ಸೂರ್ಯೋದಯ
ಉದಯಿಸುತಿಹನು ನೇಸರ
ಮುಂಜಾನೆಯಲಿ
ಮುಗುಳ್ನಗುತಿಹನು ಈತ
ಬಾನಿನಲಿ
ಕೆಂಪಾದ ಮೋಡದ ತಿಳಿ
ಆಗಸದಲಿ
ತಂಪಾದ ತಂಗಾಳಿ ಪ್ರಕೃತಿಯ
ರಮ್ಯತೆಯಲಿ
ನಿಸರ್ಗದ ಸುಂದರ
ವಾತಾವರಣದಲಿ
ಸುಯ್ಯೆಂದು ಗಾಳಿ
ಬೀಸುವ ಸಮಯದಲಿ
ತೆಂಗಿನ ಗರಿಗಳ
ಸದ್ದಿನ ಜೊತೆಯಲಿ
ಶಾಂತವಾಗಿ ಮಿನುಗುವ
ಸಮುದ್ರದ ಬಳಿಯಲಿ
ಒಂದರಮೇಲೊಂದು ಬರುವ
ಅಲೆಗಳ ಸಪ್ಪಳ ಕೇಳುತಲಿ
ಭಾಸ್ಕರನ ಪ್ರತಿಬಿಂಬವೇ
ಸಾಗರಿಯ ಕಡಲ ಒಡಲಿನಲಿ
ಒಮ್ಮೊಮ್ಮೆ ಮೋಡಗಳ
ಮರೆಯಲಿ
ಮುಂಜಾವು ಬೆಳಕಿನ ಸೊಬಗಲಿ...
- ಕು. ನಿತ್ಯಶ್ರೀ ಆರ್ ಶಿವಮೊಗ್ಗ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