ಬುಧವಾರ, ಸೆಪ್ಟೆಂಬರ್ 1, 2021

ಮಾನಸಿಕ ಒತ್ತಡ ಖಿನ್ನತೆ ನಿರ್ವಹಣೆ ಹೇಗೆ ? (ಲೇಖನ) - ಶ್ರೀಮತಿ ಕಲ್ಪನ ಡಿ ಎನ್.

ಮಾನಸಿಕ ಒತ್ತಡ ಖಿನ್ನತೆ ನಿರ್ವಹಣೆ ಹೇಗೆ ?

ಇಂದಿನ ದಿನಗಳಲ್ಲಿ ಮಾನಸಿಕ ಒತ್ತಡದ ಸಮಸ್ಯೆ ಹೆಚ್ಚಾಗುತ್ತಿದೆ .ನಮ್ಮ ಮನಸ್ಸಿಗೆ ನಾವೇ ಉಪದೇಶಿಸಿ ಕೊಳ್ಳಬೇಕು. ಇಲ್ಲದಿದ್ದರೆ ನೆಮ್ಮದಿಯ ಜೀವನ ಸಾಧ್ಯವಾಗುವುದಿಲ್ಲ

ದೈಹಿಕ ಆಸೆಗಳು ಮತ್ತು ಮಾನಸಿಕ ಆಸೆಗಳು ಬಲವಾಗಿ ಇರುತ್ತವೆ. ದೈಹಿಕ ಆಸೆಗಳು ಹೆಚ್ಚಾದಂತೆ ಮಾನಸಿಕ ಉದ್ವೇಗ ಮತ್ತು ಒತ್ತಡ ಹೆಚ್ಚಾಗುತ್ತದೆ. ಮಾನಸಿಕ ಉದ್ವೇಗ ಮತ್ತು ಒತ್ತಡವು ದೇಹದ ಆರೋಗ್ಯ ದೊಂದಿಗೆ ಸಂಬಂಧ ಹೊಂದಿದೆ. ದೈಹಿಕ ಆಸೆಗಳು ನಮ್ಮನ್ನು ದುರ್ಬಲಗೊಳಿಸುತ್ತವೆ .ಇದರ ಪರಿಣಾಮ ಮಾನಸಿಕ ಉದ್ವೇಗ ಮತ್ತು ಒತ್ತಡ ಉಂಟಾಗುತ್ತದೆ.

ಧರ್ಮದ ಬಗ್ಗೆ ತಪ್ಪು ಪರಿಕಲ್ಪನೆಯೂ ಕೂಡ ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತದೆ .ನಮ್ಮ ಆಸೆಗಳನ್ನು ಅದುಮಿಡುವ ಬದಲು  ಉನ್ನತ ಗುರಿಗಳತ್ತ ತಿರುಗಿಸಿ ಕೊಳ್ಳಬೇಕೆಂದು ಪುಸ್ತಕದಲ್ಲಿ ಓದಿದ್ದೇನೆ. ಜನರು ಜೀವನವನ್ನೇ ತಪ್ಪಾಗಿ ಅರ್ಥಮಾಡಿಕೊಂಡಿದ್ದಾರೆ .ವಿಪರೀತ ಆಸೆಗಳು ಪರಸ್ಪರ ಪೈಪೋಟಿ ಹೆಚ್ಚಾಗಿ ದುಡಿಯುವ ಒಳಗಿನ ಹಾಗೂ ಹೊರಗಿನ ಮಾನಸಿಕ ಘರ್ಷಣೆ ಮನಃಶಾಂತಿಯನ್ನು ಹಾಳುಮಾಡುತ್ತದೆ .ಆದ್ದರಿಂದ ನಮ್ಮ ದೃಷ್ಟಿಕೋನ ಬದಲಾಗುತ್ತದೆ .ಈ ಹಿಂದೆ ನಡೆದು ಹೋದ  ಘಟನೆಗಳ ಬಗ್ಗೆ ಪಶ್ಚಾತಾಪ ಅಥವಾ ಮುಂದಾಗುವುದರ ಬಗ್ಗೆ ಆತಂಕವನ್ನು ಬಿಟ್ಟು ಮುಂದಿನ ದಿನಗಳ ಬಗ್ಗೆ ಆಲೋಚಿಸುವುದು ಒಳ್ಳೆಯದು.

