ಕಾಯಕ ಯೋಗಿ
ಹುಡುಕುತಿರುವೆ ಅರಸುತಿರುವೆ
ಮೋಕ್ಷಗೊಂಡಂ ವಿಶ್ವೇಶ್ವರರನ್ನು
ನಾಡಕಟ್ಟಿದ ದಿವಾನರನ್ನು
ಚಂದಿರನ ಅಂಗಳದಲ್ಲಿ
ಭೂವಿಯ ಗೆದ್ದ ಕನ್ನಡ ಕುವರನನ್ನ
ಭಾರತ ರತ್ನನನ್ನ ಅರಸುತಿರುವೆ
ಈಗೀನ ಕಾಮಗಾರಿಗಳ ಕಲ್ಲುಗಳಲ್ಲಿ
ಸಿಮೆಂಟಿನಲ್ಲಿ ಮತ್ತೆ ಕ್ಯೂರಿಂಗ್ ಮಾಡುವ
ಕೈ ಕರಗಳಲ್ಲಿ ಎಂಜಿನೀಯರಗಳ ಹೃದಯದಲ್ಲಿ
ಗಚ್ಚುಗಾರೆಯ ಹಾಕಿ ಕಲ್ಲು ಚಪ್ಪಡಿಯ ಬೆಸೆದು
ಸೋರಿಕೆಯ ಸೋಂಕು ಕಾಣದ
ಇಂದಿಗೂ ಕೋಟಿ ಕೋಟಿ ಜನರಿಗೆ ಉಸಿರು ಹಸಿರನು ನೀಡುವ ಕೆರೆಗಳು ಅಣೆಕಟ್ಟುಗಳು
ಸಮನಿಲ್ಲುವವೇ? ಸಮಕಾಲಿನ ಮೈಲುಗಲ್ಲುಗಳು.
ಸೋರುತಿರುವ ಕಟ್ಟಡಗಳು
ಜಿಡ್ಡುಹಿಡಿದ ಚರಂಡಿಗಳು ಗುಂಡಿ ಬಿದ್ದ ರಸ್ತೆಗಳು
ವರ್ಷದಲ್ಲೇ ಕೊಚ್ಚಿಹೋಗುತಿರುವ ಸೇತುವೆಗಳಿಗಿಲ್ಲ
ನಿಮ್ಮ ಶ್ರದ್ಧೆ ನಿಷ್ಠೆ ಪ್ರಾಮಾಣಿಕತೆಯ ಕಾಳಜಿ
ಓದಬೇಕೆನ್ನುವ ಸಾಧಿಸಬೇಕೆನ್ನುವ
ಛಲಗಾರಿಕೆ ಹುಟ್ಟುವುದೇ
ನಿಮ್ಮ ಕಷ್ಟ ಸಹಿಷ್ಣುತೆಯ ಪರಾಕಾಷ್ಟತೆ ತಿಳಿದಾಗ
ಪಾಠ ಕಲಿಸಿ ಫೀ ತುಂಬಿ ವಿದ್ಯೆ ಕಲಿತ ನೀವೆಲ್ಲಿ,
ಎಲ್ಲ ಅವಕಾಶಗಳಿದ್ದು ಸಾಧನೆಗೆ ತಡಕಾಡುತಿರುವ ನಾವೆಲ್ಲಿ ?
ಓ ಕಾಯಕ ಯೋಗಿ ಆದೀರಿ ಓದುಗನ ಕನ್ನಡಿಯಲಿ
ಆತ್ಮವಿಶ್ವಾಸ ಧೈರ್ಯ ಸ್ಪೂರ್ತಿ ತುಂಬುವ ಮುನ್ನುಡಿ
ಆರೋಗ್ಯ ಭಾಗ್ಯವ ತಿಳಿಸಿ,ಅಳವಡಿಸಿಕೊಳುತ
ಶತಾಯುಷಿ ಮಹರ್ಷಿಗಳಾದಿರಿ
ಆಕಾಶದೆತ್ತರಕೆ ಬೆಳೆದು ನಿಂತ ಹೆಮ್ಮರವಾದಿರಿ
ಮನೆ ಮನಗಳಲಿ ಬೆಳಗುವ ಹಾಡಾದಿರಿ ಮನತುಂಬಿದಿರಿ
ನೀವಿಲ್ಲ ಅಂತ ಹೇಳುವವರು ಯಾರು?ಮಾತನಾಡುತ್ತಿದೆ ನಿಮ್ಮಜನಕಲ್ಯಾಣದ ಸಾಧನೆಗಳು
ಕಲಿಯಬೇಕಿಂದು ಅಭಿಯಂತರರೆಲ್ಲ
ನಿಮ್ಮ ವೈಚಾರಿಕತೆಯ ಬದುಕನ್ನು
ಶತಾಯುಷಿಯ ಹಸಿವನ್ನು.
✍ ಶ್ರೀಧರ ಗಸ್ತಿ ಧಾರವಾಡ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