ಶಿಕ್ಷಣ ಮತ್ತು ಶಿಕ್ಷಕರ ಮಹತ್ವ
ಶಿಕ್ಷಣ ಮತ್ತು ಶಿಕ್ಷಕ ಇವೆರಡೂ ಒಂದೇ ನಾಣ್ಯದ ಎರಡು ಮುಖಗಳು. ಒಂದು ಸದಾಕಾಲವೂ ಪ್ರವಹಿಸುವ ವಾಹಿನಿ. ಮತ್ತೊಂದು ಸಾಗರ.ಇಲ್ಲಿ ವಾಹಿನಿ ಶಿಕ್ಷಣವಾದರೆ ಸಾಗರ ಶಿಕ್ಷಕ. ಹೌದು ಶಿಕ್ಷಕ ವಾಹಿನಿಯಲ್ಲಿ ಪ್ರವಹಿಸುವ ಎಲ್ಲ ಅಂಶಗಳನ್ನು ತನ್ನೊಳಗೆ ಬಚ್ಚಿಟ್ಟುಕೊಂಡು ವೃದ್ಧಿಸಲು ಶ್ರಮಿಸಬೇಕು.ಶಿಕ್ಷಣ ನಿಂತ ನೀರಲ್ಲ.ಅದು ಯಾವಾಗಲೂ ಭೋರ್ಗರೆಯುವ ಜಲಪಾತ.ಇದರಲ್ಲಿ ನಿರಂತರವಾದ ಸಂಘಟಿತ ಬದಲಾವಣೆಗಳಾಗಿವೆ. ಇದನ್ನು ಬದಲಿಸುವ ಶಕ್ತಿ ಶಿಕ್ಷಕ. ಶಿಕ್ಷಣ ಪ್ರಚ್ಛನ್ನ ಶಕ್ತಿಯಾದರೆ,ಶಿಕ್ಷಕ ವಿದ್ಯುಚ್ಛಕ್ತಿ.ಹೊಸ ಬಗೆಯದಾದ ಬದಲಾವಣೆಗಳನ್ನು ತರುವುದು ಶಿಕ್ಷಣದ ಕೆಲಸ ಅನುಷ್ಠಾನಕ್ಕೆ ತರುವುದು ಶಿಕ್ಷಕನ ಕೆಲಸ.ಭೂಮಿಯ ಮೇಲಿನ ಹುಟ್ಟಿದ ಪ್ರತಿಯೊಂದು ಜೀವಿಗೂ ಅದರದೇ ಆದ ಒಂದು ಸಂಸ್ಕ್ರತಿ,ಸಂಸ್ಕಾರ ಇರುತ್ತದೆ.ಇದು ಜೀವಿಯಿಂದ ಜೀವಿಗೆ ಬದಲಾಗುತ್ತದೆ. ಭೂಮಿಯ ಮೇಲಿನ ಅತಿ ಬುದ್ದಿವಂತ ಪ್ರಾಣಿ ಮಾನವ. ಹೌದು ಇವನಿಗೆ ಸಂಸ್ಕ್ರತಿ ಸಂಸ್ಕಾರ ಎಲ್ಲವೂ ಇವೆ.ವಾಸ್ತವದಲ್ಲಿ ಶಿಕ್ಷಣ ಎನ್ನುವುದು ಜೀವಮಾನದಲ್ಲಿ ಎಷ್ಟೇ ಕಷ್ಟ ಆದರೂ ಒಂದು ನಿರ್ದಿಷ್ಟವಾದ ಕೆಲಸ ಮಾಡಿ ಅದರಿಂದ ಬರುವ ಹಣವನ್ನು ಗುಡ್ಡೆ ಹಾಕಲು ಪಡುವ ಶ್ರಮವೇ ಶಿಕ್ಷಣ ಎಂದಾಗಿದೆ.ಹಾಗಾದರೆ ಶಿಕ್ಷಣ ಎನ್ನುವುದು ಕೇವಲ ಒಂದು ಹಣವೆಂಬ ಕಾಗದವನ್ನು ಸಂಪಾದಿಸಲು ತಾನೇ ತಾನಾಗಿ ಮಾಡಿಕೊಂಡ ಒಂದು ಒಳ ಒಪ್ಪಂದ ಎಂದಾಯಿತು.