ಇಚ್ಛಾಶಕ್ತಿಯನ್ನು ಬೆಳೆಸಿಕೊಳ್ಳುವುದರಿಂದ ನಮ್ಮ ಗುರಿಯನ್ನು ನಾವು ತಲುಪುವ ಬಹುದು .ಆದರೆ ಅರ್ಥವಿಲ್ಲದ ಮಾತುಗಳು ,ಒಳ್ಳೆಯ ಉದ್ದೇಶವಿಲ್ಲದ ಕೆಲಸಗಳು ,ವಾದ-ವಿವಾದಗಳು, ಬೇರೆಯವರಲ್ಲಿ ತಪ್ಪು ಕಂಡುಹಿಡಿಯುವುದು ,ಚಾಡಿಕೋರತನ, ಕೆಟ್ಟ  ಆಲೋಚನೆಗಳಿಗೆ ಸಿಲುಕಿದಾಗ ನಮ್ಮಲ್ಲಿರುವ  ಒಳ್ಳೆಯ ಶಕ್ತಿಯು ವ್ಯರ್ಥವಾಗುತ್ತದೆ .ಆದ್ದರಿಂದ ಆದಷ್ಟು ನಾವು ಒಳ್ಳೆಯ ಆಲೋಚನೆಗಳನ್ನು ಮಾಡಬೇಕು .ಯಾವಾಗಲೂ ಕೆಟ್ಟ ಆಲೋಚನೆಗಳು ಕೆಟ್ಟದ್ದನ್ನೇ ತರುತ್ತವೆ.

ನಾವು ನಮ್ಮ ಮನಸ್ಸಿನ ಆಗುಹೋಗುಗಳ ಬಗ್ಗೆ  ವಿಮರ್ಶಿಸಿ ಕೊಳ್ಳಬೇಕು .ಒಳ್ಳೆಯ ಇಚ್ಛಾಶಕ್ತಿಯು ಹೆಚ್ಚಾಗುವಂತೆ ದೇವರಲ್ಲಿ ಪ್ರಾರ್ಥಿಸಬೇಕು .ನಮ್ಮ ಮನಸ್ಸನ್ನು ಏಕಾಗ್ರಗೊಳಿಸುವ ಮೂಲಕ ಮಾತ್ರ ಮಾನಸಿಕ ಒತ್ತಡವನ್ನು ದೂರ ಮಾಡಬಹುದು.

ಎಂತಹ ಸಂದರ್ಭದಲ್ಲೂ ಆತ್ಮವಿಶ್ವಾಸ ಮತ್ತು ಸಕಾರಾತ್ಮಕ ಭಾವನೆಗಳ ಮೂಲಕ ನಮ್ಮ ಮುಂದೆ ಬರುವ ಸಮಸ್ಯೆಗಳನ್ನು ಎದುರಿಸಬಹುದು . ಕೆಲವು ವೇಳೆ ನಮ್ಮ ಖಿನ್ನತೆಯೂ ಕೂಡ ಉತ್ತಮ ಸಾಧನೆಗೆ ನಾಂದಿಯಾಗುತ್ತದೆ .ಹೇಗೆಂದರೆ ನಮ್ಮ ಮನಸ್ಸಿನಲ್ಲಿರುವ ಪಾಪಪ್ರಜ್ಞೆ ,ಭಯ, ಸಿಟ್ಟು, ದ್ವೇಷ ,ಅಸೂಯೆ ಇವುಗಳನ್ನು ಮೇಲಕ್ಕೆ ತಂದು ಅವುಗಳನ್ನು ನಿಯಂತ್ರಿಸಲು ಕಲಿಯುವಂತೆ ಮಾಡುತ್ತದೆ.

