ಬುಧವಾರ, ಸೆಪ್ಟೆಂಬರ್ 8, 2021

ಭೀಮರಾವರ ಪಾಂಡಿತ್ಯಕ್ಕೆ ರಮಾಬಾಯಿಯವರ ತ್ಯಾಗತ್ವ ಕೈಗನ್ನಡಿ (ಲೇಖನ) - ಅಜೇಯ್ ಪಿ. ಎಸ್, ಬೀದರ್.

ಭೀಮರಾವರ ಪಾಂಡಿತ್ಯಕ್ಕೆ   ರಮಾಬಾಯಿಯವರ ತ್ಯಾಗತ್ವ ಕೈಗನ್ನಡಿ

ಡಾ. ಬಾಬಾಸಾಹೇಬ ಅಂಬೇಡ್ಕರರವರ "ಇತಿಹಾಸವನ್ನು ತಿಳಿಯಲಾರದವರು ಇತಿಹಾಸವನ್ನು ಸೃಷ್ಟಿಸಲಾರರು" ಎನ್ನುವ ನುಡಿ ಮುತ್ತಿನ ಅರ್ಥವು ಈಡಿ ವಿಶ್ವವೇ ತರ್ಕಿಸಬೇಕಾಗಿದೆ. ಯಾಕೆಂದರೆ ಕೆಲವರು ಇತಿಹಾಸವನ್ನು ತಿಳಿಯಲಾರದೆ ಮಹಾನಾಯಕ/ಕಿ ಯರ ಬಗ್ಗೆ ಕುಲಂಕೂಷವಾಗಿ ಮಾತನಾಡುವ ಅವಿವೇಕಿಗಳು ಕೂಡ ನಮ್ಮ ಸುತ್ತ ಮುತ್ತಲು ಇದ್ದಾರೆ. ಇತಿಹಾಸವನ್ನು ತಿಳಿದರು ಕೂಡ ಸತ್ಯವನ್ನು ಒಪ್ಪಿಕೊಳ್ಳದ , ಅವರ ಸಾಧನೆ ಬಗ್ಗೆ ಎಲ್ಲಿಯು ಹೇಳಲಾರದ ಮನಸ್ಥಿತಿಯ ಪರಿಸ್ಥಿತಿಯು ಇತ್ತೀಚಿನ ದಿನಗಳಲ್ಲಿ  ಸಾಮಾನ್ಯವಾಗಿ ಹೋಗಿದೆ.

  ಒಬ್ಬ ಮಹಾನಾಯಕಿ, ಅವಳ ಶ್ರೇಷ್ಠ ಸಾಧನೆಯ ಬಗ್ಗೆ ಯಾರು ಹೇಳಲಾರದವರು, ಅವರ ಬಗ್ಗೆ ಮಾತನಾಡದೆ ಇದ್ದರೆ ಇಡೀ ಸ್ತ್ರೀ ಕುಲಕ್ಕೆ ಅವಮಾನವು ತಪ್ಪಿದ್ದಲ್ಲ . ನಾವು ನೀವೆಲ್ಲ ಕೇಳಿರುವ ಹಾಗೆ ತಂದೆ-ತಾಯಿಯು ತಮ್ಮ ಮಕ್ಕಳನ್ನು, ಅಜ್ಜಾ-ಅಜ್ಜಿಯು ತಮ್ಮ ಮೊಮ್ಮಕ್ಕಳನ್ನು ಶಿಕ್ಷಣ ಕೊಡಿಸುವುದು ಪಾಲಕ ಪೋಷಕರ ಕರ್ತವ್ಯವಾಗಿದೆ. ಗಂಡನು ತನ್ನ ಪತ್ನಿಯನ್ನು  ಪ್ರೋತ್ಸಾಹಿಸಿ ಕಾಲೇಜುಗಳಿಗೆ ಕಳುಹಿಸಿರುವುದನ್ನು ಕೂಡ ಸಮಾಜದಲ್ಲಿ ನಾವು ನೀವೆಲ್ಲ ನೋಡಿರಬಹುದು. ಆದರೆ ವಿಶ್ವದಲ್ಲೇ  ಮೊಟ್ಟ ಮೊದಲು ತನ್ನ ಪತಿರಾಯನ ಶಿಕ್ಷಣಕ್ಕಾಗಿ   ಹಲವು ಕಷ್ಟಗಳನ್ನು ಎದುರಿಸಿ ತನ್ನ ಗಂಡನನ್ನು ಓದಿಸಿದ ಮೊದಲ ಮಹಿಳೆ ಎಂದರೆ ಅವರು ರಮಾಬಾಯಿ ಅಂಬೇಡ್ಕರ್ ಎಂದು ಹೆಮ್ಮೆಯಿಂದ  ಹೇಳೋಣ.