ನಮ್ಮ ಸಂಸ್ಕಾರ, ಸಂಸ್ಕ್ರತಿಯ ಭವ್ಯ ಕಟ್ಟಡದ ಮೇಲೆ ಶಿಕ್ಷಣ ಎನ್ನುವ ಒಂದು ಹೊಸ ಜನ್ಮದ ನವಜಾತ ಶಿಶು ಜನಿಸಬೇಕು.ಆದರೆ ಇಂದು ಶಿಕ್ಷಣ ಎನ್ನುವುದು ಒಂದು ಪ್ರಮುಖ ಉದ್ಯಮವಾಗಿದೆ.ಹಣ ಕೊಳ್ಳೆ ಹೊಡೆಯಲು ಸುಲಭ ಮಾರ್ಗವಾಗಿದೆ.ಸರ್ವಶಕ್ತರ ಪರವಾದ ಶಿಕ್ಷಣ ಇದೆ.ಆದರೆ ಬಡವರ ಕೈಗೆ ನಿಲುಕದ ನಕ್ಷತ್ರ ಶಿಕ್ಷಣ. ಇಂದಿನ ಶಿಕ್ಷಣ ಕೇವಲ ಮುಂದಿನ ತರಗತಿಗೆ ಭಡ್ತಿ ವಿನಃ ಮತ್ತೇನು ಅಲ್ಲ. ಮಕ್ಕಳ ಮೇಲೆ ಮಾನಸಿಕ ಒತ್ತಡ ಹೇರುವ ಮೂಲಕ ಅವರನ್ನು ಪುಸ್ತಕದ ಹುಳುಗಳನ್ನಾಗಿ ಮಾಡುತ್ತಿವೆ.ಶಿಕ್ಷಣ ಕೇವಲ ಶಿಕ್ಷಣ ಅಷ್ಟೇ ವಿನಃ ಮತ್ತೇನು.
ಶಿಕ್ಷಣ ಮನುಷ್ಯನನ್ನು ಸ್ವಾವಲಂಬಿ ಜೀವನ ನಡೆಸಲು ಪ್ರೇರೇಪಣೆ ನೀಡಬೇಕು. ಅದು ನಿಜವಾದ ಶಿಕ್ಷಣ. ತನ್ನನ್ನು ತಾನು ಸಾಕಿ ಸಲಹಿ ನೋಡಿಕೊಳ್ಳುವಂತಿರಬೇಕು.ತನ್ನ ಜೀವನವನ್ನು ತಾನೇ ತಾನಾಗಿ ನಡೆಸಲು ಅವಕಾಶ ಮಾಡಿಕೊಡಬೇಕು ಅದು ಶಿಕ್ಷಣ. ಆದರೆ ಇಂದಿನ ಯಾಂತ್ರೀಕೃತ ಜೀವನದಲ್ಲಿ ಶಿಕ್ಷಣ ಎನ್ನುವುದು ಒಂದು ಸಾಧನ.
ಶಿಕ್ಷಣ ಮೌಢ್ಯಗಳನ್ನು ಬೆಳೆಸಬಾರದು.ಮೌಲ್ಯಗಳನ್ನು ಬೆಳೆಸಬೇಕು.ಮಾನವೀಯತೆಯ ನೆಲೆಗಟ್ಟಿನ ಶಿಕ್ಷಣ ದೊರೆಯಬೇಕು. ಸಂಬಂಧಗಳನ್ನು ಬೆಸೆಯುವಂತಿರಬೇಕು.ಐಶಾರಾಮಿ ಜೀವನದ ಕನಸಿನಲ್ಲಿ ಆಶಾ ಗೋಪುರದ ಮೇಲೆ ಹೊನ್ನ ಕಳಶವನ್ನು ಇಟ್ಟು ನೋಡುತ್ತಿದ್ದೇವೆ.ಇದು ಬದಲಾಗಬೇಕಿದೆ.ಪಠ್ಯದಲ್ಲಿ ಸ್ವಾವಲಂಬನೆ ಪ್ರತಿನಿಧಿಸಲಾಗುವ ಶಿಕ್ಷಣ ದೊರೆಯಬೇಕಿದೆ.ನಮ್ಮ ನೆಲದ ಮೇಲಿನ ಮೌಲ್ಯಗಳನ್ನು ಒಂದುಗೂಡಿಸಿ ಈ ನೆಲವನ್ನು ಆರಾಧಿಸುವ ಶಿಕ್ಷಣ ಬೇಕಾಗಿದೆ.
ಪಾಶ್ಚಾತ್ಯ ದೇಶಗಳಲ್ಲಿರುವ ಶೈಕ್ಷಣಿಕ ಸಂಸ್ಥೆಗಳಲ್ಲಿ ಓದುತ್ತಿರುವ ನಾವುಗಳು ನಮ್ಮ ದೇಶದ ನಿಜವಾದ ಶಿಕ್ಷಣವನ್ನು ಹಾಳುಮಾಡುತ್ತಿದ್ದೇವೆ.*ಜಗತ್ತು ಕಣ್ಣು ಬಿಡುವ ಮೊದಲು ಮಹಾಕಾವ್ಯ ರಚನೆ ಮಾಡಿದ ನೆಲ ನಮ್ಮದು.ಶಾಲೆಗಳು ರಚನೆ ಮಾಡುವ ಬಹುದೊಡ್ಡ ಚರ್ಚೆ ನಡೆಯುತ್ತಿರುವ ಕಾಲದಲ್ಲಿ ವಿಶ್ವವಿದ್ಯಾಲಯ ಕಟ್ಟಿ ಜಗತ್ತಿಗೆ ಜ್ಞಾನ ವಿಜ್ಞಾನಗಳ ಅರಿವು ಮೂಡಿಸಿದ ದೇಶ ನಮ್ಮದು*.