ಮಾನಸಿಕ ಶಾಂತಿಯನ್ನು ಪಡೆಯಬೇಕೆಂದರೆ ಭಗವಂತನಲ್ಲಿ ಶರಣಾಗಬೇಕು .ಬದುಕಲಿ ಬಂದಿದ್ದನ್ನು ಯಥಾವತ್ತಾಗಿ ಸ್ವೀಕರಿಸಿ ಮುನ್ನಡೆಯಬೇಕು .ಧ್ಯಾನ ,ಭಜನೆ ,ಯೋಗ ,ಸತ್ಸಂಗ ಇವುಗಳಿಂದ ಮನಸ್ಸನ್ನು ಉನ್ನತ ಮಟ್ಟದಲ್ಲಿ ಇಟ್ಟುಕೊಳ್ಳಬಹುದು.  ಭಗವಂತನ ಬಗ್ಗೆ ನಂಬಿಕೆ ಬೆಳೆಸಿಕೊಳ್ಳಬೇಕು ಅಥವಾ ನಾವು ಮಾಡುವ ಕೆಲಸಗಳಲ್ಲಿ ಭಗವಂತನನ್ನು ಕಾಣಬಹುದು .ನಮ್ಮ ಕೈಯಲ್ಲಾದ ಸೇವೆಗಳನ್ನು ಮಾಡುವುದರ ಮೂಲಕ ಮಾನಸಿಕ ನೆಮ್ಮದಿ ಕಂಡುಕೊಳ್ಳಬಹುದು. ಇದ್ದುದ್ದರಲ್ಲಿಯೇ ನಾವು ಮಾನಸಿಕ ನೆಮ್ಮದಿಯನ್ನು ಸಂತೃಪ್ತಿಯನ್ನು ಕಾಣದಿದ್ದರೆ ,ಕೋಟಿಗಟ್ಟಲೆ ಹಣವಿದ್ದರೂ ಪ್ರಯೋಜನವಿಲ್ಲ.

ಮಾನಸಿಕ ಉದ್ವೇಗವನ್ನು ಗೆದ್ದರೆ ಹೃದಯದಲ್ಲಿ  ಎಂದಿಗೂ ಆನಂದವೇ ಇರುತ್ತದೆ .ನಮ್ಮ ಮನಸ್ಸನ್ನು ಯಾವಾಗಲೂ ಸಂತೋಷದಿಂದ ಇರುವಂತೆ ನೋಡಿಕೊಳ್ಳಬೇಕು. ನಾವು ಪ್ರತಿದಿನ ಬೆಳಗ್ಗೆ ಏಳುವಾಗ ಸಂತೋಷದಿಂದ ಇದ್ದರೆ ಆ ದಿನ ಪೂರ್ತಿ ಸಂತೋಷದಿಂದ ಇರುತ್ತೇವೆ .ದುಃಖ ನೋವುಗಳು, ಟೀಕೆ ,ನಿಂದನೆಗಳನ್ನು ಆಲಸ್ಯ ಮಾಡಿದರೆ ನಮ್ಮ ಮನಸ್ಸು ಎಂದಿಗೂ ಆನಂದದಿಂದ ಇರುತ್ತದೆ .ಇದು ನನ್ನ ಸ್ವಂತ ಅಭಿಪ್ರಾಯವೂ ಹೌದು.

ನಾವು ಯಾವಾಗಲೂ ಪ್ರತಿಫಲಾಪೇಕ್ಷೆ ಇಲ್ಲದೆ ಕೆಲಸವನ್ನು ಮಾಡಬೇಕು. ನಮ್ಮಲ್ಲಿ ಒಳ್ಳೆಯ ಅಭ್ಯಾಸಗಳನ್ನು ರೂಡಿಸಿಕೊಂಡರೆ ,ಮಾನಸಿಕ ಒತ್ತಡಗಳು ಬಂದರೂ ಸಹ ನಿವಾರಣೆ ಗೊಳ್ಳುತ್ತವೆ. ನಮ್ಮಲ್ಲಿರುವ ವಿವಿಧ ಆಸೆಗಳೇ ಮಾನಸಿಕ ಒತ್ತಡಕ್ಕೆ ಮುಖ್ಯ ಕಾರಣ.