ರಮಾಬಾಯಿ ಅಂಬೇಡ್ಕರ್ ಅವರ ಮೊದಲ ಹೆಸರು "ರಾಮಿ 'ಇತ್ತು ಇವರು ಫೆಬ್ರವರಿ-7-1897 ರಲ್ಲಿ ಮಹಾರಾಷ್ಟ್ರ ಪ್ರಾಂತ್ಯಕ್ಕೆ ಸೇರಿಸುವ "ವಣಂದ'ಎನ್ನುವ ಸಣ್ಣ ಹಳ್ಳಿಯಲ್ಲಿ ತಂದೆ ಬಿಕ್ಕು ಧೋತ್ರೆ ತಾಯಿ ರುಕ್ಮಿಣಿ ಧೋತ್ರೆ ಅವರ ಮಗಳಾಗಿ ಕಡು ಬಡತನದ ಕುಟುಂಬದಲ್ಲಿ ಜನಿಸಿದರು.
               ತಮ್ಮ ಬಾಲ್ಯದಲ್ಲಿಯೆ ತಂದೆ ತಾಯಿಯನ್ನು ಕಳೆದುಕೊಂಡು ಅವರ ಮಾಮ ಮತ್ತು ಕಾಕರ ಆಶ್ರಯದಲ್ಲಿ ಬೆಳೆಯುತ್ತಾಳೆ. ಮುಂದೆ ಅವಳ ಮದುವೆ  ಡಾ.ಬಿ.ಆರ್ ಅಂಬೇಡ್ಕರ ಅವರ ಜೊತೆಗೆ ಆಗುತ್ತದೆ. ಆವಾಗ ಅಂಬೇಡ್ಕರ  ಹಾಗೂ ರಮಾಬಾಯಿಯವರಿಗೆ ಅತೀ ಬೇಗನೆ ಮದುವೆ ಮಾಡುತ್ತಾರೆ. 
ಸುಬೇದಾರ್ ಮನೆಯ ಸೊಸೆಯಾದಮೇಲೆ ಅವಳ ಹೆಸರು ರಾಮಿ ಯಿಂದ ರಮಾಬಾಯಿಯಾಗಿ ಬದಲಾಗುತ್ತದೆ.

     ಬಾಲ್ಯದಿಂದಲೇ ಕಷ್ಟ-ಕಾರ್ಪಣ್ಯಗಳನ್ನು ಕಂಡುಕೊಂಡು ಬಂದ  ರಮಾಬಾಯಿಗೆ ತನ್ನ ಗಂಡನ ಮನೆಯಲ್ಲಿಯೂ ಕೂಡ ಕಷ್ಟಗಳು ತಪ್ಪಾಲಾರದೇ ಹೋಯಿತು. ಸ್ವಚ್ಛ ಮನಸ್ಸಿನವಳು ಬುದ್ಧನಂತೆ ಕರುಣೆಯನ್ನು ತೋರುವವಳು, ತನ್ನ ಗಂಡನ ಚಿಂತನೆ, ವಿಚಾರಗಳು, ಸಮಾಜದ ಬಗೆಗಿನ ಕಳಕಳಿಯ ಭಾವನೆಗಳನ್ನು ಕಂಡು, ಅದಕ್ಕಾಗಿ ಚಿಂತಿಸುವ ಡಾ. ಬಿ. ಆರ್ ಅಂಬೇಡ್ಕರ್ ಅವರ ಸಮಾಜ ಸೇವೆಯಲ್ಲಿ ಭಾಗಿಯಾಗತೊಡಗಿದ್ದರು.
 
