು ಹೇಳುತ್ತಾ ಆಶಯನುಡಿಯನ್ನು ವ್ಯಕ್ತಪಡಿಸಿದರು.
ಸಂಸ್ಥೆಯ ಧ್ಯೇಯೋದ್ಧೇಶಗಳನ್ನು ಕು.ಸಿಂಚನ ಜಿ.ಎನ್ ಇವರು ಪ್ರಾಸ್ತಾವಿಕ ನುಡಿಯಲ್ಲಿ ತಮ್ಮ ಸಂಸ್ಥೆಯ ಧ್ಯೇಯ ಉದ್ದೇಶಗಳು ಮುಂದಿನ ಯೋಜನೆಗಳು ರಾಜ್ಯ ಮಟ್ಟದ ಕಾರ್ಯಕ್ರಮ ಉದ್ಘಾಟನೆ ಕುರಿತು ಸಂಕ್ಷಿಪ್ತವಾಗಿ ಹೇಳಿದರು. ಸುಹಾಸ್ ಹಾಗೂ ಕಾರ್ತಿಕ ಆಚಾರ್ಯ ಇವರು ನಿರೂಪಣೆ ನಿರ್ವಹಣೆ ಮಾಡಿ,ಉದಮ್ ಬಡಿಗೇರ ಸ್ವಾಗತ ಬಯಸಿದರು ನೇತ್ರಾವತಿ ನೆಲ್ಲಿಕಟ್ಟೆ ಇವರು ವಂದನಾರ್ಪಣೆ ನೆಡೆಸಿದರು 
ಕೆಲ ಭಾಗಗಳಿಂದ ೫೦ ಕ್ಕೂ ಹೆಚ್ಚು ಸಾಹಿತ್ಯಾಸಕ್ತ ಬಂಧುಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಮಾಡಿದರು.




(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...