ನಾವು ಮಕ್ಕಳಿಗೆ ಇದು ಮಾಡಬೇಡ ಅದು ಮಾಡಬೇಡ ಎಂದು ಅವರನ್ನು ವಿಪರೀತ ಶಿಕ್ಷೆಗೆ ಗುರಿಪಡಿಸುವುದು, ಹೇಳಿದಂತೆ ಕೇಳಲೇಬೇಕು ಎಂದು ಹಠ ಮಾಡುವುದನ್ನು ತಂದೆ-ತಾಯಿಯರು ಮೊದಲು ಬಿಡಬೇಕು .ಅವರ ಆಸೆಗಳನ್ನು ಮನಸ್ಸಿಟ್ಟು ಕೇಳಿ , ಒಳ್ಳೆಯದಾಗಿದ್ದರೆ ಪ್ರೋತ್ಸಾಹ ನೀಡಬೇಕು .ಕೆಟ್ಟದಾಗಿದ್ದರೆ ಅದನ್ನು ಬಿಡಲು ಬೇರೆ ರೀತಿಯ ತಿಳುವಳಿಕೆಗಳನ್ನು ನೀಡಿ ಮನಸ್ಸಿಗೆ ಅರಿವು ಮೂಡಿಸುವ ಪ್ರಯತ್ನ ಮಾಡಬೇಕು. ಅದನ್ನು ಬಿಟ್ಟು ಸದಾ  ಬೈಯಬಾರದು. ಅವರು ಮಾಡಿದ ತಪ್ಪುಗಳನ್ನು ಕ್ಷಮಿಸಿ ಮುಂದಿನ ಮಾರ್ಗದತ್ತ ನಡೆಯುವಂತೆ ಮಾಡುವುದು ನಮ್ಮ ಕರ್ತವ್ಯ. ತಂದೆ-ತಾಯಿಯರು ಕೋಪಗೊಳ್ಳದೆ  ಮಕ್ಕಳ ಮನಸ್ಸನ್ನು ಅರ್ಥಮಾಡಿಕೊಂಡು ನಡೆದರೆ ಮಕ್ಕಳಲ್ಲಿ ಮಾನಸಿಕ ಆರೋಗ್ಯವು ಚೆನ್ನಾಗಿರುತ್ತದೆ .ಮಾನಸಿಕ ಒತ್ತಡವನ್ನು ಸಹಿಸಲಾಗದೆ ಎಷ್ಟು ಮಕ್ಕಳು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಯಾವ ಮನುಷ್ಯನೂ ಸಹ ಪರಿಪೂರ್ಣರಲ್ಲ .ಪ್ರತಿಯೊಬ್ಬ ಮನುಷ್ಯನಲ್ಲಿಯೂ ಒಂದೊಂದು ತೆರನಾದ ಬಲಹೀನತೆ ಇದ್ದೇ ಇರುತ್ತದೆ. ಅವುಗಳನ್ನು ಯಾರೊಂದಿಗೂ ಹಂಚಿಕೊಳ್ಳದೇ ನಮ್ಮ ತಪ್ಪು-ಒಪ್ಪುಗಳನ್ನು ಭಗವಂತನಿಗೆ ಅರ್ಪಿಸುವುದರಿಂದ ಮಾನಸಿಕ ಶಾಂತಿಯನ್ನು ನಾವು ಪಡೆದೆ ಪಡೆಯುತ್ತೇವೆ .ಆದಷ್ಟು ನಾವು ಸಕಾರಾತ್ಮಕ ಭಾವನೆಗಳನ್ನು ಬೆಳೆಸಿಕೊಳ್ಳಬೇಕು .ಇತರರಿಗೆ ನಾವು ಸಹಾಯ ಮಾಡುವುದಕ್ಕೆ ಆಗಲಿಲ್ಲವಾದರೆ  ಅವರಿಗೆ ತೊಂದರೆ ಕೊಡುವ ಪ್ರಯತ್ನ ಮಾಡಬಾರದು.