ಶಿಕ್ಷಣ ನಿಂತ ನೀರಲ್ಲ ಹರಿಯುವ ನೀರು. ಶಿಕ್ಷಣದ ಆಯಾಮಗಳು ಬದಲಾಗಬೇಕು.ನಮ್ಮ ನೆಲ,ಜಲ,ಭಾಷೆಗಳ ಮೇಲೆ ನಮಗೆ ಅಭಿಮಾನವಿರಬೇಕು.ಆಗ ಶಿಕ್ಷಣ ಪಡೆದ ನಾವು ಧನ್ಯರೆನಿಸುತ್ತೇವೆ.ಭೂಮಿಯ ಮೇಲಿನ ಹುಟ್ಟಿದ ಪ್ರತಿಯೊಂದು ಜೀವಿಗೂ ಅದರದೇ ಆದ ಒಂದು ಸಂಸ್ಕ್ರತಿ,ಸಂಸ್ಕಾರ ಇರುತ್ತದೆ.ಇದು ಜೀವಿಯಿಂದ ಜೀವಿಗೆ ಬದಲಾಗುತ್ತದೆ. ಭೂಮಿಯ ಮೇಲಿನ ಅತಿ ಬುದ್ದಿವಂತ ಪ್ರಾಣಿ ಮಾನವ. ಹೌದು ಇವನಿಗೆ ಸಂಸ್ಕ್ರತಿ ಸಂಸ್ಕಾರ ಎಲ್ಲವೂ ಇವೆ.ವಾಸ್ತವದಲ್ಲಿ ಶಿಕ್ಷಣ ಎನ್ನುವುದು ಜೀವಮಾನದಲ್ಲಿ ಎಷ್ಟೇ ಕಷ್ಟ ಆದರೂ ಒಂದು ನಿರ್ದಿಷ್ಟವಾದ ಕೆಲಸ ಮಾಡಿ ಅದರಿಂದ ಬರುವ ಹಣವನ್ನು ಗುಡ್ಡೆ ಹಾಕಲು ಪಡುವ ಶ್ರಮವೇ ಶಿಕ್ಷಣ ಎಂದಾಗಿದೆ.ಹಾಗಾದರೆ ಶಿಕ್ಷಣ ಎನ್ನುವುದು ಕೇವಲ ಒಂದು ಹಣವೆಂಬ ಕಾಗದವನ್ನು ಸಂಪಾದಿಸಲು ತಾನೇ ತಾನಾಗಿ ಮಾಡಿಕೊಂಡ ಒಂದು ಒಳ ಒಪ್ಪಂದ ಎಂದಾಯಿತು.
ನಮ್ಮ ಸಂಸ್ಕಾರ, ಸಂಸ್ಕ್ರತಿಯ ಭವ್ಯ ಕಟ್ಟಡದ ಮೇಲೆ ಶಿಕ್ಷಣ ಎನ್ನುವ ಒಂದು ಹೊಸ ಜನ್ಮದ ನವಜಾತ ಶಿಶು ಜನಿಸಬೇಕು.ಆದರೆ ಇಂದು ಶಿಕ್ಷಣ ಎನ್ನುವುದು ಒಂದು ಪ್ರಮುಖ ಉದ್ಯಮವಾಗಿದೆ.ಹಣ ಕೊಳ್ಳೆ ಹೊಡೆಯಲು ಸುಲಭ ಮಾರ್ಗವಾಗಿದೆ.ಸರ್ವಶಕ್ತರ ಪರವಾದ ಶಿಕ್ಷಣ ಇದೆ.ಆದರೆ ಬಡವರ ಕೈಗೆ ನಿಲುಕದ ನಕ್ಷತ್ರ ಶಿಕ್ಷಣ. ಇಂದಿನ ಶಿಕ್ಷಣ ಕೇವಲ ಮುಂದಿನ ತರಗತಿಗೆ ಭಡ್ತಿ ವಿನಃ ಮತ್ತೇನು ಅಲ್ಲ. ಮಕ್ಕಳ ಮೇಲೆ ಮಾನಸಿಕ ಒತ್ತಡ ಹೇರುವ ಮೂಲಕ ಅವರನ್ನು ಪುಸ್ತಕದ ಹುಳುಗಳನ್ನಾಗಿ ಮಾಡುತ್ತಿವೆ.ಶಿಕ್ಷಣ ಕೇವಲ ಶಿಕ್ಷಣ ಅಷ್ಟೇ ವಿನಃ ಮತ್ತೇನು.
ಶಿಕ್ಷಣ ಮನುಷ್ಯನನ್ನು ಸ್ವಾವಲಂಬಿ ಜೀವನ ನಡೆಸಲು ಪ್ರೇರೇಪಣೆ ನೀಡಬೇಕು. ಅದು ನಿಜವಾದ ಶಿಕ್ಷಣ. ತನ್ನನ್ನು ತಾನು ಸಾಕಿ ಸಲಹಿ ನೋಡಿಕೊಳ್ಳುವಂತಿರಬೇಕು.ತನ್ನ ಜೀವನವನ್ನು ತಾನೇ ತಾನಾಗಿ ನಡೆಸಲು ಅವಕಾಶ ಮಾಡಿಕೊಡಬೇಕು ಅದು ಶಿಕ್ಷಣ. ಆದರೆ ಇಂದಿನ ಯಾಂತ್ರೀಕೃತ ಜೀವನದಲ್ಲಿ ಶಿಕ್ಷಣ ಎನ್ನುವುದು ಒಂದು ಸಾಧನ.
