ಬೊನ್ಸಾಯ್ ಗಿಡ ಬೆಳೆಸೋಣ ಆಮ್ಲಜನಕ ಪಡೆಯೋಣ
ಬೊನ್ಸಾಯ ಗಿಡ ಎಂದರೆ ಜಪಾನಿ ಭಾಷೆಯಲ್ಲಿ ಬೊನ್ ಎಂದರೆ ಕುಂಡ,ಸಾಯ್ ಎಂದರೆ ಮರ ಎಂದರ್ಥ. ಹೀಗೆಂದರೆ ಕುಂಡದಲ್ಲಿ ಮರ ಬೆಳೆಸುವುದು ಎಂದಥ೯ವಾಗುತ್ತದೆ.ಇದು ಮೂಲ ಭಾರತೀಯರಾದ ಶರಣರ, ಸಂತರ,ದಾರ್ಶನಿಕರೆಲ್ಲರೂ ಈ ಸಸಿಗಳನ್ನು ಬೆಳೆಸುವ ಕಾಯಕವನ್ನು ಮಾಡಿಕೊಂಡು ಬರುತ್ತಿದ್ದರು ಎಂಬ ಮಾಹಿತಿ ಇದೆ. ಅದೇ ಪ್ರಕಾರ ಅವರೆಲ್ಲರೂ ಪರಿಸರ, ಅರಣ್ಯ ರಕ್ಷಣೆಯ ಕೆಲಸ ಮಾಡಿದರಿಂದಲೇ ನಮಗೆ ಇಷ್ಟು ವರ್ಷಗಳ ಕಾಲ ಯಾವುದೇ ರೀತಿಯಿಂದ ಅಂದರೆ ಪ್ರಕೃತಿಯಿಂದ ಹಾನಿ ಸಂಭವಿಸಿದೇ ನಾವು ಸುಖವಾಗಿ ಬಾಳಿದೇವೆ ಎನ್ನಬಹುದು.ಆದರೆ ಬರು ಬರುತ್ತಾ ಕಾಡುಗಳನ್ನು ನಾಶ ಮಾಡಿ, ನಗರಗಳನ್ನು ನಿರ್ಮಿಸಿ, ನಮ್ಮ ಬೆನ್ನೇ ನಾವು ತಟ್ಟಿಗೊಂಡು, ನಾವೇ ಶ್ರೇಷ್ಠರು ಎಂದು ಎದೆ ಉಬ್ಬಸಿ ಬದುಕುತ್ತಿದ್ದೇವಲ್ಲಾ,ಇದೇ ನೋಡಿ ನಮ್ಮ ಅಹಾಂಕರಕ್ಕೆ ಕೊಡಲಿ ಪೆಟ್ಟು ಬಿದ್ದಿದ್ದು, ಹಾಕಿದ್ದು.........ಹೀಗೆ ದಿನಗಳು ಉರುಳಿದಂತೆ ಇದೆಲ್ಲಾ ನಾವುಗಳು ಮರೆತು ಹೋಗಿ ಹಲವು ವರ್ಷಗಳೇ ಕಳೆದು ಹೋಗಿವೆ. ಸಧ್ಯದ ದಿನಮಾನಗಳಲ್ಲಿ ಈ ಚಟುವಟಿಕೆಗಳು ವಿದೇಶಿಗರ ಆಸಕ್ತಿ ಜೊತೆಗೆ ಅವರ ಪಾಲಾಗಿರುವುದು ಕಾಣುತ್ತವೆ.ಇದು ನಮ್ಮ ದುರಂತ ಎನ್ನಬಹುದು. ಭಾರತೀಯರಾದ ನಾವು ಬೊನ್ಸಾಯ್ ಗಿಡ ಬೆಳೆಸುವ ಬಗೆ ಯೋಚನೆ ಖಂಡಿತಾ ಮಾಡುತ್ತಿಲ್ಲ. ಕಾರಣ ನಮ್ಮಲ್ಲಿ ಆಸಕ್ತಿ, ಅಭಿಮಾನ, ನಿಸ್ವಾರ್ಥ ಸೇವೆ, ಅರಣ್ಯ ಸಂಪತ್ತು ರಕ್ಷಣೆ ಮಾಡಬೇಕೆಂಬ ಪರಿಜ್ಞಾನವೇ ಇಲ್ಲ. ಇನ್ನು ಅರಣ್ಯ ಸಂಪತ್ತು, ಪರಿಸರ ಸಂರಕ್ಷಣೆ ಮಾಡಬೇಕೆಂಬ ಕನಿಷ್ಠ ತಿಳುವಳಿಕೆ ಸಹ ಇಲ್ಲದಿರುವುದು ದುರಂತ ಎನ್ನಬಹುದು. ಹೀಗಾಗಿಯೇ ಇಂದು ನಮಗೆ ಆಕ್ಸಿಜನ್ ಸಮಸ್ಯೆ ಎದುರಾಗಿದೆ. ಆದಕಾರಣ ಈಗಲಾದರೂ ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಂಡು, ಮುಂದೆ ಬರಲಿರುವ ಭಯಂಕರ ಸಮಸ್ಯೆಗಳನ್ನು ಎದುರಿಸುವ ನಿಟ್ಟಿನಲ್ಲಿ ಮನೆಗೊಂದು, ಮಕ್ಕಳಿಗೊಂದು ಎನ್ನುವಂತೆ ಪ್ರತಿ ವರ್ಷ ಒಂದೊಂದು