ಸೋಮವಾರ, ಆಗಸ್ಟ್ 16, 2021

ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ ಬೆಳಗಾವಿ ಜಿಲ್ಲಾ ಘಟಕ ಯರಗಟ್ಟಿಯಲ್ಲಿ ಸ್ವರಚಿತ ತರಹಿ ಗಜಲ್ ವಾಚನ ಸ್ಪರ್ಧೆ.

ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ ಬೆಳಗಾವಿ ಜಿಲ್ಲಾ ಘಟಕ ಯರಗಟ್ಟಿಯಲ್ಲಿ ಸ್ವರಚಿತ ತರಹಿ ಗಜಲ್ ವಾಚನ ಸ್ಪರ್ಧೆ:

ಯರಗಟ್ಟಿ: ಯರಗಟ್ಟಿ ತಾಲೂಕ ಘಟಕದ ಉದ್ಘಾಟನಾ ಸಮಾರಂಭದ ಅಂಗವಾಗಿ ಆನಲೈನ್  ತರಹಿ ಗಜಲ್ ವಾಚನ ಸ್ಪರ್ಧೆ ನಡೆಯಿತು.ಕಾರ್ಯಕ್ರಮವನ್ನು ಉದ್ಘಾಟಿಸಬೇಕಿದ್ದ ಶ್ರೀ ಸುಬ್ರಾಯ ಭಟ್ ಬಕ್ಕಳ ಅವರು ತಾಂತ್ರಿಕ ದೋಷದಿಂದ ಕಾರ್ಯಕ್ರಮದಲ್ಲಿ ಸೇರ್ಪಡೆಯಾಗದ ಕಾರಣ, 
ಕಾರ್ಯಕ್ರಮ ಉದ್ಘಾಟನೆಯನ್ನು ಹಿರಿಯ ಗಜಲ್ ಕವಿಯತ್ರಿ ಪ್ರಭಾವತಿ ದೇಸಾಯಿ ಅವರು ತಮ್ಮ ಸ್ವರಚಿತ ತರಹಿ ಗಜಲ್ ಓದಿ ನೆರವೇರಿಸಿ ಮಾತನಾಡುತ್ತ,ಸ್ವತಂತ್ರ ಗಜಲ್ ಬರೆಯುವುದಕ್ಕಿಂತ ತರಹಿ ಗಜಲ್ ಬರೆಯುವುದು ಕಷ್ಟ.ಬೇರೆಯವರ ಮತ್ಲಾದ ಒಂದು ಮಿಸ್ರ ಪಡೆದು ಅದರ ಭಾವದಂತೆಯೇ ಬರೆಯುವುದು ಮತ್ತು ಮೂಲ ಕವಿಯ ಭಾವಕ್ಕೆ ಧಕ್ಕೆಯಾಗದಂತೆ ಗಮನವಿಟ್ಟು ಬರೆದು ಪಡೆದ ಮಿಸ್ರ ಯಾರದು ಎಂಬುದನ್ನು ಉಲ್ಲೇಖಿಸಲೇಬೇಕು ಮತ್ಲಾದ ಕಾಪಿಯಾ ಮತ್ತು ರದೀಫ ಮಾದರಿಯಂತಿರತಕ್ಕದ್ದು ಉಳಿದ ಯಾವ ಒಂದು ಶಬ್ದವನ್ನು ಕೂಡ ಎರವಲು ಪಡೆಯತಕ್ಕದ್ದಲ್ಲ ಎಂದು ತಿಳಿಸಿದರು.

ಪ್ರಾಸ್ತಾವಿಕವಾಗಿ ಶಮಾ ಜಮಾದಾರ ಮಾತಾಡಿ ಮೂಲ ಗಜಲ್ ಕಾರರು ಆಕ್ಷೇಪ ಎತ್ತಬಹುದು ಕಾರಣ ತರಹೀ ಗಜಲ್ ರಚನೆ ಪ್ರಚಾರ ಕಡಿಮೆ ಇದೆ ಎಂದರು.