ಶಿಕ್ಷಣ ಮೌಢ್ಯಗಳನ್ನು ಬೆಳೆಸಬಾರದು.ಮೌಲ್ಯಗಳನ್ನು ಬೆಳೆಸಬೇಕು.ಮಾನವೀಯತೆಯ ನೆಲೆಗಟ್ಟಿನ ಶಿಕ್ಷಣ ದೊರೆಯಬೇಕು. ಸಂಬಂಧಗಳನ್ನು ಬೆಸೆಯುವಂತಿರಬೇಕು.ಐಶಾರಾಮಿ ಜೀವನದ ಕನಸಿನಲ್ಲಿ ಆಶಾ ಗೋಪುರದ ಮೇಲೆ ಹೊನ್ನ ಕಳಶವನ್ನು ಇಟ್ಟು ನೋಡುತ್ತಿದ್ದೇವೆ.ಇದು ಬದಲಾಗಬೇಕಿದೆ.ಪಠ್ಯದಲ್ಲಿ ಸ್ವಾವಲಂಬನೆ ಪ್ರತಿನಿಧಿಸಲಾಗುವ ಶಿಕ್ಷಣ ದೊರೆಯಬೇಕಿದೆ.ನಮ್ಮ ನೆಲದ ಮೇಲಿನ ಮೌಲ್ಯಗಳನ್ನು ಒಂದುಗೂಡಿಸಿ ಈ ನೆಲವನ್ನು ಆರಾಧಿಸುವ ಶಿಕ್ಷಣ ಬೇಕಾಗಿದೆ.
ಪಾಶ್ಚಾತ್ಯ ದೇಶಗಳಲ್ಲಿರುವ ಶೈಕ್ಷಣಿಕ ಸಂಸ್ಥೆಗಳಲ್ಲಿ ಓದುತ್ತಿರುವ ನಾವುಗಳು ನಮ್ಮ ದೇಶದ ನಿಜವಾದ ಶಿಕ್ಷಣವನ್ನು ಹಾಳುಮಾಡುತ್ತಿದ್ದೇವೆ.*ಜಗತ್ತು ಕಣ್ಣು ಬಿಡುವ ಮೊದಲು ಮಹಾಕಾವ್ಯ ರಚನೆ ಮಾಡಿದ ನೆಲ ನಮ್ಮದು.ಶಾಲೆಗಳು ರಚನೆ ಮಾಡುವ ಬಹುದೊಡ್ಡ ಚರ್ಚೆ ನಡೆಯುತ್ತಿರುವ ಕಾಲದಲ್ಲಿ ವಿಶ್ವವಿದ್ಯಾಲಯ ಕಟ್ಟಿ ಜಗತ್ತಿಗೆ ಜ್ಞಾನ ವಿಜ್ಞಾನಗಳ ಅರಿವು ಮೂಡಿಸಿದ ದೇಶ ನಮ್ಮದು*.
ಶಿಕ್ಷಣ ನಿಂತ ನೀರಲ್ಲ ಹರಿಯುವ ನೀರು. ಶಿಕ್ಷಣದ ಆಯಾಮಗಳು ಬದಲಾಗಬೇಕು.ನಮ್ಮ ನೆಲ,ಜಲ,ಭಾಷೆಗಳ ಮೇಲೆ ನಮಗೆ ಅಭಿಮಾನವಿರಬೇಕು.ಆಗ ಶಿಕ್ಷಣ ಪಡೆದ ನಾವು ಧನ್ಯರೆನಿಸುತ್ತೇವೆ. ಶಿಕ್ಷಣ ಎನ್ನುವುದು ಹತ್ತಿರ ಇರುವ ಯಾವುದೇ ಒಬ್ಬ ವ್ಯಕ್ತಿಯ ತಲೆಯಲ್ಲಿ ಅವನಿಗೆ ಇಷ್ಟವಿಲ್ಲದಿದ್ದರೂ ಕೂಡ ತುಂಬುವ ಅಕ್ಷರಗಳ ಕೊಂಪೆಯಲ್ಲ.ಅಥವಾ ಇದನ್ನೇ ಆಧಾರವಾಗಿಟ್ಟುಕೊಂಡು ಹಣವನ್ನು ಸಂಪಾದಿಸುವ ವಾಮಮಾರ್ಗವೂ ಅಲ್ಲ.ಅದೊಂದು ಸೇವೆಯಾಗಬೇಕು.ಆದರೆ ಇಂದು ಶಿಕ್ಷಣ ಎನ್ನುವುದು ಅತಿ ಸುಲಭವಾಗಿ ಹಣವೆಂಬ ಕಾಗದವನ್ನು ಗುಡ್ಡೆ ಹಾಕಲು ಮಾಡಿಕೊಂಡ ಒಂದು ಸಾಂಪ್ರದಾಯಿಕ ಒಪ್ಪಂದವಾಗಿದೆ.ಏಕೆಂದರೆ ಇಂದಿನ ಯಾಂತ್ರೀಕೃತ ಜೀವನದಲ್ಲಿ ನಾವು ಓಡುತ್ತಿದ್ದೇವೆ.ಎಲ್ಲಿಗೆ ಓಡಬೇಕು?ಏಕೆ ಓಡಬೇಕು? ಒಂದು ಗೊತ್ತಿಲ್ಲ.ಸಮಾಜದಲ್ಲಿ ನಮ್ಮ ಘನತೆ ಗೌರವ ಚಿಕ್ಕವಾಗಕೂಡದು.ಅದಕ್ಕಾಗಿ ಅಂಕಗಳ ಬೆನ್ನು ಹತ್ತಿ ದಸೆಬಾಯಿ ಬಿಟ್ಟು ಕೊಂಡು ಓಡುತ್ತಿದ್ದೇವೆ.ನಮಗೆ ಗೊತ್ತಿಲ್ಲ. ಮುಂದೊಂದು ದಿನ ಆಯಾಸವಾಗಿ ಇದೆ ಘನತೆ ಗೌರವಗಳು ನಮ್ಮನ್ನು ಅಧೋಗತಿಗೆ ತಳ್ಳುತ್ತದೆ ಎಂದು.
