ಮಹಾ ನಾಯಕರು
ನಾವು ಇಂದು ಸಂತೋಷದಿ
ಆಚರಣೆ ಮಾಡುವ ಈ ಸ್ವಾತಂತ್ರ್ಯವು
ಸಾವಿರಾರು ಜನರ ಬಲಿದಾನದಿ
ಉಳಿತು ಈ ಸಡಗರ ಅನುದಿನವು//
ಸುಮ್ಮನೆ ಸ್ವಾತಂತ್ರ್ಯ ನಮ್ಮಗೆ ಸಿಕ್ಕಿಲ್ಲ
ಅದು ಸಿಗುವ ವಸ್ತುವು ಆಗಿದಿಲ್ಲ
ಸ್ವಾತಂತ್ರ್ಯ ಬರಲು ಸಾವು ನೋವು ಆದವಲ್ಲ
ಅಲ್ಲಲ್ಲಿ ಶೌರ್ಯ ತ್ಯಾಗ ದಾನ ಮೆರೆದವಲ್ಲ//
ಅಂದರು ನಮ್ಮ ವೀರ ಮನುಜರು
ಚಿಂತೆ ಇಲ್ಲ ಮಣ್ಣಲ್ಲಿ ಮಣ್ಣಾದರು
ಸ್ವಾತಂತ್ರ್ಯವ ತರಲು ಪಣ ತೊಟ್ಟರು
ನಮ್ಮ ಪೂರ್ವಜರು ಹುಟ್ಟು ಹೊರಾಟಗಾರರು//
ಅವರು ದೇಶಾಭಿಮಾನವೆ ಉಸಿರೆಂದರು
ದೇಶದ ಹೆಸರಲಿ ಅಮರರಾದರು
ಅವರಾದರು ಈ ದೇಶದ ಹೆಮ್ಮೆಯ ಮಕ್ಕಳು
ದಿನಾ ಪೂಜಿಸಲಿ ಇಂದು ಚಪ್ಪಾಳೆ ತಟ್ಟುವ ಕೈಗಳು//
ಆ ಧೀರ ಸೂರ ಮಹಾ ನಾಯಕರು
ಈ ಒಂದೇ ದಿನಕೆ ಸೀಮಿತ ಆಗದಿರಲಿ
ನಮ್ಮ ನಲಿವಿಗೆ ಕಾರಣ ಆ ಹುತಾತ್ಮರು
ಅವರು ಪೀಳಿಗೆಗೆ ಪ್ರೆರಣೆ ಆಗಲಿ//
✍ ಧ್ಯಾಮ್ ರಾಜ್.ವಾಯ್ಹ್. ಸಿಂದೋಗಿ. ಸಾ!ಭೈರಾಪೂರ, ತಾ!ಜಿ!ಕೊಪ್ಪಳ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