   ಸಮ-ಸಮಾಜದ ಕನಸನ್ನು ಹೊತ್ತ ಅಂಬೇಡ್ಕರರವರು ತಮ್ಮ ಉನ್ನತ ಶಿಕ್ಷಣಕ್ಕಾಗಿ ಲಂಡನ್ ಗೆ ಹೋಗಿದ್ದರು. ಅಲ್ಲಿ ಅವರಿಗೆ ಆರ್ಥಿಕತೆ & ಆಹಾರದ ಸಮಸ್ಸೆಯು ಉಂಟಾಯಿತು. ಈ ವಿಷಯವನ್ನು ತಿಳಿದ ರಮಾಬಾಯಿಯು ಅಸ್ಪೃಶ್ಯ ಜನಕ್ಕಾಗಿ ಹೊರಾಡುವ ತನ್ನ ಗಂಡನ ಈ ಶಿಕ್ಷಣವೆಂಬ ಅಸ್ತ್ರವನ್ನು ಕೈ ಜಾರದಂತೆ ಹಲವಾರು ಕಷ್ಟ-ನೋವುಗಳನ್ನು ಅನುಭವಿಸಿ ತನ್ನ ದಿನ ನಿತ್ಯದ ಸಂತೋಷದ ಕ್ಷಣಗಳನ್ನು ತ್ಯಾಗ ಮಾಡಿ ಅಂಬೇಡ್ಕರರವರ ಶಿಕ್ಷಣ, ಸಂಘಟನೆ, ಹೋರಾಟದ ಜೀವನಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟವಳು ಈ ಮಹಾತ್ಯಾಗಿ.

       ಈ ಕಡೆ ಕುಟುಂಬದ  ಮತ್ತು ಭೀಮನ ಶಿಕ್ಷಣದ ಜವಾಬ್ದಾರಿಯ ಒಟ್ಟು ಹೊಣೆ ಸುಬೇದಾರ ರಾಮಜೀ ಸಕ್ಪಾಲ್ ಅವರ ಮೇಲೆ ಇರುತ್ತದೆ. ತನ್ನ ಮಾವನ ಜೊತೆಗೆ ರಮಾಬಾಯಿಯು ಕೂಡ ಕಲ್ಲು-ಮಣ್ಣನ್ನು ಹೊದಿಯುವ ಕೆಲಸಕ್ಕೆ ಹೋಗುತ್ತಾಳೆ.ಮುಂಜಾನೆ ಸೂರ್ಯ ಹುಟ್ಟುವ ಮೊದಲೇ ಎದ್ದು ಸಗಣಿಯ ಕುಳ್ಳುಗಳನ್ನು ಬಡಿದು ಅವುಗಳನ್ನೆಲ್ಲ ಒಣಗಿಸಿ ಮಾರಾಟ ಮಾಡುತ್ತಿದ್ದಳು.ವ್ಯಾಪಾರದಿಂದ ಬಂದ ಹಣವನ್ನು  ಅಂಬೇಡ್ಕರರವರಿಗೆ ಕಳುಹಿಸಿ ಅವರಿಗೆ ಓದಲು ಅನುಕೂಲವನ್ನು ಮಾಡಿಕೊಟ್ಟಳು.
ಮತ್ತು ಕಲ್ಲು-ಮಣ್ಣನ್ನು ಹೊದಿಯುವುದರಿಂದ ಬಂದ ಹಣವನ್ನು ಸಂಸಾರದ ಖರ್ಚಿಗೆ ಕೊಡುತ್ತಿದ್ದಳು. ಇವಳ ಇಂತಹ ಹೊಣೆಗಾರಿಕೆಯ ನಿಷ್ಕಲ್ಮಶ ಮನಸ್ಸಿನ ಗುಣವನ್ನು ಮೆಚ್ಚಿದ ರಾಮಜೀ ಯವರು ರಮಾಬಾಯಿ ನನ್ನ ಸ್ವಂತ ಮಗಳು ಇವಳು ಸಿಕ್ಕಿದ್ದು ನಮ್ಮ ಸೌಭಾಗ್ಯವೆಂದು ಹೆಮ್ಮೆಯಿಂದ ಗರ್ವಪಡುವ ಸ್ತ್ರೀಯಾಗಿದ್ದಳು.

