ಸೋಮವಾರ, ಆಗಸ್ಟ್ 2, 2021

ಯಶಸ್ವಿಯಾಗಿ ಮೂಡಿ ಬಂದ ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆಯ ಆಧ್ಯಾತ್ಮಿಕ ಸಂವಾದ ಕಾರ್ಯಕ್ರಮ.

ಯಶಸ್ವಿಯಾಗಿ ಮೂಡಿ ಬಂದ ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆಯ ಆಧ್ಯಾತ್ಮಿಕ ಸಂವಾದ ಕಾರ್ಯಕ್ರಮ.
ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ ವಿಜಯಪುರ ಜಿಲ್ಲೆಯ ತಾಳಿಕೋಟೆ ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಆಧ್ಯಾತ್ಮಿಕ ಸಂವಾದ ಕಾರ್ಯಕ್ರಮ ತುಂಬಾ ಯಶಸ್ವಿಯಾಗಿ ಮೂಡಿ ಬಂದಿತು. ನಾಡಿನಾದ್ಯಂತ  ಸಾಕಷ್ಟು ಸಾಹಿತಿಗಳು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ 

ಆರ್.ಜಿ.ಕಿತ್ತೂರ್ ಸರ್ ಆಧ್ಯಾತ್ಮ ಎನ್ನುವುದೊಂದು ಭೂಮಿ ಮೇಲಿರುವ ಸಕಲ ಪ್ರಾಣಿಗಳಿಗಿಂತ ಮನುಷ್ಯನು ಭಿನ್ನವಾಗಿರಬಹುದು ಅವನು ಹೊಂದಿರುವ ಮನಸ್ಸಿನ ಮೂಲಕ ಮನಸ್ಸಿನಿಂದ ನಾನು ಯಾರು ಎಂದು ಚಿಂತಿಸುತ್ತಾ ತನ್ನ ಆತ್ಮದ ಮೂಲವನ್ನು ಅರಿಯುವ ಪ್ರಕ್ರಿಯೆಯನ್ನು ಆಧ್ಯಾತ್ಮ ಎಂದು ಕರೆಯುತ್ತಾರೆ ಎಂದು ಮುದ್ದೇಬಿಹಾಳದ ಹಿರಿಯ ಅನುಭಾವಿಗಳಾದ ಶ್ರೀ ರುದ್ರೇಶ್ ಕಿತ್ತೂರು ಹೇಳಿದರು ಅವರು ಆನ್ಲೈನ್ ಮೂಲಕ ಜರುಗಿದೆ ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ ವಿಜಯಪುರ ತಾಲೂಕ ಘಟಕ ತಾಳಿಕೋಟಿ ಇವರ ಆಶ್ರಯದಲ್ಲಿ  ಹಮ್ಮಿಕೊಂಡ ಆಧ್ಯಾತ್ಮ ವಿಷಯದ ಸಂವಾದ ಹಾಗೂ ಆಶುಭಾಷಣ ಸ್ಪರ್ಧೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
 "ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಹಲವರಿಂದ ಕೇಳಲಾದ ಅನೇಕ ಪ್ರಶ್ನೆಗಳಾದ  ಆತ್ಮದ ಪರಿಚಯ, ಪುನರ್ಜನ್ಮ, ದೇವರ ಸ್ವರೂಪ, ಕರ್ಮಫಲ, ಮರಣದ ನಂತರ ಆತ್ಮದ ಪಯಣ, ಪವಾಡಗಳು ನಿಜವೇ? ಎಂಬ ಮುಂತಾದ ಪ್ರಶ್ನೆಗಳಿಗೆ ವೈಚಾರಿಕ ಮತ್ತು ವೈಜ್ಞಾನಿಕ ನೆಲೆಗಟ್ಟಿನಲ್ಲಿ ಸಮರ್ಪಕವಾದ ಉತ್ತರವನ್ನು ನೀಡುತ್ತಾ. ಭಾರತೀಯ ಆಧ್ಯಾತ್ಮಿಕ ಪರಂಪರೆಯಲ್ಲಿ ಜ್ಞಾನವು ಋಷಿಮುನಿಗಳಿಂದ ಸಂಪಾದಿಸಲ್ಪಟ್ಟು ಅದು ಉಪನಿಷತ್ತುಗಳು, ವೇದಗಳು, ಸ್ಮೃತಿಗಳು ಹಾಗೂ ಪುರಾಣಗಳ ಮೂಲಕ ಯಾವ ರೀತಿಯಾಗಿ ತನ್ನ ಮೂಲ ಸ್ವರೂಪವನ್ನು ಕಳೆದುಕೊಂಡು ಮೌಢ್ಯತೆಗೆ ಜಾರಿತು ಎಂಬುದನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು. ಅಂಗವು