ಬುಧವಾರ, ಸೆಪ್ಟೆಂಬರ್ 8, 2021

ಒಡಲ ಜೀವಿಯ ಕೊಲದಿರಿ (ಕವಿತೆ) - ಶ್ರೀ ತುಳಸಿದಾಸ ಬಿ ಎಸ್ಶಿಕ್ಷಕರು ಗೊರೇಬಾಳ ಕ್ಯಾಂಪ್, ರಾಯಚೂರು.

ಒಡಲ ಜೀವಿಯ ಕೊಲದಿರಿ

ತಟ್ಟೆ ತುಂಬಿಸಿ ಬಟ್ಟೆ ಬೆಳಗಿಸಿ ದೇಹ ತಣಿಸುತ ಹರಿದಿಹೆ
ಮಲೀನಗೊಳಿಸುವ ಕೆಟ್ಟ ಚಾಳಿಯ ಬಿಡುವಿರೆಂದೆನೆ ಕೇಳುತ
ಸತ್ತ ಪ್ರಾಣಿಯ ಎತ್ತಿ ಎಸೆದು ಹೊಟ್ಟೆ ಉರಿಸುತಲಿರುವಿರಿ
ದನದ ನಿಮ್ಮಯ ಹೊಲಸನೆಲ್ಲವ ತಂದು ಸುರಿಯುತಲಿರುವಿರಿ

ಚಿಂದಿ ಬಟ್ಟೆ ವಿಷದ ವಸ್ತು ಬೇಡವಾದುದ ಸುರಿದಿರಿ
ನೋವ ಕೊಡುತ ರೋಗ ಪಡೆದು ಒಡಲ ಜೀವಿಯ ಕೊಲುದಿರಿ
ಜಾರಿ ಹೋದ ಪಾತ್ರೆ ಪಗಡೆಯು ನನ್ನ ಗರ್ಭವ ಸೇರಿತು
ಹಾಗೆ ಮುಳುಗಿದ ನಾಣ್ಯ, ನಗಗಳು ನನ್ನ ಒಡಲಲೆ ನೆಲೆಸಿತು

ಈಜು ಕಲಿಯದೆ ಬಳಿಗೆ ಬಂದು ಮುಳುಗಿ ನೀರನು ಕುಡಿವಿರಿ
ಕಷ್ಟ ಸಹಿಸದೆ ನೊಂದು ಹಾರಿ ಪ್ರಾಣವೇಕೆ ಬಿಡುವಿರಿ
ಬತ್ತಿ ಹೋಗುವೆ ಬಿಸಿಲ ದಿನದಲಿ ಒಡಲ ಜೀವಿಯು ಅಳಿವವು
ಹುದುಗಿ ಕಾಣದ ವಸ್ತು ಹುಡುಕಿ ಖುಷಿಯ ಪಟ್ಟು ನಲಿದಿರಿ

ಎಳೆಯರೆಲ್ಲ ಹಿಗ್ಗು ತಿರುವರು ಸಿಕ್ಕ ವಸ್ತನು ಕಾಣುತ
ತುಂಬಿಕೊಳುವಿರಿ ಉಸುಕನೆಲ್ಲವ ಬಗೆದು ಖಾಲಿ ಮಾಡುತ
ಸ್ವಚ್ಛವಾಗಿ ನಾನು ಹರಿಯಲು ನೆರವು ಬೇಕಿದೆ ನಿಮ್ಮದು
ಕೈ ಮುಗಿಯುತ ಬೇಡಿಕೊಳ್ಳುವೆ ಮಲಿನಗೊಳಿಸದೆ ಸಾಗಿರಿ
 - ಶ್ರೀ ತುಳಸಿದಾಸ ಬಿ ಎಸ್
ಶಿಕ್ಷಕರು ಗೊರೇಬಾಳ ಕ್ಯಾಂಪ್, ರಾಯಚೂರು.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...