ದಿನಪೂರ್ತಿ ಕೆಲಸವನ್ನು ಮಾಡಿ ಬಂದು ರಾತ್ರಿ ಅಕ್ಷರಗಳನ್ನು ಕಲಿಯುತ್ತಾ ಇದ್ದಳು. ಅಸ್ಪೃಶ್ಯತೆ ತುಂಬಿದ ಜನರು ಅಂಧಕಾರದ ಅಮಲಲ್ಲಿ ತೇಲಾಡುತಿದ್ದ ಸಮಾಜದ ಆ ಕಾಲದಲ್ಲಿ ಅಂಬೇಡ್ಕರ್ ರವರ ಶಿಕ್ಷಣಕ್ಕೆ ಆಸರೆಯಾಗಿ, ಅವರ ಕಷ್ಟಕ್ಕೆ ಹೆಗಲಾಗಿ, ಶೋಷಣೆಗೆ ಒಳಗಾದ ಜನರ ಪರವಾಗಿ ಕಣ್ಣೀರಿಡುವ ಕಣ್ಣುಗಳಿಗೆ ಸಮಾಧಾನ ಮಾಡೋ ಮನಸ್ಸು, ಕಣ್ಣೀರನ್ನು ಒರೆಸೋ ಕೈಗಳು ರಮಾಬಾಯಿ ಅವಳದಾಗಿತ್ತು.

ಶಾಲಾ ಕಾಲೇಜುಗಳಲ್ಲಿ, ಏರಿಯಾದ ಓಣಿಯಲ್ಲಿ, ಪ್ರತಿಯೊಂದು ಸ್ಥಳಗಳಲ್ಲಿ  ಅಂಬೇಡ್ಕರ್ ರವರಿಗೆ ಭೇದ ಭಾವದ ಅಸ್ಪೃಶ್ಯತೆಯ ವ್ಯಂಗ್ಯಗಳು ತಾಂಡವವಾಡುತಿದ್ದವು.
ಮೇಲ್ವರ್ಗದ ಜನಗಳು ತಾವೇ ಶ್ರೇಷ್ಠರು, ಕೆಳಜಾತಿಯವರನ್ನು ಹೀಯಾಳಿಸುವಿಕೆಯ ಮಾತುಗಳ ತಮಗೆ ನೆಮ್ಮದಿಯಾಗಿ ಜೀವನ ಸಾಗಿಸಲು ತದ್ವಿರುದ್ಧವಾಗಿ ರಚಿಸಿದ ಸಾಮಾಜಿಕ ಕೊಳಕು ನಿಯಮಗಳಿಂದ ಬೇಸತ್ತು ಹೋಗಿದ್ದ ಅಂಬೇಡ್ಕರ್ ರವರಿಗೆ ಧೈರ್ಯದ ಬೆನ್ನೆಲುಬಿನ ಅಸ್ತ್ರವಾಗಿ, ಅವರ ನೋವುಗಳಿಗೆ ಮುಲಾಮವಾಗಿ, ಅಂಬೇಡ್ಕರ್ ರವರಿಗೆ ಷಡ್ಯಂತ್ರಗಳನ್ನು ಹಾಕಿ ಕುತಂತ್ರಗಳನ್ನು ಮಾಡುತ್ತಿರುವ ಜಾತಿವಾದಿಗಳ ವಿರುದ್ಧ ಅಂಬೇಡ್ಕರ್ ರವರ ಕ್ರಾಂತಿಯ ಧ್ವನಿಯಾಗಿದ್ದಳು ಈ ಮಹಾತಾಯಿ ರಮಾಬಾಯಿ.

ಭೀಮನ ಗಂಭೀರ ಸ್ವಭಾವವನ್ನು,ಸಮಾಜದ ಕಳಕಳಿಯ ಮನೋಭಾವನೆಯ ವಿಚಾರಗಳನ್ನು ಅರಿತ ರಮಾಬಾಯಿಯು  ಅಂಬೇಡ್ಕರ್ ರವರ ಬಗೆಗಿನ ಗೌರವ ಹೆಚ್ಚಾಗಿ ಜಗತ್ತಿನ ಅತ್ಯಂತ ಅದ್ಭುತವಾದ ಗಂಡನನ್ನು ಪಡೆದೆ ಎಂದು ಅವರನ್ನು ಪ್ರೀತಿಯಿಂದ ಸಾಹೇಬ ಎಂದು ಕರೆಯುತ್ತಿದ್ದಳು .