ಮದುವೆ ಮಾಡಿಕೊಂಡ ತಕ್ಷಣ ಮಧು ಚಂದ್ರಕ್ಕೆ ಹೋಗುವ ಮೊದಲು ನಮ್ಮ ಮಗುವಿಗೆ ಒಂದು ದಾಖಲಾತಿ ಬೇಕು ಎಂದು ಒಂದು ಪ್ರವೇಶ ಪತ್ರ ಪಡೆದು ನಂತರ ಮಧು ಚಂದ್ರಕ್ಕೆ ಹೋಗುವ ಕಾಲ ಬಂದಿದೆ. ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲೆಸುವುದು ಎಂದರೆ ಇದೇನೆ ಇರಬಹುದು. ವಾಸ್ತವವಾಗಿ ಒಂದು ಕ್ಷಣ ಯೋಚಿಸಿ. ನಾವು ಏಕೆ ಇಷ್ಟು ವೇಗವಾಗಿ ಬೆಳೆಯುತ್ತಿದ್ದೇವೆಂದು ಕಾರಣ ಮುಂದೊಂದು ದಿನ ಇಲ್ಲಿಯವರೆಗೆ ನಾವು ನಮ್ಮ ಮಗುವಿಗೆ ಜನ್ಮ ನೀಡಿದಾಗಿನಿಂದ ಹಿಡಿದು ಉನ್ನತ ಮಟ್ಟದ ಶಿಕ್ಷಣ ಕೊಡಿಸುವವರೆಗೂ ಆದ ಖರ್ಚನ್ನು ಬಡ್ಡಿ ಸಮೇತ ಕಿತ್ತು ಗುಡ್ಡೆ ಹಾಕಲು ಶಿಕ್ಷಣ ಒಂದು ವ್ಯಾಪಾರ.ಹಾಗಾದರೆ ನಾವು ನಮ್ಮ ಮಕ್ಕಳಿಗೆ ಕೊಡಿಸಿದ್ದು ಶಿಕ್ಷಣ ಅಲ್ಲ.ಶಿಕ್ಷಣದಿಂದ ಕಾಗದವೆಂಬ ಹಣವನ್ನು ಹೇಗೆ ಗುಡ್ಡೆ ಹಾಕಬೇಕು ಎನ್ನುವ ತರಬೇತಿ ಕಾರ್ಯಾಗಾರ.
ನಾವು ಕಲಿಸುತ್ತಿರುವ ಈ ಶಿಕ್ಷಣ ನಮ್ಮ ಮಕ್ಕಳನ್ನು ನಮಗೆ ಗೊತ್ತಿರದ ಹಾಗೆ ನಮ್ಮನ್ನು ಮತ್ತು ಮಕ್ಕಳನ್ನು ದೂರ ಮಾಡಿ ಕೊನೆಗೊಂದು ದಿನ ತಂದೆ ತಾಯಿ ಇಬ್ಬರನ್ನೂ ಸಮಪಾಲು ಮಾಡಿ ಒಬ್ಬರನ್ನು ಅನಾಥಾಶ್ರಮಕ್ಕೆ ಮತ್ತೊಬ್ಬರನ್ನು ವೃದ್ದಾಶ್ರಮದೊಳಿಟ್ಟು ಸಾಕುವ ಜವಾಬ್ದಾರಿ ಹೊತ್ತಿದೆ.ಇದಕ್ಕೆ ಮೂಲ ಕಾರಣ ನಾವುಗಳೆ.