ನಿನ್ನ ಪ್ರೀತಿಯು ನನಗೆ ಸ್ವಂತ
ನಿನ್ನ ಪ್ರೀತಿಯು ನನಗೆ ಸ್ವಂತ!!
ಕೇಳು ಬಾರೆ ಓ ಕಾಂತ !!
ನಿನ್ನ ಚೆಂದಕ್ಕೆ ಶರಣಾದನಲ್ಲೆ ಈ ದೂತ !!
ನಿನ್ನ ಮನವದು ನನಗಿಲ್ಲ ಜೀವಂತ!!
ನಿನ್ನ ಗೆಜ್ಜೆ ನಾದವ ಕೇಳಿ ಕನಸುಗಳ ಕಟ್ಟಿದವನು ನಾನು !!
ನಿನ್ನ ಕಣ್ಣ್ ನೋಟಕ್ಕೆ ಬಲಿಯಾದವನು ನಾನು!!
ನನ್ನ ಉಸಿರಿನ ಪ್ರತಿ ಬಡಿತವು ನೀನಾಗಿರುವೆ !!
ನಿನ್ನ ಪುಟ್ಟ ಹೃದಯದೊಳು ನಾ ಬಂಧಿಯಾಗಿರುವೆ !!
ನೀ ಕರೆದೆ ನನ್ನ !!
ನಾ ನೋಡಲಿಲ್ಲ ಚಿನ್ನ!!
ಯಾಕೆಂದರೆ ಕೇಳು ರನ್ನ !!
ಅಲ್ಲಿ ಇರುವನು ನಿನ್ನ ಅಣ್ಣ 🤫!!
ಕೇಶರಾಶಿಯ ಧರಿಸಿರುವ ನಿಸರ್ಗದ ದೇವತೆ !!
ಸಮುದ್ರದ ಮುತ್ತು ನಿನಗೆ ಬಾ ನನ್ನ ಜೊತೆ!!
ನಿನಗೆ ಕಾಲು ಉಂಗುರವನ್ನು ತೋಡಿಸುವ ಬಯಕೆ !!
ಈಡೇರಿಸುವೆಯ ನೀ ಜೋಕೆ !!!
ಅತ್ತ ಇತ್ತ ನೋಡಲಿ ಎತ್ತಾ !!
ಕುಳಿತಿರುವೆ ಸಂದೇಶ ರವಾನಿಸುತ್ತಾ!!
ದೂರ ಇರುವುದು ಅವಳಿಗೆ ಇಷ್ಟ!!
ನಾನೇಕೆ ಕೊಡಲಿ ಸುಮ್ಮ್ನೆ ಕಷ್ಟ!!
- ಸೋಮೇಶ್ ಪ್ರಚಂಡಿ, ಕಣೇಕಲ್.
ವಿಚಾರ ಮಂಟಪ ಸಾಹಿತ್ಯ ವೇದಿಕೆ ಜಿಲ್ಲಾ ಘಟಕ ಯಾದಗಿರಿಯ ಜಂಟಿ ಕಾರ್ಯದರ್ಶಿ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಸೂಪರ್
ಪ್ರತ್ಯುತ್ತರಅಳಿಸಿ