ಕೇವಲ ಮಡದಿಯಾಗೀರದೆ, ಜಾತಿವಾದಿಗಳ ವಿರುದ್ಧ, ಸಮಾನತೆಗಾಗಿ ಹೋರಾಡೋ, ತನ್ನ ಗಂಡನ ಶಿಕ್ಷಣಕ್ಕಾಗಿ ಜೀವನವನ್ನು ಮೀಸಲಿಟ್ಟವಳು ನನ್ನ ಹೆಮ್ಮೆಯ ಹೆಂಡತಿ ಇವಳನ್ನು ಪಡೆದ ನಾನು ಧನ್ಯನೆಂದು ರಮಾಬಾಯಿಯನ್ನು ಪ್ರೀತಿಯಿಂದ ರಮು ಎಂಬುದಾಗಿ ಅಂಬೇಡ್ಕರ್ ರವರು ಕರೆಯುತಿದ್ದರು.
ಅಂಬೇಡ್ಕರ್ ರವರ ಕೇವಲ ಶಿಕ್ಷಣದಲ್ಲಿ ಮಾತ್ರವಲ್ಲ, ಜೊತೆಗೆ ಜೀವನದ ಪ್ರತಿಯೊಂದು ಸಂಘರ್ಷದ ಘಟನೆಗಳಿಗೆ, ದೀನ ದಲಿತರ ಒಳಿತಿಗಾಗಿ ಹೊಸ ಸಮಾನತೆಯ ಸಮಾಜವನ್ನು ರೂಪಿಸುವ ಕನಸಾಗಿದ್ದ ಅಂಬೇಡ್ಕರ್ ಅವರ ಕೈ ಹಿಡಿದು  ನಿಂತ ವೀರ ಧೀರ ಶೂರ ಮಹಿಳೆ ನಮ್ಮ ತಾಯಿ ಮಹಾತಾಯಿ ರಮಾಬಾಯಿ.

         ಇವರಿಬ್ಬರ ನಡುವಿನ ಪ್ರೀತಿ ವಾತ್ಸಲ್ಯ ಮತ್ತು ಸಂಘರ್ಷ ಸಮಾನತೆಯ ಹೋರಾಟಗಳಿಗೆ ಇನ್ನೊಂದು ಹೆಸರೇ ಸಾವಿತ್ರಿ ಮತ್ತು ಜ್ಯೋತಿ ಬಾ ಫುಲೆಗಳಂತೆ ಆದರ್ಶ ದಂಪತಿಗಳಾಗಿದ್ದರು.ಇವತ್ತು ಜಗತ್ತಿಗೆ ಶ್ರೇಷ್ಠ ಸಂವಿಧಾನ ಕೊಟ್ಟು ಸಂವಿಧಾನ ಶಿಲ್ಪಿಯಾದರು, ವಿಶ್ವ ಜ್ಞಾನಿಯಾದ
 ಡಾ. ಬಿ. ಆರ್ ಅಂಬೇಡ್ಕರ್ ರವರಿಗೆ ಅಂದು ಮೇಣದ ಬತ್ತಿಯಂತೆ ತನ್ನನ್ನು ತಾನೇ ಸುಟ್ಟಿಕೊಂಡು ಅವರ ಬಾಳನ್ನು ಬೆಳಗಿರೋ ಭಾಗ್ಯ ಜ್ಯೋತಿಯಾದಳು.
ಸಮಾಜಕ್ಕೆ ಸಮಾನತೆಯ ನೆರಳನ್ನು ನೀಡುವ ಮರವಾದರು ಡಾ. ಬಾಬಾಸಾಹೇಬ ಅಂಬೇಡ್ಕರ್ ರವರು  ಆ ಮರಕ್ಕೆ ಗಟ್ಟಿಯಾಗಿ ಹಿಡಿದಿಟ್ಟ ಬೇರಾದಳು ಮಹಾ ಮಾತೆ ರಮಾಬಾಯಿ

