ಸೋಮವಾರ, ಸೆಪ್ಟೆಂಬರ್ 13, 2021

ವಿಧ ವಿಧದ ಕಲಿಕೆ (ಕವಿತೆ) - ಶ್ರೀ ಗೂಳೇಶ್ ಬಿ ಯಾಗಾಪೂರ.

ವಿಧ ವಿಧದ ಕಲಿಕೆ

ವರ್ಣರಂಜಿತ ನುಡಿಗಳ ಪಠಿಸುತ
ಬಣ್ಣ ಬಣ್ಣದ ವೇಷಗಳ ಧರಿಸುತ
ನಾಲಿಗೆ ಮೇಲೆ ದೋಸೆಯ ಸವರುವ
ಚಾಲಾಕ್ಕಿ ನಾಲಿಗೆಯ ಬದಲಿಸುವವರ
ಕಂಡು ಕಲಿಯಬೇಕಿದೆ ನಾನು

ಹರುಷದಲಿ ಜೊತೆಗೂಡಿ
ಕಷ್ಟ ಸಂಕಷ್ಟದಲ್ಲಿ ಕಂಡು 
ಕಾಣದ ರೀತಿಯಲಿ ಮೂತಿ
ತಿರುಗಿ ನಡೆವವರ ಕಂಡು
ಕಲಿಯಬೇಕಿದೆ ನಾನು

ಗಲ್ಲಿ ಗಲ್ಲಿಗಳ ಬಜಾರಲ್ಲಿ ದೌರ್ಜನ್ಯ
 ಬಿಡಲಿಲ್ಲ ದಿಲ್ಲಿಯಲ್ಲೂ 
ಸಾರ್ವಜನಿಕ ಬಸ್ಸಿನಲ್ಲಿ
ಇಂತಹವರ ರುಂಡ ಚೆಂಡಾಡುವ
ವಿದ್ಯೆಯ ಕಲಿಯಬೇಕಿದೆ ನಾನು

ಜಾತಿ ಧರ್ಮದ ಹೆಸರಲ್ಲಿ
ರಕ್ತಹರಿಸುವ ಮಂದಿಗಿಲ್ಲಿ
ತಿಳಿವುದೇಗೆ ರಕ್ತ ಹರಿಸಿ
ದೇಶಕ್ಕೆ ತಿಲಕವಾಗುವ ಯೋಧರ
ಧೈರ್ಯ ಅರಿಯಬೇಕಿದೆ ನಾನು

- ಗೂಳೇಶ್ ಬಿ ಯಾಗಾಪೂರ.
ತಾಲ್ಲೂಕು: ಚಿತ್ತಾಪುರ
ಜಿಲ್ಲಾ: ಕಲಬುರಗಿ
ಮೊ.ನಂ:9611592800.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...