ಉನ್ನತ ಮಟ್ಟದಲ್ಲಿ ನಮ್ಮ ಮಕ್ಕಳಿರಬೇಕು ಎನ್ನುವ ಆಸೆ ಇರಬೇಕು, ಆದರೆ ದುರಾಸೆ ಇರಬಾರದು. ಇದೆಲ್ಲದರ ನಡುವೆ ನಮ್ಮ ಮಕ್ಕಳಿಗೆ ಸಂಸ್ಕಾರ ಮತ್ತು ಸಂಸ್ಕ್ರತಿಯನ್ನು ಕಲಿಸುತ್ತ ಬಂದಿದ್ದರೆ,ಭಾರತದಲ್ಲಿ ಎಲ್ಲಿಯೂ ವೃದ್ದಾಶ್ರಮ,ಅನಾಥಾಶ್ರಮಗಳು ಇರುತ್ತಿರಲಿಲ್ಲ. ನಮ್ಮ ಮಕ್ಕಳಿಗೆ ಅವುಗಳ ಪರಿಚಯ ಮಾಡಿಕೊಡುವ ಕೆಲಸ ಆಗುತ್ತಿತ್ತು.ಆದರೆ ಕಾಲ ಬದಲಾಗಿದೆ. ಮಕ್ಕಳೇ ನಮಗೆ ಅಪ್ಪ ಅಮ್ಮ ಈ ವೃದ್ದಾಶ್ರಮ ಚೆನ್ನಾಗಿದೆ. ಈ ಅನಾಥಾಶ್ರಮ ಚೆನ್ನಾಗಿದೆ. ಸಿಟಿಗೆ ತುಂಬ ಹತ್ತಿರ. ಸ್ವಿಮ್ಮಿಂಗ್ ಫೂಲ್ ಇದೆ.ವಾರಕ್ಕೊಮ್ಮೆ ನಾನ್ ವೆಜ್ ಕೊಡ್ತಾರೆ.ಎಲ್ಲರಿಗೂ ಪ್ರತ್ಯೇಕವಾಗಿ ವ್ಯವಸ್ಥೆಯನ್ನು ಹೊಂದಿದೆ. ಫೀಜ್ ಕಡಿಮೆ ಅಂತೆ ಎಂದು ವಿವರಿಸುತ್ತಾರೆ.
ಕೇವಲ ಟೈ, ಶೂ,ಐಡಿ ಕಾರ್ಡ್ ಮುಂತಾದವುಗಳನ್ನು ಒಳಗೊಂಡ ಐಶಾರಾಮಿ ವಾಹನಗಳ ಮೂಲಕ ಶಾಲೆಗೆ ತೆರಳುವ ನಮ್ಮ ಮಕ್ಕಳು ದಳ್ಳಾಳಿಗಳಾಗುತ್ತಿದ್ದಾರೆ.ಎಲ್ಲವನ್ನೂ ವ್ಯವಹಾರಿಕವಾಗಿ ನೋಡುತ್ತಾರೆ.ಅವರಿಗೆ ನಮ್ಮ ನೆಲದ ಸೊಗಡು,ಸಂಸ್ಕ್ರತಿ,ಸಂಸ್ಕಾರ ಯಾವುದು ಗೊತ್ತಿಲ್ಲ. ಗೊತ್ತಾಗುವುದೂ ಇಲ್ಲ. ಕಾರಣ ನಾವು ಅವರಿಗೆ ಕೊಟ್ಟ ಶಿಕ್ಷಣ ಹಾಗಿದೆ.ಶಿಕ್ಷಣ ಮಾನವನ ಜೀವನ ರೂಪಿಸುವ ಒಂದು ಮಾದ್ಯಮವಾಗ ಬೇಕೆ ಹೊರತು ದುಡ್ಡು ಮಾಡುವ ಸಾಧನವಾಗಬಾರದು.ಶಿಕ್ಷಣ ನಮಗೆ ಸಂಸ್ಕಾರ ನೀಡಬೇಕು. ಅದು ಬಿಟ್ಟು ನಾವು ಶಿಕ್ಷಣಕ್ಕೆ ಸಂಸ್ಕಾರ ನೀಡಬಾರದು. ಅದೊಂದು ಸೇವೆಯಾಗಬೇಕು.ವ್ಯವಹಾರ ಆಗಬಾರದು.
