ಬುಧವಾರ, ಸೆಪ್ಟೆಂಬರ್ 8, 2021

ಗಜಲ್ - ಮಾಜಾನ್ ಮಸ್ಕಿ.

ಗಜಲ್ 

ಮೈ ಮುರಿದು ದುಡಿಯುದನ್ನು ಮರೆಯುತ್ತಿದೆ ಆಧುನಿಕತೆ 
ಪರಕೀಯರ ಆಮಂತ್ರಣಕ್ಕೆ ಮನ ಸೋಲುತ್ತಿದೆ ಆಧುನಿಕತೆ 

ಮಾನ -ಅಪಮಾನದ ವ್ಯತ್ಯಾಸವೇ ಹೊರಟು ಹೋಗಿದೆ 
ಹಣದ ಆಸೆಯಲ್ಲಿ ಅರೆಬೆತ್ತಲಾಗಿ ಬಳಲುತ್ತಿದೆ ಆಧುನಿಕತೆ 

ಅಮಲಿನ ತೂರಾಟದಲ್ಲಿ ಮನಸ್ಸಿನ ಹುಚ್ಚು ಹೆಚ್ಚಾಗಿದೆ 
ಹಸಿದ ಹೊಟ್ಟೆಗೆ ಸಾತ್ವಿಕ ಕೋಪ ಹೆಚ್ಚಾಗುತ್ತಿದೆ ಆಧುನಿಕತೆ 

ಹಿಮಾಲಯದ ಸಾಧು -ಸಂತರು ಹೊಟ್ಟೆಯ ಹಂಗು ಬಿಟ್ಟಿದ್ದಾರೆ 
ಆತ್ಮ ಬಲದ ಇಚ್ಛಾಶಕ್ತಿಯು ಕ್ಷೀಣಿಸುತ್ತಿದೆ ಆಧುನಿಕತೆ 

ಹೃದಯದ ಗೋರಿಯೊಳಗೆ ಕನಸುಗಳು ಉಸಿರಾಡುತ್ತಿವೆ
ಮಾಜಾ ಜೀವಂತಿಕೆಯ ಗರ್ಭಕ್ಕೆ ಮಂಡಿ ಊರುತ್ತಿದೆ ಆಧುನಿಕತೆ 
- ಮಾಜಾನ್ ಮಸ್ಕಿ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...