ಸಸಿಗಳನ್ನು ನೆಟ್ಟು, ಜೊಪಾನವಾಗಿ ಬೆಳೆಸುವ ಮೂಲಕ ಪರಿಸರ ರಕ್ಷಣೆ ಮಾಡುವುದು ಸೇರಿದಂತೆ ಅರಣ್ಯ ಸಂಪತ್ತು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ನಾವೆಲ್ಲರೂ ಮುಕ್ತ ಮನಸ್ಸಿನಿಂದ ಹೆಜ್ಜೆ ಹಾಕಬೇಕು, ಅಂದಾಗಲೇ ಮಾತ್ರ ನಾವೆಲ್ಲರೂ ಸುಖಕರವಾಗಿ ಬಾಳಲು ಸಾಧ್ಯ, ಇಲ್ಲವಾದಲ್ಲಿ ಆ ಘನ ಘೋರ, ಕಲ್ಪನೆಗೂ ಮೀರಿದ ಅನಾಹುತಗಳಿಗೆ ಬಲಿಯಾಗಲು ಸಿದ್ದರಾಗಲೇಕು.ಆದಕಾರಣ ಬಂಧುಗಳೇ ಇಂತಹ ಭಯಂಕರವಾದ ಸಂಕೋಲೆಗಳನ್ನು ಮೆಟ್ಟಿ ನಿಲ್ಲಲು ನಮ್ಮಲ್ಲಿ ಉಳಿದ ಏಕೈಕ ಅಸ್ತ್ರ ಒಂದೇ ಅದುವೇ ಪರಿಸರ ಕಾಪಾಡುವುದು.
ಹಾಗಾಗಿಯೇ ಬರುವ ಎಲ್ಲಾ ರೀತಿಯ ಕಷ್ಟಗಳಿಗೆ ಒಂದೇ ಉಪಾಯ, ಅದುವೇ ಪರಿಸರ ರಕ್ಷಣೆ - ಸಂರಕ್ಷಣೆ ಎಂಬುದು ಅರಿತು, ಹೆಚ್ಚು ಹೆಚ್ಚಾಗಿ ಸಸಿಗಳನ್ನು ನೆಟ್ಟು,ಬೆಳೆಸುವ ಕೆಲಸ ಮಾಡಬೇಕು ಮತ್ತು ಆಗಲೇಬೇಕು. ಹೀಗಾದಾಗ ಮಾತ್ರ ನಾವೆಲ್ಲರೂ ಸ್ವಚ್ಚಂದವಾಗಿ ಬಾಳಲು ಸಾಧ್ಯ. ಆದ್ದರಿಂದ ನಾವೆಲ್ಲರೂ ಬೋನ್ಸಾಯ್ ಸಸ್ಯಗಳು ನಮ್ಮ ನಮ್ಮ ಮನೆಯಲ್ಲಿಯೇ ನೆಟ್ಟು ಪುಟ್ಟ ಕಾಡು ನಿಮಿ೯ಸಿಕೊಂಡರೆ ಬೇಕಾದಷ್ಟು ಆಮ್ಲಜನಕ ಪಡೆಯಬಹುದಾಗಿದೆ. ಈ ಬೊನ್ಸಾಯ್ ಗಿಡಗಳು ಆಮ್ಲಜನಕವನ್ನು ಅಧಿಕವಾಗಿ ಕೊಡುವ ಮೌಲ್ಯದ ಗಿಡಗಳಾಗಿವೆ ಎನ್ನುವುದು ಸತ್ಯ.
ಹೀಗಾಗಿ ಮನೆಯಲ್ಲಿರುವ ಎಲ್ಲರೂ ಈ ಕಾಯಕ ರೂಢಿಸಿಕೊಂಡರೆ ಪರಿಸರ ಸಂರಕ್ಷಣೆ ಮಾಡಲು ತುಂಬಾ ಸಹಕಾರಿಯಾಗುತ್ತದೆ.ಎಲ್ಲರೂ ಮನೆಯಲ್ಲೊಂದು ,ಮನೆಯ ಆವರಣದಲ್ಲೊಂದು ಪುಟ್ಟ ಕಾಡು ನಿಮಿ೯ಸುವ ಮೂಲಕ ಈಗ ಬಂದ ಭಯಂಕರ ಕೊರೊನಾ ಮಾಹಾಮಾರಿ ರೋಗವನ್ನು ತಡೆಗಟ್ಟಲು ಹಾಗೂ ಹೊಡೆದೊಡಿಸಲು ಸಾಧ್ಯವಾಗುತ್ತದೆ ಎಂಬ ನಂಬಿಕೆ ನಮ್ಮದು, ಮುಂದಿನದು ತಮಗೆ ಬಿಟ್ಟ ವಿಚಾರ.
*ಕಾಡು ಬೆಳೆಸಿ ನಾಡು ಉಳಿಸಿ*
*ಪರಿಸರಂ ವಂದೇ ಜಗದ್ಗುರು*
ಮನೆಯಲ್ಲೊಂದು ಪುಟ್ಟ ಕಾಡು ಬೆಳಗುವುದು ನಾಡು.
- ಸಂಗಮೇಶ ಎನ್ ಜವಾದಿ, ಬೀದರ ಜಿಲ್ಲೆ.
ಪರಿಸರ ಸಂರಕ್ಷಕ, ಸಮಾಜಿಕ ಕಾರ್ಯಕರ್ತ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