ಸ್ನೇಹ ಹೇಗಿರಬೇಕು
ಸ್ನೇಹ ಎಂದರೆ ಏನು ಗೆಳೆಯ ಗೊತ್ತಾ
ತಿಳಿ ಹೇಳು ಮತಿಹೇಳು ಸತ್ಯವ ಹೇಳು
ಹಸಿವೆಗೆ ಬೇಕಾದ ಅನ್ನದಂತಿಬೇಕು ಗೊತ್ತಾ
ಹೇಳಿಕೆ ಮಾತಿಗೆ ಕಿವಿಗೊಡಬಾರದು ಗೊತ್ತಾ
ಒಂದೇ ಮಣ್ಣಲ್ಲಿ ಕೂಡಿ ಬಾಳುವಂತಿರಬೇಕು
ಒಟ್ಟಿಗೆ ಚಿಗುರುವ ಹಸಿರು ಬೆಳೆಯಂತಿರಬೇಕು
ಸ್ನೇಹವೆಂದು ಹಾವು ಮುಂಗುಸಿಯಂತಿರಬಾರದು
ಸ್ನೇಹವೆಂದರೆ ಚುಕ್ಕಿ ಚಂದ್ರಮನಂತೆ
ಹೊಳಪಲಿ ಮಿನುಗುವಂತಿರಬೇಕು
ಸ್ನೇಹವೆಂದು ಹಾಲು ಜೇನಿನಂತಿರಬೇಕು
ಸ್ನೇಹ ಶಾಶ್ವತ ಪ್ರಕೃತಿಯಂತಿರಬೇಕು
ಸ್ನೇಹವೆಂದು ಮುಳ್ಳು ಕಲ್ಲಂತೆ ಇರಬಾರದು
ಸ್ನೇಹವೆಂದು ಕಷ್ಟಕ್ಕೆ ಔಷಧಿಯಂತೆ ಇರಬೇಕು
ಸ್ನೇಹ ತನ್ನ ಜೀವ ಉಳಿಸುವ ಗಾಳಿಯಂತಿರಬೇಕು
ಸ್ನೇಹನೆ ಕಾಣೋ ಬಂಧುಬಳಗ ನಂಬಿದರೆ
ಸ್ನೇಹ ನಮಗೆ ಜೀವವ ಉಳಿಸುವ ಹೃದಯವು
ಸ್ನೇಹವೆಂದರೆ ಅಮೃತದಂತಿರಬೇಕು
ಬಾಳಿನ ಜೊತೆಯಲ್ಲಿ ಈ ಭೂಮಿಯ ಜೊತೆಯಲ್ಲಿ
ಸ್ನೇಹವೆಂದು ಹಂದಿ ನಾಯಿಯಂತೆ ಆಗಬಾರದು
ಸ್ನೇಹವೆಂದರೆ ಜೋಡಿಗಿಳಿಗಳಂತಿರಬೇಕು
ಸ್ನೇಹವೆಂದರೆ ಪರಿಮಳದಲ್ಲಿನ ಮಧುವಿನಂತಿರಬೇಕು
ಸ್ವಾರ್ಥಕ್ಕಾಗಿ ಬಾಳುವ ಸ್ನೇಹದಿಂದ ದೂರವಿರಬೇಕು
ಒಳ್ಳೆ ಸ್ನೇಹಕ್ಕೆ ಪ್ರೀತಿಗೆ ಪ್ರಾಣ ಕೊಡು
ಒಳಗೊಂದು ಹೊರಗೊಂದು ನೀ ಬಿಟ್ಟುಬಿಡು
ಸ್ನೇಹ ಎಂದೆಂದು ಚಿರಕಾಲ ಬಾಳುವಂತಿರಲಿ
ಸ್ನೇಹ ಎರಡು ಕಣ್ಣಿನ ಪ್ರತಿಬಿಂಬದಂತಿರಬೇಕು
- ಜಿ ಟಿ ಆರ್ ದುರ್ಗ
ಜಿ ಹೆಚ್ ಎಸ್
ಬಂಗಾರಪೇಟೆ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