ಗಜಲ್
ಉಯ್ಯಾಲೆ ಆಡಲು ಬಂದಳೇಕೆ ಮನ ಮೆಚ್ಚಿದ ಹುಡುಗಿ
ಮರದ ಟೊಂಗೆಗೆ ಆಸರೆ ಆದಳೇಕೆ ಮನ ಮೆಚ್ಚಿದ ಹುಡುಗಿ
ಚಂದಿರನೇ ಮಗಳನ್ನು ಧರೆಗಿಳಿದು ತರಲು
ಭೂಮಿ -ಆಕಾಶ ಜೋಡಿಸಿದನೇಕೆ ಮನ ಮೆಚ್ಚಿದ ಹುಡುಗಿ
ನಿನ್ನ ಮೊಗವು ನೋಡಬೇಕಾಗಿದೆ ಕನಸಿನ
ಅಪ್ಸರೆ ಮುಖ ತೋರದವಳೇಕೆ ಮನ ಮೆಚ್ಚಿದ ಹುಡುಗಿ
ಭೂತಾಯಿಯ ಮಡಿಲು ಕನವರಿಸಿತೇಕೆ
ರೂಪದರಸಿಯ ನೋಡಲು ಮನ ಮೆಚ್ಚಿದ ಹುಡುಗಿ
ಭೂಮಿ -ಆಕಾಶಕ್ಕೂ ನಿಲುಕದೇ ಜೀಕುವ ಜೋಕಾಲಿಯಂತೆ
ಮಾಜಾಳ ಹೃದಯ ಜೀಕುವೇಕೆ ಮನ ಮೆಚ್ಚಿದ ಹುಡುಗಿ
- ಮಾಜಾನ್, ಮಸ್ಕಿ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