ಸೋಮವಾರ, ಆಗಸ್ಟ್ 2, 2021

ಮರೆಯಾದ ಬಂಧ (ಕವಿತೆ) - ಶ್ರೀ ಪುರುಷೋತ್ತಮ ಪೆಮ್ನಳ್ಳಿ.

ಮರೆಯಾದ ಬಂಧ

ಕಲಿಯುಗದ ಕಾಲ ನರ್ತನದ ವೇಗದಿ 
ಸಾಗುವ ಸುಳಿಯಲಿ ಸಿಲುಕಿಹೆವು
ಅರ್ಥವಾಗಲಿಲ್ಲ ಉಳಿಸುವ ಪರಿಯ
 ಬಂಧದ ಸೆಳೆತ ಅತಿ ಅಮೂಲ್ಯವೆಂದು 
ಹೇಗೆ ತಾನೇ ಉಳಿದವು ಬಂಧಗಳ  ಸೆಳೆತವು...

ನಾನು ನನ್ನದೆನ್ನುವ ಮೋಹ ಮನದಿ
ಬೆಳೆಯಿತು ಎಲ್ಲೆಯ ಮೀರಿ ಸಾಗಿ
ನಮ್ಮವರು ಯಾರೆಂದು ಸಹ ಅರಿವಲಿ
ತಿಳಿದಿಲ್ಲ ಮನದಿ ಮದವು ಸೇರಿ
ಇಲ್ಲದಾಯಿತು ಈಗ ಬಂಧದ ಸೆಳೆತ...

ಒಂದು ಒಲೆಯ ಅಡುಗೆಯು ಮಾಯ
ಒಟ್ಟಿಗೆ ಸೇರಿ ತಿನ್ನಲು ಇಲ್ಲ ಸಮಯ
ಗುರು ಹಿರಿಯರ ಮಾತು ಕೇಳುವರಿಲ್ಲ
ಬಂಧಗಳಿಗೆ‌‌ ಬೆಲೆಯೇ ಜಗದಲಿ ಇಲ್ಲ 
ಎಲ್ಲಿ ಹುಡುಕಲಿ ಬಂಧದ ಸೆಳೆತ...

ಕಲಿಕೆಗೆ ಹಾತೊರೆಯುವ ಮುಗ್ದ ಮಗುವ
ಮನಕೆ‌ ಬಾಂಧವ್ಯದ ಬೆಲೆಯ ತಿಳಿಸಲಿಲ್ಲ
ನಗದ ಮೋಹದ ಪಾಶಕೆ ಸಿಲುಕಿಸಿ ಮನವ
ಕರುಳ ಸೆಳೆತದ ಕನಿಕರದ ಯೋಚನೆಗೆ  ಬಿಡಲಿಲ್ಲ
ಇನ್ನೆಲ್ಲಿ ಸಿಗುವುದು ಪ್ರೀತಿಯ ಬಂಧದ ಸೆಳೆತ...

ನಾಟಕೀಯ ಬದುಕಿನ ಜಂಜಾಟದಿ
ಮರೆಯಾದವು ಅನುರಾಗ ಅನುಕಂಪ
ತಿಳಿದು ತಿಳಿಸಬೇಕು ಮೌಲ್ಯವ ನಾವಿಂದು
ಪಸರಿಸಲಿ ಎಲ್ಲೆಡೆ ಮಮತೆಯ ಬಿಂದು
ಅರಿತು ಉಳಿಸೋಣ ನಾವೆಲ್ಲ ಬಂಧದ ಸೆಳೆತವ...

- ಪುರುಷೋತ್ತಮ ಪೆಮ್ನಳ್ಳಿ
ಪಾವಗಡ ತಾ ತುಮಕೂರು ಜಿ
ದೂ೯೬೩೨೨೯೬೮೦೯.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

2 ಕಾಮೆಂಟ್‌ಗಳು:

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...