ಶ್ರೀ ಸತ್ಯನಾರಾಯಣ
ನಮಿಸುವೆನು ಲೋಕ ಪೂಜಿತ ಶ್ರೀ ನಾರಾಯಣ
ನಿನ್ನ ನಾಮವ ಮಾಡುವೆ ದಿನವು ಪಾರಾಯಣ
ನೋಡಲು ಪಾವನ ದೇವ ಪ್ರಸನ್ನ ವದನ
ಮುಡಿಗೇರಿಸಿ ಪೂಜಿಸುವಾಸೆ ಹೂ ವವನ...
ಸತ್ಯದ ಹಾದಿಲಿ ಸಾಗಿಸು ನಮ್ಮಯ ಜೀವನ
ಕರುಣಕರ ದೇವಾ ಶ್ರೀ ಸತ್ಯನಾರಾಯಣ
ಮನಗಳಲಿ ಪೂಜಿಸಲು ಪರಮ ಪಾವನ
ಜಗರಕ್ಷಕನೆ ನಿನ್ನಯ ಅಭಯದ ಚರಣ...
ಆಲಿಸಿ ಪಾಲಿಸುವೆ ಮನದಿ ದಿವ್ಯ ಕಥನ
ಮಾಡುವೆ ಮನದಲಿ ನಿತ್ಯ ಸ್ಮರಿಸಿ ಪಠಣ
ನಿನ್ನಯ ಆಶೀರ್ವಾದದಿ ಮನದಲಿ ನವ ಚೇತನ
ನಿನ್ನ ನಾಮವ ಕೇಳಲು ಪಾವನ ನಮ್ಮ ಕರಣ...
ಬದುಕಿಗೆ ಆಸರೆ ನೀಡಿದೆ ಮಹಾನುಭಾವ
ಧ್ಯಾನದಿ ಮೂಡಿತು ಸತ್ಯ ಭಕ್ತಿಯ ಭಾವ
ಸತ್ಯ ದೇವರ ಪೂಜೆಲಿ ಬಹುಹಿತ ಪ್ರಸಾದ
ಭಕ್ತಿಯ ಮನದಲಿ ಹರಸಿ ನೆಲೆಸು ದೇವ ಸದ...
🌹ಪುರುಷೋತ್ತಮ ಪೆಮ್ನಳ್ಳಿ🌹
ಪಾವಗಡ ತಾ ತುಮಕೂರು ಜಿ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