ಗುರುವಾರ, ಸೆಪ್ಟೆಂಬರ್ 16, 2021

ಗಜಲ್ - ಮಾಜಾನ್ ಮಸ್ಕಿ.

ಗಜಲ್ 

ಜಾಣರು ತಮ್ಮ ಪ್ರತಿಬಿಂಬ ಕಾಣಲು ಕನ್ನಡಿಯ ಒರೆಸುವರು  ಗೆಳತಿ 
ಗಾಜು ನೂರಾದರೂ ಕಾಣುವ ಬಿಂಬ ಒಂದೇ ಎಂದು ಅರಿಯುವರು ಗೆಳತಿ 

ಬಾರ ಬಾರ ಹಜಾರ ಬಾರ ನೋಡಿಕೊಳ್ಳುವರು ತಮ್ಮ ಸೌಂದರ್ಯತೆ 
ಹಲವಾರು ಆಕೃತಿಯಲ್ಲಿ ದರ್ಪಣವನ್ನು ಕಾಪಾಡುವರು ಗೆಳತಿ 

ಕಪ್ಪು ಬಿಳುಪಿನ ಅಪರೂಪದ ಕಲಾಕೃತಿ ಅಮೋಘವಾಗಿದೆ 
ಬಾಜಾರಿನ ಬಿಕರಿಗಿದ್ದರೂ ನೋಡಿ ಕ್ಷಣವಾದರೂ ಮೈ ಮರೆಯುವರು ಗೆಳತಿ 

ಸೂಕ್ಷ್ಮಾತೀತ ಸೂಕ್ಶ್ಮವಾಗಿರುವುದು ಸೆರೆ ಹಿಡಿಯುವ ಇದರ ನೋಟ 
ಬಲು ನಾಜೂಕಿನ ಒಡತಿಯ ಬಲು ಪ್ರೀತಿಯಿಂದ ರಕ್ಷಿಸುವರು ಗೆಳತಿ 

ಅಜಾಗೃತಿಗೆ ಕೈ ಜಾರಿ ಚೂರಾಗುವುದು ಬಿದ್ದರೆ ಮಾಜಾ 
ಮನ ತಲ್ಲಣಗೊಳ್ಳುವುದು ಬೀಳದಂತೆ ಹಿಡಿಯುವರು ಗೆಳತಿ 

- ಮಾಜಾನ್ ಮಸ್ಕಿ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...