ಜನನಾಯಕರು
ನಾಯಕರು ಇವರು
ಜನನಾಯಕರು,
ಜನರ ಪಾಲಿಗೆ
ವಂಚಕರು,
ನಂಬಿಕೆಗೆ ಮೋಸ
ಮಾಡುವ ನಯ ವಂಚಕರು,
ಜನರ ಹೊಟ್ಟೆಯ
ಮೇಲೆ ಕಾಲು
ಇಡುವ ಲಪಂಗ ರು
ಆಸೆ ತೋರಿಸಿ
ಬಾವಿಗೆ ತಳ್ಳುವ
ನಾಲಾಯಕ್ ರು,
ಬಡವರ ಕಣ್ಣಿಗೆ
ಕಾರ ಹಾಕುವ
ಕಟುಕರು
ನಾಯಕರು ಇವರು ಜನನಾಯಕರು
ಹೆದರಬೇಡಿ ಹೆದರಬೇಡಿ ಹೇಳಿ
ಮರೆಯಾಗುವ ಮೋಸಗಾರರು,
ನೆರೆ ಬಂದು
ಬಾಯಿ ಬಾಯಿ
ಬಡೆದ ರೂ,
ರಕ್ಷಣೆ ಬಾರದ
ಇವರು ನಾಯಕರು
ಜನನಾಯಕರು
ಮತಕ್ಕಾಗಿ ತಿರುಗಾಡಿ
ಆರಿಸಿ
ಬಂದಮೇಲೆ
ಮತದಾರರ ಕಡೆ
ವಿಚಾರ ಮಾಡದ
ಇವರು ನಾಯಕರು
ಜನನಾಯಕರು
ಹಣ ಹೆಂಡಕ್ಕಾಗಿ
ಕೈಚಾಚುವ ಮತದಾರರೇ
ಇನ್ನಾದರೂ ವಿಚಾರ ಮಾಡಿ,
- ದಯಾನಂದ ಪಾಟೀಲ್
ಲೇಖಕರು ಹಾಗೂ ವಿಮರ್ಶಕರು.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