ಮಂಗಳವಾರ, ಸೆಪ್ಟೆಂಬರ್ 14, 2021

ಗಜಲ್ - ಶ್ರೀ ಲಕ್ಷ್ಮೀನಾರಾಯಣ ಕೆ ವಾಣಿಗರಹಳ್ಳಿ.

ಗಜಲ್

ಹೆಜ್ಜೆಗಳ ಹಿಂಬಾಲಿಸಿ ಭಯದ ನೆರಳಾಗಿ ಎದರಿಸುತ್ತಿವೆ ನಾಣಿ
ಹೆಜ್ಜೆ ಹೆಜ್ಜೆಗೂ ಮುಖವಾಡದ ಮರುಳಾಗಿ ಎದರಿಸುತ್ತಿವೆ ನಾಣಿ

ದೇಶದೊರಗಿನ‌ ಸೋಂಕು ಸಮುದಾಯದ ಗೂಡು ಸೇರಿದೆ
ಮನೆ ಮನೆಯೂ  ಸ್ಮಶಾಣ ಮೌನದ ಬಯಲಾಗಿ ನರಳುತ್ತಿವೆ ನಾಣಿ

ಸೋಲುಂಡ ಪ್ರಭುತ್ವ ಸ್ವಾರ್ಥದ ಕೂಳುಂಡು ತೇಗುತ್ತಿವೆ
ಉಸಿರಿಗಟ್ಟಿ ಬೀದಿ ಬೀದಿಯಲ್ಲಿ ಹೆಣಗಳಾಗಿ ಉರುಳುತ್ತಿವೆ ನಾಣಿ

ಎತ್ತಮ್ಮ ಅಪ್ಪನೂ ಕೂಡ ಮುಟ್ಟಿಸಿಕೊಳ್ಳಲಾಗದ ನೆಂಟನಾಗಿದ್ದಾನೆ
ಖಾಕಿ ಲಾಟಿ ಬೂಟು ಲಾಕ್ಡೌನ್ ಸೀಲ್ಡೌನ್ಗಳಾಗಿ ಭಯಪಡಿಸುತ್ತಿವೆ ನಾಣಿ

ನೆಲೆಯೂ ಕಾಣದೆ ದಿಕ್ಕೆಟ್ಟು ದಿಕ್ಕಾಪಾಲಾಗಿ ಬೆರಗಾಗಿದೆ ನಾಡು
ದಿಕ್ಕೆಟ್ಟ ಜನ ಸಮಾಧಿಯ ನಿತ್ಯ ಹೋಮವಾಗಿ ಸುಡುತ್ತಿವೆ ನಾಣಿ

ಕನಸ್ಸುಗಳು ಕಮರಿ ಕಮಟು ವಾಸನೆ ಹರಡಿನಿಂತಿದೆ ಸುತ್ತಲು
ಸೃಷ್ಟಿಕರ್ತನ ಗೂಡಿಗೂ ಬಾಗಿಲಾಕುವಂತಾಗಿ ದಿಗ್ಗೆಟ್ಟಿವೆ ನಾಣಿ

ನಾಳೆಯ ನಿರೀಕ್ಷೆಯಲಿ ದಿನ ದೂಡುವ ದಾರುಣತೆಯ ದಾವಂತ ಮಾತ್ರವಿದೆ
ಬದುಕ ಶೂನ್ಯದ ಸಾವಿನ ರುದ್ರ ನರ್ತನವಾಗಿ ಮಡುಗಟ್ಟಿವೆ ನಾಣಿ

      --- ಲಕ್ಷ್ಮೀನಾರಾಯಣ ಕೆ ವಾಣಿಗರಹಳ್ಳಿ.



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...