ಜಿಲ್ಲಾಧ್ಯಕ್ಷೆ ಆಶಾ ಯಮಕನಮರಡಿ ಮಾತನಾಡಿ ಬಯಲುನಾಡಿನಿಂದ ತಂಪಿನ ನಾಡು ಬೆಳಗಾವಿ ನಾಡಿನತ್ತ ಗಜಲ್ ಮುಖಮಾಡಿ ಸಮೃದ್ಧವಾಗಿ ಬರೆಯುವ ಜಾಡು ಶುರುವಾಗಿದೆ ಎಂದು ತಿಳಿಸಿದರು.
ಗಜಲ್ ರಚನೆಯಲ್ಲಿ ಕಬ್ಬಿಣದ ಕಡಲೆ..ಧ್ಯಾನಸ್ಥ ಮನೋಸ್ಥಿತಿಯಲ್ಲಿ ಬರೆಯಬೇಕು ಎಂದು ಆಶಾಜಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ.ಮಲ್ಲಿನಾಥ ತಳವಾರ ಅವರು ತಮ್ಮ ಉಪನ್ಯಾಸದಲ್ಲಿ ಮಾತನಾಡುತ್ತ...ಗಜಲ್ ಬೆಳವಣಿಗೆ ಯು ಜಿಂಕೆಯ ಓಟದಂತೆ ತನ್ನದೇ ಛಾಪು ಮೂಡಿಸಿದೆ..ಸಾಹಿತ್ಯದ  ಕೂಸಾದ..ಗಜಲ್ ಪ್ರಕಾರವು ಬೇರೆ ಭಾಷೆ,ಸಂಸ್ಕೃತಿಯಲ್ಲಿ ಬೆಳೆಯುತ್ತಿದೆ.ಗುರುಶಿಷ್ಯ ಪರಂಪರೆ ಕನ್ನಡ ಭಾಷೆಗೆ ಅವಶ್ಯ ಬರಬೇಕಿದೆ, ತರಹಿ ಗಜಲ್ ಅಹಂ ಪಡೆಯದೆ ಬೆಳೆಯಬೇಕು..ಎಂದರು.
ತರಹಿ ಗಜಲ್ ಕುರಿತು ವಿವರ ಇತಿಹಾಸ ಮಾಹಿತಿ ನಿಡಿದರು.ರಾತೋ ರಾತ್ರಿ ಗಜಲ್ ಕಾರರಾಗಲು ಸಾದ್ಯವಿಲ್ಲ..ಪ್ರಯತ್ನ ಸತತ ಬೇಕು.
ಮುಶೈರಾಗಳು...ಚರ್ಚಾ ಸಮ್ಮೇಳನಗಳು ನಡೆದು ಗಜಲ್ ಓದುವ ಕ್ರಮವನ್ನು ಕಲಿಯಬೇಕಿದೆ.ತರಹಿಯಲ್ಲಿ ರವಿ,ಕಾಫಿಯಾ ಇರುವ ಮಿಸ್ರ ತೆಗೆದುಕೊಳ್ಳಬೇಕು.. ಮತ್ಲಾದಲ್ಲಿ ಮಾತ್ರ.
ಸಾನಿ,ಊಲಾ ಬೇರೆಡೆ ಬಳಸದೆ ಮತ್ಲಾದಲ್ಲಿ ಮಾತ್ರ ಮೂಲ ಭಾವಕ್ಕೆ ಧಕ್ಕೆ ಅಗದಂತೆ ಬಳಸಬೇಕು..ಮೂಲ ಕವಿಯ ಹೆಸರು ಉಲ್ಲೇಖಿಸಿರತಕ್ಕದ್ದು ಕಡ್ಡಾಯ ಅವರ ಅನುಮತಿ ಕೇಳುವ ಅವಶ್ಯಕತೆ ಇಲ್ಲ ಎಂದರು.
ಮರಾಠಿ ಗಜಲ್ ಕಾರ ಸುರೇಶ ಭಟ್ ಅವರ ಮಿಸ್ರಾಕ್ಕೆ ಬರೆದ ೧೨೫ ಗಜಲ್ ಗಳನ್ನು ಪ್ರಕಟಿಸಿರುವುದನ್ನು ಉಲ್ಲೇಖಿಸಿದರು.
ಕನ್ನಡದಲ್ಲಿ ಗಿರೀಶ ಜಕಾಪುರೆ,ಪ್ರಭಾವತಿ ದೇಸಾಯಿ,ಜಂಬಣ್ಣ ಅಮರಚಿಂತ ಅಗ್ರಗಣ್ಯರು ಎಂದು ತಿಳಿಸಿದರು.
ತರಹಿ ಗಜಲ್ ಮುನ್ನಡೆಸಬೇಕು ಬೆಳೆಸಬೇಕು ಎಂದರು.
ಉದ್ಘಾಟಕ ಸುಬ್ಬರಾಯ ಭಟ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಗಜಲ್ ಕನ್ನಡಕ್ಕೆ ತಂದವರು ಶಾಂತರಸರು ಎಂಬುದನ್ನು ಉಲ್ಲೇಖಿಸಿದರು.ಮುಖ್ಯ ಅತಿಥಿ ಸ್ಥಾನದಿಂದ ಹಮೀದಾಬೇಗಂ ಮಾತನಾಡಿ ಉರ್ದು ಅಭ್ಯಾಸದ ಅವಶ್ಯಕತೆ ಇದೆ,ಆಧ್ಯಾತ್ಮಿಕ ಪ್ರೇಮ ಸೂಫಿಗಳು ಮತ್ತು ಕನ್ನಡ ವಚನಕಾರರು ಶರಣರಂತೆ ಲಿಂಗಾಂಗ ಸಾಮರಸ್ಯದ ಕಲ್ಪನೆ ಇದೆ ಎಂದರು.
ಅನೇಕ ಗಜಲ್ ಕಾರರು ತಮ್ಮ ಗಜಲ್ ವಾಚನ ಮಾಡಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ತರಹಿ ಗಜ಼ಲ್ ವಾಚನ ಸ್ಪರ್ಧೆಯ ನಿರ್ಣಾಯಕರಾಗಿ ಆಗಮಿಸಿದ್ದ ಶ್ರೀ. ಎಸ್. ಎ. ಅಲಿ ಅವರು, ಕಾರ್ಯಕ್ರಮದ ಬಗ್ಗೆ ಹರ್ಷ ವ್ಯಕ್ತ ಪಡಿಸಿ.. ಮಾತನಾಡಿದರು.
ಕಾರ್ಯಕ್ರಮದ ಪ್ರಾರಂಭಕ್ಕೆ ಹೇಮಾ ಭರ್ಭರಿ ಅವರು ಪ್ರಾರ್ಥನೆ ಗೀತೆ ಹಾಡಿದರು.
ನಿರ್ಮಲಾ ಅವರು ಕಾರ್ಯಕ್ರಮ ನಿರೂಪಣೆ ಮತ್ತು ಮಂಜುಶ್ರೀ ಹಾವಣ್ಣವ, ಅವರು ವಂದನಾರ್ಪಣೆ ಮಾಡಿದರು.

ವರದಿ. 
ಶ್ರೀ. ಈಶ್ವರ. ಸಂಪಗಾಂವಿ.
ಕಕ್ಕೇರಿ.



(ನಿಮ್ಮ ‌ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...