ಸದೃಢವಾಗಿದ್ದುವಾಗ ಆಧ್ಯಾತ್ಮಿಕ ಚಿಂತನೆಯಲ್ಲಿ ತೊಡಗಿದ್ದಾರೆ ಸಾಧನೆ ಮಾಡಲು ಸಾಧ್ಯ ಆದರೆ ಆಧ್ಯಾತ್ಮ ಎನ್ನುವುದು ಕೇವಲ ವಯಸ್ಸಾದವರಿಗೆ ಎಂಬ ತಪ್ಪು ತಿಳುವಳಿಕೆಯಿಂದ ಆಧ್ಯಾತ್ಮದ ಮೂಲ ಆಶಯವನ್ನು ಅರಿಯುವಲ್ಲಿ ವಿಫಲರಾಗಿದ್ದೇವೆ ಎಂದು ವಿಷಾದಿಸಿದರು. ಜಗತ್ತಿಗೆ ಆಧ್ಯಾತ್ಮಿಕ ಗುರು ಎನಿಸಿದ ಭಾರತದಲ್ಲಿ ಜನಿಸಿದ ನಾವುಗಳೇ ಪುಣ್ಯವಂತರು ಆಧ್ಯಾತ್ಮಿಕ ಅಂಶಗಳು ಇಲ್ಲಿ ಪ್ರತಿ ಹೆಜ್ಜೆ-ಹೆಜ್ಜೆಗೂ ಸಿಗುತ್ತಿರುವುದು ಅದನ್ನು ಸರಿಯಾಗಿ ಬಳಸಿಕೊಳ್ಳುವ ಮನೋಭೂಮಿಕೆಯನ್ನು ಸಿದ್ಧಪಡಿಸಿಕೊಳ್ಳಬೇಕು" ಎಂದರು. ನಾಡಿನ ಉತ್ತಮ ಸಂಘಟಕರೂ "ವಚನ ಮಂಥನ" ಕಾರ್ಯಕ್ರಮದ ರುವಾರಿಗಳೂ ಆದ ಶ್ರೀ.ವೈ.ಕೆ ಪತ್ತಾರ್ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ "ಆಧ್ಯಾತ್ಮ ಎಂದರೆ ನಮ್ಮನ್ನು ನಾವು ನಿಯಂತ್ರಿಸಿಕೊಳ್ಳುವುದು. ಭಾರತ ಆಧ್ಯಾತ್ಮದ ತವರು. ಆಧ್ಯಾತ್ಮದ ಹಾದಿಯಲ್ಲಿ ನಾವು ನಡೆದದ್ದೇ ಆದರೆ ಬದುಕಿನಲ್ಲಿ ಉನ್ನತವಾದದ್ದನ್ನು ಸಾಧಿಸಬಹುದು" ಎಂದರು. ನಂತರ ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನು ಮಾತನಾಡಿದ ಸೋಮಶೇಖರ ಹಿರೇಮಠ ಅವರು "ಮನಸ್ಸನ್ನು ಏಕಾಗ್ರಗೊಳಿಸುವುದು ಆಧ್ಯಾತ್ಮ, ಧ್ಯಾನದ ಮೂಲಕ ಆತ್ಮವನ್ನು ಉನ್ನತಿಗೊಯ್ಯುವುದು ಆಧ್ಯಾತ್ಮವೆಂದು" ನುಡಿದರು. ಕಾರ್ಯಕ್ರಮದ ಆಶಯ ನುಡಿಯಲ್ಲಿ ಶ್ರೀಮತಿ ಗಿರಿಜಾ ಮಾಲಿ ಪಾಟೀಲ "ಆಧ್ಯಾತ್ಮ ಎಂದರೆ ಯಾವುದೇ ಒಂದು ಒಳ್ಳೆಯ ಕೆಲಸದಲ್ಲಿ ತನ್ನನ್ನು ತಾನು ಪರಿಪೂರ್ಣವಾಗಿ ತೊಡಗಿಸಿಕೊಳ್ಳುವುದು" ರಜಸ ಗುಣಗಳಿಂದ ರಾಜ್ಯ ಭಾರ ಮಾಡುವ ಅರಸನಿಗಿಂತ, ಚಿತ್ತ ಚಾಂಚಲ್ಯದಿಂದ ದೇವರ ಪೂಜೆ ಮಾಡುವ ಒಬ್ಬ  ಆರ್ಚಕನಿಗಿಂತ ಶ್ರದ್ದೆಯಿಂದ ಚಪ್ಪಲಿ ಹೊಲೆಯುವ ಕಾಯಕ ಮಾಡುವ ವ್ಯಕ್ತಿ ಖಂಡಿತಾ ಆಧ್ಯಾತ್ಮಿಕ ಅನುಭೂತಿ ಪಡೆಯುತ್ತಾನೆ ಎಂದು ನುಡಿದರು. ಕಾರ್ಯಕ್ರಮದ ಇನ್ನೊರ್ವ ಅತಿಥಿಗಳಾದ  ರಾಹುಲ್ ಮರಳಿ ಜಿಲ್ಲಾಧ್ಯಕ್ಷರು ಮಾತನಾಡಿ ಸಂಘಟನೆಯು ರಾಜ್ಯದಾದ್ಯಂತ ಪಸರಿಸಿದ್ದು ಅತ್ಯುತ್ತಮ ಕಾರ್ಯಕ್ರಮಗಳಿಗೆ ಇದು ಸಾಕ್ಷಿಯಾಗಿದೆ. ಹೊರ ರಾಜ್ಯದ ಸಾಹಿತಿಗಳನ್ನೂ ಆಕರ್ಷಿಸುವಲ್ಲಿ ಯಶಸ್ವಿಯಾಗಿದ್ದಲ್ಲದೆ. ಇದೆಲ್ಲ ನಡೆಯುತ್ತಿರುವುದು ಒಬ್ಬ ಮಹಿಳೆಯ ನೇತೃತ್ವದಲ್ಲಿ ಎನ್ನುವುದು ಒಂದು ಹೆಮ್ಮೆಯ ಸಂಗತಿ ಎಂದರು.
