ಮಂಗಳವಾರ, ಸೆಪ್ಟೆಂಬರ್ 14, 2021

ಶರಣರ ಪರಿಚಯ ಸ್ಪರ್ಧೆ ಫಲಿತಾಂಶ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭ :ಪ್ರಥಮ ಬಹುಮಾನ ಪಡೆದ ಕು. ನೇತ್ರ ಎಸ್ ದರಸಗುಪ್ಪೆ .

ಶರಣರ ಪರಿಚಯ ಸ್ಪರ್ಧೆ ಫಲಿತಾಂಶ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭ :ಪ್ರಥಮ ಬಹುಮಾನ ಪಡೆದ  ಕು. ನೇತ್ರ ಎಸ್ ದರಸಗುಪ್ಪೆ  

 ಕ್ರಾಂತಿ ಹಾಗೂ ಜಗಜಂಪಿ ಬಜಾಜ ಮಾಸಪತ್ರಿಕೆ ಸಹಯೋಗದಲ್ಲಿ  ಬಸವ ಜಯಂತಿ ಪ್ರಯುಕ್ತ ಆಯೋಜಿಸಿದ್ದ ಶರಣರ ಪರಿಚಯ ಸ್ಪರ್ಧೆಯಲ್ಲಿ ಆಯ್ಕೆಯಾದ ಸ್ಪರ್ಧಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ ಸಮಾರಂಭ ಆಯೋಜಿಸಲಾಗಿತ್ತು ಇದರಲ್ಲಿ ಆಯ್ಕೆಯಾದ  ಹಾಗೂ ಪ್ರಥಮ ಬಹುಮಾನ ಪಡೆದ ಯುವ ಕವಯಿತ್ರಿ ಮತ್ತು ವಿಧ್ಯಾರ್ಥಿನಿ ಆದ ಕು. ನೇತ್ರ ಎಸ್ ದರಸಗುಪ್ಪೆ ಗ್ರಾಮ ಶ್ರೀರಂಗಪಟ್ಟಣ ತಾಲೂಕು ಮಂಡ್ಯ ಜಿಲ್ಲೆ ಇವರಿಗೆ ಪ್ರಶಸ್ತಿ ಪ್ರಧಾನ ಮಾಡಿ ಇವರ ಸಾಧನೆ ಪರಿಗಣಿಸಿ ಪೂಜ್ಯಶ್ರೀ ನಿಜಗುಣ ಪ್ರಭು ತೋಂಟದಾರ್ಯ ಮಹಾಸ್ವಾಮಿಗಳು ಮೆಚ್ಚುಗೆ ವ್ಯಕ್ತಪಡಿಸಿದರು ನಂತರ ಪ್ರಥಮ ಬಹುಮಾನ ನೀಡಿದರು. ಸ್ಪರ್ಧೆಯ ಕುರಿತು ಅನುಭವ ವ್ಯಕ್ತಪಡಿಸಲು ಹೇಳಿದಾಗ "ಶರಣರ ವಚನಗಳು ಅರ್ಥಗರ್ಭಿತವಾಗಿರುತ್ತವೆ.  ಮನುಷ್ಯನ ಜೀವನಕ್ಕೆ ಮೌಲ್ಯವನ್ನು ಕಲಿಸುತ್ತದೆ. ಇಂದಿನ ಮಕ್ಕಳು ಹೆಚ್ಚು ಪುಸ್ತಕವನ್ನು ಓದಬೇಕು. ಶರಣ ಶರಣೆಯರನ್ನು ಅಧ್ಯಯನ ಮಾಡಬೇಕು. ಎಂದು ತಮ್ಮ ಭಾಷಣದಲ್ಲಿ ಹೇಳಿದರು. ಕು. ನೇತ್ರ ಎಸ್ ಸ್ಪರ್ಧೆಯ ಕುರಿತು ತಮ್ಮ ಅನುಭವ ಮತ್ತು ಅನಿಸಿಕೆಗಳನ್ನು ಹಂಚಿಕೊಂಡ ಬಗ್ಗೆ ಎಲ್ಲಾ ಮುಖ್ಯ ಅತಿಥಿಗಳು ಹಾಗೂ ಉಳಿದ ಎಲ್ಲಾ ಶರಣ ಶರಣೆಯರು ಮೆಚ್ಚುಗೆ ವ್ಯಕ್ತಪಡಿಸಿ ಕೊಂಡಾಡಿದರು.



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

2 ಕಾಮೆಂಟ್‌ಗಳು:

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...