ಭಾನುವಾರ, ಆಗಸ್ಟ್ 22, 2021

ಯಶಸ್ವಿಯಾಗಿ ನಡೆದ ರಾಜ್ಯ ಮಟ್ಟದ ಆನ್ ಲೈನ್ ಗಜಲ್ ಸಂವಾದ ಕಾರ್ಯಕ್ರಮ - ತನುಶ್ರೀ ಪ್ರಕಾಶನ ಸೂಲೇನಹಳ್ಳಿ.

ಯಶಸ್ವಿಯಾಗಿ ನಡೆದ ರಾಜ್ಯ ಮಟ್ಟದ ಆನ್ ಲೈನ್ ಗಜಲ್ ಸಂವಾದ ಕಾರ್ಯಕ್ರಮ - ತನುಶ್ರೀ ಪ್ರಕಾಶನ ಸೂಲೇನಹಳ್ಳಿ.

ದಿ : ೨೦/೦೮/೨೦೨೧ ರಂದು ತನುಶ್ರೀ ಪ್ರಕಾಶನ ಸಂಸ್ಥೆ ಸೂಲೇನಹಳ್ಳಿ ವತಿಯಿಂದ ಆಯೋಜಿಸಿದ್ದ ಆನ್‌ಲೈನ್ ರಾಜ್ಯ ಮಟ್ಟದ ಗಜಲ್ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿತ್ತು ಆದರಲ್ಲಿ ಗಜಲ್ ರಚನೆ ಮತ್ತು ರೂಪುರೇಷೆಗಳ ಕುರಿತು ಉಪನ್ಯಾಸ ನೀಡಲು ಶ್ರೀಯುತ ಶಿವಪ್ರಕಾಶ ಕುಂಬಾರ (ನಂರುಶಿ) ಕಡೂರು ಹೊಳಲ್ಕೆರೆ ತಾಲ್ಲೂಕು ಖ್ಯಾತ ಗಜಲ್ ಕವಿಗಳು ತಮ್ಮ ಉಪನ್ಯಾಸದಲ್ಲಿ ಮಾತನಾಡುತ್ತಾ ಗಜಲ್ ಹೇಗೆ ಬರೆಯಬೇಕು ಆದರ ಲಕ್ಷಣಗಳು ಹೇಗಿರುತ್ತದೆ ಯಾವ ತೆರೆನಾದ ರೂಪಗಳು ಒಳಗೊಂಡಿವೆ ಎಂದು ವಿವರಿಸಿ ಸಂಪೂರ್ಣ ಮಾಹಿತಿ ನೀಡಿದರು ಅಷ್ಟೇ ಅಲ್ಲದೇ ಕವಿಗಳು ಗಜಲ್ ಕುರಿತು ಕೇಳಿದ ಪ್ರಶ್ನೆಗಳಿಗೆ ಸಂವಾದ ಮೂಲಕ ಸಮರ್ಪಕವಾಗಿ ಉತ್ತರ ಕೊಟ್ಟರು ಕವಿಗಳು ಇವರ ಮಾಹಿತಿಗೆ ಧನ್ಯವಾದಗಳು ಸಲ್ಲಿಸಿದರು. ನಂತರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀಯುತ ಜಭೀವುಲ್ಲಾ ಎಂ. ಆಸದ್ ಮೊಳಕಾಲ್ಮೂರು ಗಜಲ್ ಕವಿಗಳು ತಾವು ಮಾತನಾಡಿ ಗಜಲ್ ಅಂದರೆ ಏನು ಯಾವ ಪ್ರಕಾರ ಗಜಲ್ ಗಳಿವೆ ಪ್ರಸ್ತುತ ಕನ್ನಡ ಸಾಹಿತ್ಯದಲ್ಲಿ ಯಾವ ಗಜಲ್ ಆಳವಡಿಸಿಕೊಳ್ಳುವುದರ ಮೂಲಕ ಬರೆಯುತ್ತಿದ್ದಾರೆ ಎಂಬ ಒಟ್ಟಾರೆ ಮಾಹಿತಿ ನೀಡಿದರು. ಹಾಗೆಯೇ ಸಂವಾದ ಕಾರ್ಯಕ್ರಮ ಕುರಿತು ಪ್ರಾಸ್ತಾವಿಕ ನುಡಿ ಕು. ಸಿಂಚನ ಜಿ. ಎನ್. ಮೈಸೂರು ಪ್ರಧಾನ ಮಹಿಳಾ ಸಂಚಾಲಕರು ತನುಶ್ರೀ ಪ್ರಕಾಶನ ಸೂಲೇನಹಳ್ಳಿ ಇವರು ಸಂಸ್ಥೆ ಚಟುವಟಿಕೆ ಮತ್ತು ನಿರಂತರ ಪ್ರಗತಿ ಕುರಿತು ಮನ ಮುಟ್ಟುವ ರೀತಿಯಲ್ಲಿ ತಿಳಿಸಿಕೊಟ್ಟರು. ಆನಂತರ ತನುಶ್ರೀ ಪ್ರಕಾಶನ ಸಂಸ್ಥೆ ಪ್ರಕಾಶಕರು ಆದ ಎಸ್. ರಾಜು ಸೂಲೇನಹಳ್ಳಿ ಸರ್ವರಿಗೂ ಸ್ವಾಗತ ಕೋರಿದರು ಬಳಿಕ ಸಂಸ್ಥೆಯ ಕಾರ್ಯಗಳು ಹಾಗೂ ಮುಂದಿನ ಯೋಜನೆಗಳು ಏನಿವೆ ಎನ್ನುವುದನ್ನು ಎಲ್ಲರಿಗೂ ಹೇಳಿದರು. ಸಂಸ್ಥೆಯ ಉದ್ದೇಶಗಳು ಬಗ್ಗೆ ರಾಜ್ಯ ಸಂಚಾಲಕರು ಆದ ಕೆ. ಶ್ರೀಧರ್ ಅವರು ತಮ್ಮ ನುಡಿಗಳಲ್ಲಿ ಸವಿಸ್ತಾರವಾಗಿ ಅರ್ಥ ಆಗುವ ಶೈಲಿಯಲ್ಲಿ ಹೇಳಿದರು. ಹಾಗೆಯೇ ಕಾರ್ಯಕ್ರಮ ನೀರ್ವಹಣೆ ಸುಹಾಸ್ ಎಂ ಕನ್ನಾಯಕನಹಳ್ಳಿ ಮಾಧ್ಯಮ ಸಂಚಾಲಕರು ತನುಶ್ರೀ ಪ್ರಕಾಶನ ಸೂಲೇನಹಳ್ಳಿ ನಡೆಸಿಕೊಟ್ಟರು. ಕೊನೆಯದಾಗಿ ಕಾರ್ಯಕ್ರಮ ವಂದನಾರ್ಪಣೆ ಕು. ನೇತ್ರಾವತಿ ನೆಲ್ಲಿಕಟ್ಟೆ ನೇರವೇರಿಸಿದರು ಈ ದಿನದ ಗಜಲ್ ಸಂವಾದ ಕಾರ್ಯಕ್ರಮದಲ್ಲಿ ಒಟ್ಟು ೩೦ ಕ್ಕೂ ಹೆಚ್ಚು ಕವಿಗಳು ಭಾಗವಹಿಸಿದ್ದರು.

(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...