ಶುಕ್ರವಾರ, ಸೆಪ್ಟೆಂಬರ್ 3, 2021

ಹೇಗೆ ಬದುಕುವುದು ಹೇಳಿ? (ಕವಿತೆ) - ಶ್ರೀ ತುಳಸಿದಾಸ ಬಿ ಎಸ್‌ಶಿಕ್ಷಕರು ಗೊರೇಬಾಳ ಕ್ಯಾಂಪ್, ರಾಯಚೂರು.

ಹೇಗೆ ಬದುಕುವುದು ಹೇಳಿ?     

ನಾಗಲೋಟದಿ ಏರಿ ನಿಂತಿದೆ ಅಗತ್ಯ ವಸ್ತುಗಳ ಬೆಲೆ
ಶತಕ ದಾಟಿ ಮುನ್ನುಗ್ಗುತ್ತಲೇ ಇದೆ
ಪೆಟ್ರೋಲ್, ಡೀಸೆಲ್‌ ಗಳ ಬೆಲೆ 
ಹೀಗಾದರೆ ಮುಂದೆ ಹೇಗೆ ಬದುಕುವುದು ಹೇಳಿ?

ಹಣವಿರದ ರೋಗಿಗೆ 
ಚಿಕಿತ್ಸೆ ಗಗನ ಕುಸುಮವಾಗಿದೆ
ಆಸ್ಪತ್ರೆಗಳು ಬಕಾಸುರನ ರೂಪ ತಾಳಿ
ರೋಗಿಯ ಹಣ. ಬಿಟ್ಟರೆ ಹೆಣವನ್ನು ನುಂಗುವ 
ಈ ದಿನಗಳಲ್ಲಿ ಹೇಗೆ ಬದುಕವುದು ಹೇಳಿ?

ಸಣ್ಣಗೆ ಏರುತ್ತಲೆ ಇದೆ ಅನಿಲದ ಬೆಲೆ
ವಿದ್ಯುತ್ತಿನ ಬೆಲೆಗೆ ಗಿರ್ರನೆ ತಿರುಗುತ್ತದೆ ತೆಲೆ  
ದುಡಿಮೆ ತಪ್ಪಿದರೆ ಸೀದಾ ಪಾತಾಳಕ್ಕೆ
ಇಂತ ಹೊತ್ತಿನಲ್ಲಿ ಹೇಗೆ ಬದುಕುವುದು ಹೇಳಿ?

ನಮ್ಮ ರಕ್ತವೇಕೋ ತಣ್ಣಗಾದಂತಾಗಿ
ಪ್ರತಿಭಟನೆಯ ಧ್ವನಿ ಕ್ಷೀಣಿಸುತ್ತಿದೆ
ಆಳುವ ದೊರೆಗಳಿಗೆ ಅಳು ಕೇಳಿಸದಂತಿದೆ
ಉಸಿರುಗಟ್ಟುವ ಈ ವಾತಾವರಣದಲ್ಲಿ 
ಎಲ್ಲದನ್ನು ಸಹಿಸುತ್ತ ಹೇಗೆ ಬದುಕುವುದು ಹೇಳಿ?

ಹೆಂಡದಂಗಡಿಗಳು ಹುಟ್ಟುತ್ತಲೇ ಇವೆ
ದಂಡ ದುಬಾರಿಯಾಗಿದೆ ಸಾಲ ಸೂಲವಾಗುತ್ತಾ
ಬೆಲೆ ಏರಿಕೆ ನಮ್ಮ ದಹಿಸುತ್ತಿರುವಾಗ
ಎಲ್ಲವನು ಸಹಿಸಿ ನಾವು ಹೇಗೆ ಬದುಕುವುದು ಹೇಳಿ?
- ಶ್ರೀ ತುಳಸಿದಾಸ ಬಿ ಎಸ್‌
ಶಿಕ್ಷಕರು ಗೊರೇಬಾಳ ಕ್ಯಾಂಪ್, ರಾಯಚೂರು.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...