 ಕಠಿಣ ಪರಿಸ್ಥಿತಿಗಳು ಬಂದರು ಅವುಗಳನ್ನು ಮುಗುಳ್ನಗೆಯೊಂದಿಗೆ ಬುದ್ಧನಂತೆ ಶಾಂತಿಯಿಂದ ಸ್ವೀಕರಿಸುತಿದ್ದಳು,
ಬಸವಣ್ಣನಂತೆ ಅವಳು ಮಾಡುವ ಕೆಲಸದಲ್ಲಿ ಭಕ್ತಿ ಶ್ರದ್ದೆಯನ್ನಿಟ್ಟು ಕಾಯಕವೇ ಕೈಲಾಸವೆಂದು ಕಾಯಕ ಮಾಡುತ್ತಿದ್ದಳು,
ಕೊನೆಗೆ ತನ್ನ ಪತಿರಾಯನ ಪ್ರತಿಯೊಂದು ವಿಚಾರಗಳನ್ನು ಅಳವಡಿಸಿಕೊಂಡು ಅವುಗಳನ್ನು ಸಮಾಜದಲ್ಲಿ ಕಾರ್ಯರೂಪಕ್ಕೆ ತರುವ ಕೆಲಸವನ್ನು ಮಾಡುವಲ್ಲಿ ಯಶಸ್ವಿಯಾಗುತಿದ್ದಳು.

ಸಿರಿವಂತಿಕೆಗೆ ದುಡಿದವಳಲ್ಲ  ಈ ನಮ್ಮ  ತಾಯಿ
ತನ್ನ ಆಸೆ ಆಕಾಂಕ್ಷೆಗಳಿಗೆ ದುಡಿದವಳಲ್ಲ ಈ ನಮ್ಮ ತಾಯಿ
ಹೆಸರು ಗಳಿಸುವ ಸಲುವಾಗಿ ದುಡಿದವಳಲ್ಲ ಈ ನಮ್ಮ ತಾಯಿ ತನ್ನ ಗಂಡನ ಶ್ರೀಮಂತ ಮನಸ್ಸಿನ
ಪ್ರತಿಯೊಬ್ಬರಿಗೂ ಸಮಾನತೆ ಸೃಸ್ಟಿಸುವ, ಸ್ವಾತಂತ್ರವನ್ನು ಕೊಡಿಸುವ ನಿಷ್ಕಲ್ಮಶದ, ಸಮಾಜದ ಕಳಕಳಿಯ ಶ್ರೀಮಂತ ಯೋಚನೆಗಳಿಗಾಗಿ ದುಡಿದವಳು ಮಾಹಾತಾಯಿ ಈ ನಮ್ಮ ರಮಾಬಾಯಿ.

ಇಂತಹ ಸ್ತ್ರೀ ಶಕ್ತಿಯ ಸಮಾಜ ಸೇವೆಯು ಅಪಾರವಾದ ಸಾಧನೆಯ ಇತಿಹಾಸವನ್ನು ಮುಚ್ಚಿಟ್ಟರೆ ಈ ಜಾತಿವಾದಿ, ಕುತಂತ್ರವಾದಿಗಳಿಗೆ ಏನು ಸಿಗುತ್ತೋ ನಮಗಂತೂ ಗೊತ್ತಿಲ್ಲ. ಆದರೇ ಇವರೆಲ್ಲ ಭವ್ಯ ಭಾರತದ ಕನಸನ್ನು ಕಾಣುವುದನ್ನು ಮಾತ್ರ ಬಿಡುವುದಿಲ್ಲ.
     ಪ್ರತಿಯೊಂದು ಮಹಿಳೆಯು ಇವರ ಇತಿಹಾಸದ ಬಗ್ಗೆ ತಿಳಿಯಬೇಕು. ಇವರ ಆದರ್ಶಗಳನ್ನು  ಪಾಲಿಸಬೇಕು. ಇಂತಹವರ ಜೀವನ ಚರಿತ್ರೆಗಳನ್ನು ಓದಿ ಅವರಂತಹ ಅಘಾಡವಾದ ಸಾಧನೆಯ ಶಕ್ತಿಯನ್ನು ಬೆಳೆಸಿಕೊಳ್ಳಬೇಕು.

ಜಾತಿ ಧರ್ಮ ಯಾವುದೆ ಇರಲಿ ಸತ್ಯವನ್ನು ಒಪ್ಪಿಕೊಳ್ಳುವ ಮಾನವೀಯತೇ ನಮ್ಮದಾಗಲಿ 
- ಅಜೇಯ್. ಪಿ. ಎಸ್, ಬೀದರ್.

(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...