ಮಾನವನಿಗೆ ಅವನ ತಾಯಿ ಜನ್ಮ ನೀಡಿದರೂ ಮತ್ತೊಂದು ಜನ್ಮ ನೀಡುವುದು ಶಿಕ್ಷಣ.ಅದು ಶಿಕ್ಷಣಕ್ಕೆ ಇರುವ ಶಕ್ತಿ. ಶಿಕ್ಷಣ ಸಂಸ್ಥೆಗಳು ಮನುಷ್ಯನ ಏಳಿಗೆಗಾಗಿ ಶ್ರಮಿಸಬೇಕು.ಹಣವನ್ನು ವಸೂಲಿ ಮಾಡುವ ಕೇಂದ್ರಗಳಾಗಬಾರದು.ಪ್ರತಿಷ್ಠೆ ಎನ್ನುವುದು ಇಂದಿನ ಆಧುನಿಕ ಕಾಲದಲ್ಲಿ ಒಂದು ಹವ್ಯಾಸವಾಗಿದೆ.ಅದರೊಂದಿಗೆ ನಾವು ಸ್ಪರ್ಧೆಗೆ ಇಳಿದಿದ್ದೇವೆ.ಎಲ್ಲದಕ್ಕೂ ಪ್ರತಿಷ್ಠೆ.ಇದಷ್ಟೆ ಆಗಿದ್ದರೆ ಹೇಗೋ ನಡೆಯುತ್ತಿತ್ತು.ಆದರೆ ಇದರ ಜೊತೆಗೆ ಅಹಂಕಾರ, ಜಾತಿ ಮತ್ತೊಂದು ಎಲ್ಲವೂ ಸೇರಿ ವಾಣಿಜ್ಯೀಕರಣವಾಗುತ್ತಿದೆ.ನಿಜವಾದ ಗುರುವಿಗೆ ಇಲ್ಲಿ ಸ್ಥಾನವಿಲ್ಲ.ಪ್ರಾಂಜ್ವಲ ಮನಸ್ಸಿನ ಗುರು ಇಲ್ಲಿ ಗೋಡೆಗೆ ನೇತಾಡುತ್ತಾರೆ.ಐಶಾರಾಮಿ ಜೀವನದ ಗುರು ನಿತ್ಯ ಪೂಜೆಗೊಳ್ಳುವನು.ಕಾರಣ ವಿದ್ಯೆಯನ್ನು ಧಾರೆಯೆರೆದು ಕೊಡುವ ಗುರು ಅಥವಾ ಸಂಸ್ಥೆ ಇಂದು ವಾಣಿಜ್ಯಿಕವಾಗಿ ಬೆಳೆಯುತ್ತಿವೆ ಹೀಗಾದರೆ ಮುಂದೊಂದು ದಿನ ಗುರುವನ್ನು ಹುಡುಕುವ ಕೆಲಸ ಮತ್ತೆ ಪ್ರಾರಂಭವಾಗುವಲ್ಲಿ ಸಂಶಯವಿಲ್ಲ.ಅನೌಪಚಾರಿಕವಾಗಿ ಶಿಕ್ಷಕನ ಪಾತ್ರವನ್ನು ಯಾರು ಬೇಕಾದರೂ ವಹಿಸಬಹುದು (ಉದಾ. ಒಂದು ನಿರ್ದಿಷ್ಟ ಕಾರ್ಯವನ್ನು ನಿರ್ವಹಿಸಲು ಸಹೋದ್ಯೋಗಿಗೆ ತೋರಿಸುವಾಗ). ಕೆಲವು ದೇಶಗಳಲ್ಲಿ, ಶಾಲಾ ವಯಸ್ಸಿನ ಯುವ ಜನರಿಗೆ ಅನೌಪಚಾರಿಕ ವ್ಯವಸ್ಥೆಯಲ್ಲಿ, ಶಾಲೆಯ ಅಥವಾ ಕಾಲೇಜು ಮುಂತಾದ ಔಪಚಾರಿಕ ವ್ಯವಸ್ಥೆಗಳಲ್ಲಿ ಹೆಚ್ಚಾಗಿ ಕುಟುಂಬದೊಳಗೆ ಮನೆಶಾಲೆಯಂತಹವುಗಳನ್ನು ನಡೆಸಲಾಗುತ್ತದೆ. ಕೆಲವು ಇತರ ವೃತ್ತಿಗಳು ಗಣನೀಯ ಪ್ರಮಾಣದ ಬೋಧನೆಗಳನ್ನು ಒಳಗೊಳ್ಳಬಹುದು (ಉದಾ. ಯುವಕರ ಕೆಲಸಗಾರ, ಪಾದ್ರಿ).
ಹೆಚ್ಚಿನ ದೇಶಗಳಲ್ಲಿ,ವಿದ್ಯಾರ್ಥಿಗಳ ಔಪಚಾರಿಕ ಬೋಧನೆಯು ಪಾವತಿಸಿದ ವೃತ್ತಿಪರ ಶಿಕ್ಷಕರಿಂದ ಸಾಮಾನ್ಯವಾಗಿ ನಡೆಸಲ್ಪಡುತ್ತದೆ. ಈ ಲೇಖನವು ಶಾಲೆಯಲ್ಲಿ ಅಥವಾ ಪ್ರಾಥಮಿಕ ಔಪಚಾರಿಕ ಶಿಕ್ಷಣ ಅಥವಾ ತರಬೇತಿಯ ಇತರ ಸ್ಥಳದಲ್ಲಿ ಔಪಚಾರಿಕ ಶಿಕ್ಷಣ ಸನ್ನಿವೇಶದಲ್ಲಿ ಇತರರಿಗೆ ಕಲಿಸಲು ನೇಮಕ ಮಾಡಿದವರ ಮೇಲೆ ಮುಖ್ಯ ಪಾತ್ರವಹಿಸುತ್ತದೆ.
*ಕರ್ತವ್ಯಗಳು*
*ಒಬ್ಬ ಶಿಕ್ಷಕನ ಪಾತ್ರ ಸಂಸ್ಕೃತಿಗಳಿಗನುಗುಣವಾಗಿ ಬದಲಾಗಬಹುದು.*
ಶಿಕ್ಷಕರು ಅಕ್ಷರಜ್ಞಾನ ಮತ್ತು ಸಂಖ್ಯಾಜ್ಞಾನ, ಕುಸುರಿ ಅಥವಾ ವೃತ್ತಿಪರ ತರಬೇತಿ, ಕಲೆ ಧರ್ಮ, ಪೌರತ್ವ, ಸಮುದಾಯ ಚಟುವಟಿಕೆಗಳು, ಅಥವಾ ಜೀವನ ಕೌಶಲ್ಯಗಳಲ್ಲಿ ಸೂಚನೆಯನ್ನು ನೀಡಬಹುದು.