ಮನುಷ್ಯನಿಗೆ ಧರ್ಮ ಅರ್ಥ ,ಕಾಮ ಮತ್ತು ಮೋಕ್ಷ ಎಲ್ಲವೂ ಅವಶ್ಯಕವಾಗಿರುತ್ತದೆ. ಸರಿಯಾದ ಜೀವನಕ್ರಮ ವನ್ನು ಪಾಲಿಸಿದರೆ ಅಂದರೆ ನಾವು ಪ್ರಾಮಾಣಿಕವಾಗಿ ಹಣ ಸಂಪಾದಿಸಿ ಸುವುದು ಕೂಡ ಮಾನಸಿಕ ಆರೋಗ್ಯವನ್ನು ಕಾಪಾಡುತ್ತದೆ. ಹಳೆಯ ವಿಚಾರಗಳನ್ನೆಲ್ಲ ಮರೆತು ವಾಸ್ತವ ದತ್ತ ಹೆಜ್ಜೆ ಇರಿಸಿದಾಗ ನಮ್ಮ ಮಾನಸಿಕ ಆರೋಗ್ಯವೂ ಕೂಡ ಸ್ವಚ್ಛ ಹಾಗೂ ಸುಂದರವಾಗಿರುತ್ತದೆ ಎಂದು ನನ್ನ ಅಭಿಪ್ರಾಯ.

ಕವಿಮಿತ್ರರು, ನೇತ್ರದಾನ ಚರ್ಮ ದಾನ ರಕ್ತದಾನ ಅಂಗಾಂಗ ದಾನ ಮತ್ತು ದೇಹದಾನಗಳ ಮಾಡುತ್ತಾ... ಪರಮಾತ್ಮ ನೀಡಿರುವ ಕಾಯಕವನ್ನು, ಅವನ ಸೇವೆಗೆ ಮುಡಿಪಾಗಿಡಿ..... 🙏💐
- ಶ್ರೀಮತಿ ಕಲ್ಪನಾ ಡಿ.ಎನ್.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

4 ಕಾಮೆಂಟ್‌ಗಳು:

  1. ಪ್ರತಿಯೊಂದು ಪದವೂ ಅರ್ಥಗರ್ರ್ಭಿತವಾಗಿದೆ.ಮಾನವನ ಬದುಕಿಗೆ ಮಾನಸಿಕ ಗೊಂದಲವೇ ಕಾರಣ.ಆದಿನದ ಬಗ್ಗೆ ಯೋಚಿಸಿ ಹಳೆಯ ಕಿಚ್ಚು ದ್ವೇಷ ಮರೆತು ಬಾಳುವಿಕೆಯೇ ಜೀವನ.

    ಪ್ರತ್ಯುತ್ತರಅಳಿಸಿ
  2. ತುಂಬಾ ಚೆನ್ನಾಗಿ ವಿವರವಾಗಿ ಮಾಹಿತಿ ಒಳಗೊಂಡ ಲೇಖನ

    ಪ್ರತ್ಯುತ್ತರಅಳಿಸಿ
  3. ಲೇಖನ ತುಂಬಾ ಚೆನ್ನಾಗಿದೆ *ಕಲ್ಪನಾ ಮೇಡಂ*, ದೈಹಿಕ ಆರೋಗ್ಯಕ್ಕೆ ಮಾನಸಿಕ ಸ್ವಾಸ್ಥ್ಯ ಬಹು ಮುಖ್ಯ ಎಂಬ ತಮ್ಮ ಅಭಿಪ್ರಾಯ ಸತ್ಯ. ಇನ್ನೂ ಹೆಚ್ಚಿನ ವೈಜ್ಞಾನಿಕ ತಳಹದಿ ಇರುವ ಲೇಖನ ಕೊಡಿ ಮೇಡಂ. ತಮ್ಮ ಲೇಖನ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿವೆ. ವಂದನೆಗಳು. 🙏.

    ಪ್ರತ್ಯುತ್ತರಅಳಿಸಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...