ತೀರ್ಪುಗಾರರಾಗಿ ರಾಜ್ಯ ಸಂಚಾಲಕರು ಶ್ರೀಮತಿ ಆಶಾ.ಎಸ್.ಯಮಕನಮರಡಿಯವರು ಮಾತನಾಡಿ ಆಶುಭಾಷಣ ಸ್ಪರ್ಧೆಯಾಗಿದ್ದು ಕೊಟ್ಟಿರುವ ವಿಷಯದ ಕುರಿತು ಮೂರು ನಿಮಿಷ ಮಾತ್ರ ಮಾತನಾಡಲು ಅವಕಾಶ ಕಲ್ಪಿಸಿದಾಗ್ಯೂ ಸಾಕಷ್ಟು ಪ್ರಭುತ್ವದಿಂದ ಸ್ಪರ್ಧಿಗಳು ಮಾತನಾಡಿದ್ದು ಮತ್ತು ವಿಭಿನ್ನ ವಿಚಾರದಾರೆಗಳು ಹರಿದು ಬಂದಿದ್ದು ಕಾರ್ಯಕ್ರಮ ಒಂದು ಅರ್ಥಪೂರ್ಣ ಗಳಿಗೆಗೆ ಸಾಕ್ಷಿಯಾಯಿತು" ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಇನ್ನೊರ್ವ ರಾಜ್ಯ ಸಂಚಾಲಕರಾದ ಶ್ರೀಮತಿ ಶೋಭಾ ನಾಗಭೂಷಣ ಮೈಸೂರು ಇವರು ಮಾತನಾಡಿ "ಭಾಗವಹಿಸಿ ಕವಿಗಳೆಲ್ಲರೂ ವಿಷಯದ ಸಾರವನ್ನು ತಿಳಿದು ಮಾತನಾಡಿರುವುದು ಪ್ರತಿಯೊಬ್ಬರ ಪ್ರಭುತ್ವಕ್ಕೆ ಹಿಡಿದ ಕನ್ನಡಿಯಾಗಿದೆ. ಎಂದರು ಹಾಗೂ ಆಧ್ಯಾತ್ಮಿಕ ವಿಷಯಕ್ಕೆ ಸಂಬಂಧಿಸಿದ ಹಲವಾರು ವಿಷಯಗಳನ್ನು ತಿಳಿಯಲು ಕಾರ್ಯಕ್ರಮ ಸಹಾಯವಾಯಿತು. ಎಂದು ನುಡಿದರು  ಕುಮಾರಿ ಸ್ಪೂರ್ತಿ ಕನಸಾವಿ ಅವರು ಉತ್ತಮವಾಗಿ ನಿರೂಪಣೆ ಮಾಡಿದರು. ಸೋಮಶೇಖರ್ ಹಿರೇಮಠ ಪ್ರಾರ್ಥಿಸಿದರು. ಹಾಗೂ ಡಾ.ರವಿ ದಾನಿ, ಕಾಳಿಹುಂಡಿ ಶಿವಕುಮಾರ್, ಸುರೇಶ್ ನೆಗಳಗುಳಿ, ಮಂಜುಳಾ ಇಲ್ಕಲ್, ಭಾಗ್ಯ ಗಿರೀಶ್, ಮಲ್ಲಿಕಾರ್ಜುನ ವಿಜಯಪುರ ಮುಂತಾದವರು ಭಾಗವಹಿಸಿದ್ದರು.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...