ಗಜಲ್
ಒಲ್ಲದ ಮನಸ್ಸಿಗೆ ಬಲಾತ್ಕಾರ ಮಾಡದೆ ಸುಮ್ಮನಿರು
ನೊಂದ ಮನ ಅಳುತ್ತೆ ತೊಂದರೆ ಕೊಡದೆ ಸುಮ್ಮನಿರು
ಬದುಕಿನ ಬವಣೆಗಳ ನೋವಿನ ಹಂದರದಲ್ಲಿ ಇದೆ ಬುದ್ದಿ
ಅಹಂಕಾರದ ಅಮಲಿನಲ್ಲಿ ಅಪಪ್ರಚಾರ ಹೊರಿಸದೆ ಸುಮ್ಮನಿರು
ಹೃದಯ ಗರ್ಭದಲ್ಲಿ ಪ್ರೀತಿ ದೇವತೆ ಇರುವರನ್ನು ನೋಡು
ಮೋಸವೆ ಜೀವಳಾದ ಮೊಸಳೆ ಕಣ್ಣೀರು ಸುರಿಯದೆ ಸುಮ್ಮನಿರು
ಒಂದರಲ್ಲಿ ಒಂದಾಗುವುದರ ಹೃದಯದಲ್ಲಿದೆ ಖುದಾ
ಸಾಗುತ್ತಿರು ಮೌನ ಪ್ರಾರ್ಥನೆ ಬಿಡದೆ ಸುಮ್ಮನಿರು
ತನ್ನ ತಪ್ಪಿನ ಅರಿವಿಲ್ಲದೆ ವಟಗುಟ್ಟುತ್ತಿದೆ ಮಾಜಾ
ದೂರದಲ್ಲಿಯೇ ಇರು ತಲೆ ಕೆಡಿಸಿಕೊಳ್ಳದೆ ಸುಮ್ಮನಿರು
- ಮಾಜಾನ್ ಮಸ್ಕಿ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