ಔಪಚಾರಿಕ ಬೋಧನಾ ಕಾರ್ಯಗಳೆಂದರೆ ಒಪ್ಪಿತವಾದ ಪಠ್ಯಕ್ರಮದ ಪ್ರಕಾರ ಪಾಠಗಳನ್ನು ತಯಾರಿಸುವುದು, ಪಾಠಗಳನ್ನು ಬೋಧಿಸುವುದು, ಮತ್ತು ವಿದ್ಯಾರ್ಥಿ ಪ್ರಗತಿಯನ್ನು ನಿರ್ಣಯಿಸುವುದು. ಮೊದಲಾದವುಗಳು.
ಶಿಕ್ಷಕನ ವೃತ್ತಿಪರ ಕರ್ತವ್ಯಗಳು ಔಪಚಾರಿಕ ಬೋಧನೆಗೆ ಮೀರಿ ವಿಸ್ತರಿಸಬಹುದು. ತರಗತಿಯ ಹೊರಗೆ ಕೂಡ ಶಿಕ್ಷಕರು ಅಧ್ಯಯನ ಪ್ರವಾಸದಲ್ಲಿ ವಿದ್ಯಾರ್ಥಿಗಳ ಜೊತೆಯಲ್ಲಿ ಹೋಗಬಹುದು, ಅಧ್ಯಯನ ಸಮೂಹಗಳನ್ನು ಮೇಲ್ವಿಚಾರಣೆ ಮಾಡುತ್ತಾರೆ, ಶಾಲಾ ಕಾರ್ಯಗಳ ಸಂಘಟನೆಗೆ ಸಹಾಯ ಮಾಡುತ್ತಾರೆ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಮೇಲ್ವಿಚಾರಕರಾಗಿ ಸೇವೆ ಸಲ್ಲಿಸಬಹುದು. ಕೆಲವು ಶಿಕ್ಷಣ ವ್ಯವಸ್ಥೆಗಳಲ್ಲಿ, ಶಿಕ್ಷಕರಿಗೆ ವಿದ್ಯಾರ್ಥಿ ಶಿಸ್ತಿನ ಜವಾಬ್ದಾರಿ ಇರಬಹುದು.,*ನಾವು ಶಿಕ್ಷಕರು*
ಗುರವೇಸರ್ವ ಲೋಾಕಾನಾಂ ಭಿಷಜೆ ಭವ ರೋಗಿಣಾಂ.
ನಿಧಯೇ ಸರ್ವ ವಿದ್ಯಾನಾಂ
ದಕ್ಷಿಣಾ ಮೂರ್ತಯೇ ನಮಃ
ಗುರು ಎಲ್ಲ ಲೋಕದಲ್ಲಿ ಹುಟ್ಟು ಸಾವುಗಳ ಬಂಧನ ಕಳಚುವ ನಿಧಿ ಗುರುವಾಗಿದ್ದ. ಎಲ್ಲ ಕಾಲಕ್ಕೂ ಸಲ್ಲುವ ಶ್ರೇಷ್ಠ ದೈವಾಂಶ ಸಂಭೂತನಾಗಿದ್ದ.ಗುರು ಅಷ್ಟು ಸುಲಭವಾಗಿ ತಲುಪಬಹುದಾದ ಮಾರ್ಗಿಯಾಗಿರಲಿಲ್ಲ.ಅದಕ್ಕೊಂದು ದೊಡ್ಡ ತಪಸ್ಸು ಬೇಕಿತ್ತು.ಶಿಷ್ಯನಾಗಲು ಅದೆಷ್ಟೋ ಕಷ್ಟಪಡಬೇಕಿತ್ತು.ಅವರು ಕಲಿಸುವ ವಿದ್ಯೆ ಸಂಪಾದಿಸಲು ಕಠಿಣ ಪರಿಶ್ರಮ, ಶ್ರದ್ಧೆ, ಆಸಕ್ತಿ ಬೇಕಿತ್ತು.ನಾವೆಲ್ಲರೂ ಆಧುನಿಕತೆಯ ಭರಾಟೆಯಲ್ಲಿ ಕಾಗದವೆಂಬ ಮಾಯಾಂಗನೆಯ ಬೆನ್ನು ಹತ್ತಿ ಹೊರಟ ಬೇತಾಳಗಳು.ಅದಕ್ಕೆ ನಮಗೆ ಗುರುವಿನ ಮಹತ್ವ ತಿಳಿದಿಲ್ಲ. ಇಂದು ಗುರು ಎಂದು ಕರೆಯಲ್ಪಡುವ ಈ ಮಹಾನ್ ಚೇತನ ಎಲ್ಲಿದೆ?
*ಮಕ್ಕಳ ