ಭಾನುವಾರ, ಆಗಸ್ಟ್ 22, 2021

ಈ ಕಾಯ ಕೊಡುಗೆಯಾಗಲಿ ಮನುಜ (ದೇಹಾಂಗದಾನ ಜಾಗೃತಿ ಲೇಖನ) - ಶ್ರೀಮತಿ ದೀಪಾಲಿ ಸಾಮಂತ, ದಾಂಡೇಲಿ, ಉತ್ತರ ಕನ್ನಡ.

ಈ ಕಾಯ ಕೊಡುಗೆಯಾಗಲಿ ಮನುಜ

ಪುರಾಣ ಶಾಸ್ತ್ರಗಳಲ್ಲಿ ಹೇಳಿರುವ ಪ್ರಕಾರ ಒಂದು ಜೀವಿ ಮರಣ ಹೊಂದಿದ ನಂತರ ನಾಲ್ಕೈದು ಜನರಿಗೆ ಉಪಯೋಗವಾಗಿದ್ದಾನೆ ಎಂದರೆ ಸ್ವರ್ಗ ಪ್ರಾಪ್ತಿಯಾಗುವುದು. ಇದ್ದಷ್ಟು ದಿನ ಏನೂ ಸಾಧಿಸದೇ ಇದ್ದರೂ ಕೂಡ ಸತ್ತ ಮೇಲೆ ದೇಹದಾನ ಮಾಡಿ ಸಾರ್ಥಕತೆಯನ್ನು ಪಡೆಯಬಹುದು. ಹೃದಯ, ಕಣ್ಣು, ಮೂತ್ರಪಿಂಡ, ಶ್ವಾಸಕೋಶ, ಯಕೃತ್ತು ಮುಂತಾದ ಪ್ರಮುಖ ಅಂಗಗಳನ್ನು ದಾನ ಮಾಡುವ ಮೂಲಕ ಇನ್ನೊಬ್ಬರ ಜೀವ ಉಳಿಸಬಹುದು. ಎಲ್ಲ ದಾನಗಳಲ್ಲಿ ಮಹಾದಾನ ಎನಿಸಿಕೊಂಡ ನೇತ್ರದಾನ ಮಾಡುವುದರಿಂದ ದೃಷ್ಟಿಹೀನನು ಜಗತ್ತು ನೋಡುವಂತಾಗುತ್ತದೆ. ಹಾಗಾಗಿ ನಮ್ಮ ದೇಹದ ಅಂಗಗಳನ್ನು ದಾನ ಮಾಡುವುದು ಒಂದು ಒಳ್ಳೆಯ ಕೆಲಸವಾಗಿದೆ. ಇದರಿಂದ ಹಲವರ ಬಾಳು ಹಸನು ಮಾಡಿದ ಪುಣ್ಯ ನಮ್ಮದಾಗುತ್ತದೆ. ಸುಟ್ಟು ಬೂದಿಯಾಗಿ ಹೋಗುವ ಬದಲು ಅವಶ್ಯಕತೆಯಿರುವ ವ್ಯಕ್ತಿಗೆ ಅಂಗಾಂಗ ಕಸಿ ಮಾಡಿದರೆ ಆ ವ್ಯಕ್ತಿ ೨೫ ವರ್ಷಗಳ ಕಾಲ ಬದುಕುತ್ತಾರೆ. 'ಮರಣಿಸಿಯೂ ಅಮರ ಜೀವನಕೆ ನಾಂದಿ ಹಾಡುತ' ದೇಹದಾನವೆಂಬ ಮಹಾ ಪುಣ್ಯದ ಕಾರ್ಯ ಮಾಡೋಣ. ತನ್ಮೂಲಕ ಈ ಕಾಯ ಕೊಡುಗೆಯಾಗಲಿ ಮನುಜ ಎಂದು ಸಾರೋಣ. 



✍️ ಶ್ರೀಮತಿ ದೀಪಾಲಿ ಸಾಮಂತ, ದಾಂಡೇಲಿ, ಉತ್ತರ ಕನ್ನಡ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

1 ಕಾಮೆಂಟ್‌:

  1. ಅರ್ಥಪೂರ್ಣ ಲೇಖನ, ಬೂದಿಮಾಡುವ ಬದಲು ಒಂದು ಜೀವದ ಉಳಿವಿಗೆ ದಾರಿದೀಪವಾಗಬಹುದು. ಉತ್ತಮ ಸಂದೇಶ.

    ಪ್ರತ್ಯುತ್ತರಅಳಿಸಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...