ಮಂಗಳವಾರ, ಸೆಪ್ಟೆಂಬರ್ 14, 2021

ಅತ್ಯಾಚಾರದ ಕಿಚ್ಚು (ಕವಿತೆ) - ರಾಮಾ (ರಾಮಲಿಂಗ ಮಾಡಗಿರಿ).

ಅತ್ಯಾಚಾರದ ಕಿಚ್ಚು

ಹುಟ್ಟಿದ ಕಣ್ಣು ಪಿಳಕಿಸುವ ಮುನ್ನ
ಬಾಯೊಳಗಿನ ಮಾತು ಜಾರುವ ಮುನ್ನ
ಮೊಗ್ಗಾದ ಹೂವು ಅರಳುವ ಮುನ್ನ
ನೀನೇಕೆ ಬಿದ್ದೆಮ್ಮಾ ಕಾಮಾಂಧರ ಕಣ್ಣಿಗೆ
ಮನಸ್ಸಾದರೂ ಬಂತೇಗೆ ಮುಂಡೆ ಸೂಳೇ ಮಕ್ಳಿಗೆ..!

ಪುಟ್ಟ ಪುಟ್ಟ ಹೆಜ್ಜೆಯಿಟ್ಟು ಓಡಾಡಿದೆ ಚಿನ್ನ
ತೊದಲು ತೊದಲು ನುಡಿಯುತ್ತಾ ಜಿಗಿದಾಡಿದ ನಿನ್ನ
ಪುಟ್ಟ-ಪುಟ್ಟ ಹೆಜ್ಜೆಯೂ ನೋಡದೆ,
ತೊದಲು ನುಡಿಯೂ ಹೃದಯ ತಾಕದೆ,
ಮುಟ್ಟಿದ ರಟ್ಟೆ ಕತ್ತರಿಸಿದರೂ ಆರದೆನ್ನ ಕಿಚ್ಚು....!

ನೋವು ಕೂಡ ಅರಿಯದ ಪುಟ್ಟ ಹೃದಯದ ಕಂದಾ....
ಸಹಿಸಿದೇಗೆ ಕೊಟ್ಟ ನೋವ ಯಾವ ಎದೆಯಿಂದ...
ನೀನೊಮ್ಮೆ ಕೇಳಬಾರದೆ ಕಾಮಾಂಧರಿಗೆ ಚೆಂದ?
ನಿಮ್ಮನ್ನಡೆದ ಆ ತಾಯಿ ನನ್ನಂಥ ಹೆಣ್ಣೆಂದ.!
ಬಂದಿತೇನೋ ನನ್ನ ಮುಟ್ಟಿ ನಿಮಗೇನು ಪಸಂದ...??
ಪುಟ್ಟ ಕಂದನ ಜೀವ ತಿಂದ,
ನಿಮ್ಮೆದೆಯ ಸೀಳಿ ರಕ್ತ ಕುಡಿದರೂ ತೀರದೆನ್ನ ಕ್ರೋಧ..!
              
             -ರಾಮಾ
                 (ರಾಮಲಿಂಗ ಮಾಡಗಿರಿ).


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

1 ಕಾಮೆಂಟ್‌:

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...