ಗಜಲ್
ಹಣಕ್ಕಿರುವ ಬೆಲೆ ಸಂಬಂಧಕ್ಕಿಲ್ಲ ಬಿಡು ಆರಾಧ್ಯೆ
ಹೆಣಕ್ಕಿರುವ ಶೃಂಗಾರ ಸಜೀವಕ್ಕಿಲ್ಲ ಬಿಡು ಆರಾಧ್ಯೆ
ಸತ್ಯ ಹರಿಶ್ಚಂದ್ರನಿಗೆ ಎಲ್ಲಾ ಕಾಲಕೂ ವನವಾಸವೆ
ಸುಳ್ಳಿಗಿರುವ ಸುಪ್ಪತ್ತಿಗೆ ಸತ್ಯಕ್ಕಿಲ್ಲ ಬಿಡು ಆರಾಧ್ಯೆ
ಬಸವ, ಗಾಂಧಿ, ಏಸುವನ್ನು ಶಿಲುಬೆಗೇರಿಸಿ ಕುಳಿತಿದ್ದೇವೆ
ಭ್ರಷ್ಟತೆಗಿರುವ ಆಯಸ್ಸು ಪ್ರಮಾಣಕತೆಗಿಲ್ಲ ಬಿಡು ಆರಾಧ್ಯೆ
ಸೀತೆ ಪುನೀತೆಯರನ್ನು ಸಮಾಜದಿಂದ ಬಹಿಷ್ಕರಿಸಿದ್ದೇವೆ
ಅನೈತಿಕತೆಗಿರುವ ರಕ್ಷಣೆ ನೈತಿಕತೆಗಿಲ್ಲ ಬಿಡು ಆರಾಧ್ಯೆ
ಕಾಲಗಳೆ ಉರುಳಿದರೂ ಕಣ್ಣ ಮುಂದಿನ ಕತ್ತಲು ಹಾಗೆ ಇದೆ
ತಮಂಧತೆಗಿರುವ ಬಲ ಬೆಳಕಿಗಿಲ್ಲ ಬಿಡು 'ಆರಾಧ್ಯೆ'
*ಶ್ರೀಮತಿ ಗಿರಿಜಾ ಮಾಲಿ ಪಾಟೀಲ*
ಸಂಸ್ಥಾಪಕ ಅಧ್ಯಕ್ಷರು ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ತುಂಬಾ ಸೊಗಸಾಗಿದೆ
ಪ್ರತ್ಯುತ್ತರಅಳಿಸಿ