ಮಂಗಳವಾರ, ಸೆಪ್ಟೆಂಬರ್ 14, 2021

ಚಿತ್ರಕವನ - ಶ್ರೀ ಪುರುಷೋತ್ತಮ ಪೆಮ್ನಳ್ಳಿ , ಪಾವಗಡ ತಾ ತುಮಕೂರು ಜಿ.

 ಚಿತ್ರಕವನ
ಅಂದವು  ಅಳಿದರು ಮೊಗದಲಿ ಖುಷಿಯ ಅಲೆ
ಮರೆಯಾಗಿರುವುದೊಂದೆ ಸೌಂದರ್ಯದ ಕಲೆ
ಬದಲಾವಣೆಯ ಜೀವನದಿ ಶಾಶ್ವತತೆ ಯಾವುದು 
ನನ್ನದೆಂಬ ಸೌಂಧರ್ಯವೇ ನನ್ನಲಿ ಇರದು...

ಜೀವನದ ಸಾರ ತಿಳಿಯುವ ಬಯಕೆ ನಗುವಂದು
ಗಳಿಸಿದೆನು ಉಳಿಯದೆಂಬ ಚೇಷ್ಟೆಯ ನಗುವಿಂದು
ಚಂದಿರನ ನಾಚಿಸುವ ಸುಂದರತೆಯ ಕಂಡ ಕನ್ನಡಿ
ದೂರುತಿದೆ ಬೇಸರದಿ ಬಾಡಿದ ಮೊಗವ ನೋಡಿ...

ತರುಣಿಯ ಅಂದವ ಸೋಕಿ ನವಿಲುಗರಿಯು ಬೀಗಿತು
ಮುದಿತನದಿ ಒರಟು ಕರವ ಸೋಕಿ ನಾಚಿತು
ಅಂದು ಕಣ್ಣೋಟಕೆ ಕಾದಿದ ಅದೆಷ್ಟೋ ಮನಸು
ತಿರುಗು ನೋಡಲಿಲ್ಲ ಒಮ್ಮೆಯು ತುಸು...

ಕಾಣುವ ಬದುಕಿನ ಕನಸ ಕಂಡ ಹೃದಯವಂದು
ಹೆಸರುಳಿಸಿ ಹೇಳುತಿದೆ ನಗುವಲಿ ವಿದಾಯವಿಂದು
ಜೀವನ ಚಕ್ರದಲಿ ಬದಲಾವಣೆ ಸಹಜವು
ನೆನಪಿನಾಳದ ಮೆಲುಕಲಿ ಸಿಗುವುದು ಆನಂದವು...


- ಪುರುಷೋತ್ತಮ ಪೆಮ್ನಳ್ಳಿ
ಪಾವಗಡ ತಾ ತುಮಕೂರು ಜಿ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...