"ಗುರು ದೇವೋ ಭವ"
ಶಿಕ್ಷಕರೆಂದರೆ ಹೀಗಿರಬೇಕು,
ಸರ್ವಪಲ್ಲಿ ರಾಧಾಕೃಷ್ಣನ್ ಆಗಿರಬೇಕು.
ಅರಿತರು ಶಿಷ್ಯರ ಮನಸ್ಸು,
ಈಡೇರಿಸಿದರು ವಿದ್ಯಾರ್ಥಿಗಳು ಕನಸ್ಸು...!
ದೇವರಾಗಿ ಆಗಮಿಸಿದ ಈತ,
ರಾಧಾಕೃಷ್ಣನ್ ಎಂಬ ಶಿಕ್ಷಣದಾತ.
ಶಿಕ್ಷಣ ಬೋಧನೆ ಇವರ ಕಾಯಕ,
ಸಾವಿರಾರು ವಿದ್ಯಾರ್ಥಿಗಳಿಗೆ ಇವರೇ ನಾಯಕ....!
ಕೊನೆಗೊಂದು ಕಾಲ ಆದರೂ ಉಪರಾಷ್ಟ್ರಪತಿ,
ಎಂದೆಂದಿಗೂ ಇವರೇ ಶಿಕ್ಷಣದ ಅಧಿಪತಿ..
ಬಿಳ್ಕೊಟ್ಟರು ವಿದ್ಯಾರ್ಥಿಗಳು ತುಂಬಾ ನೋವಿನಿಂದ,
ರಾಧಾಕೃಷ್ಣನ್ ನುಡಿದರು ಇವರು ಎಂದೆಂದಿಗೂ ನಮ್ಮ ಕಂದ...!
ಜಗದಲ್ಲಿ ಹುಟ್ಟಬೇಕು ಇಂತಹ ಶಿಕ್ಷಕ,
ಆಗ ಯಾರು ಆಗುವುದಿಲ್ಲ ಭಿಕ್ಷುಕ.
ನಾಡಿನ ಎಲ್ಲ ಶಿಕ್ಷಕರು ಆಗಬೇಕು ಸರ್ವಪಲ್ಲಿ,
ಜಗ ತುಂಬಿ ಹರಿಯುವುದು ಜ್ಞಾನದಲ್ಲಿ.....!
" ಸಮಸ್ತ ಕರುನಾಡಿನ ಶಿಕ್ಷಕ ವೃಂದಕ್ಕೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು "
- ಅಂಬರೀಶ್ D. ನಾಯ್ಕೋಡಿ.
ತಾಲೂಕು ಜೇವರ್ಗಿ, ಜಿಲ್ಲಾ ಕಲಬುರ್ಗಿ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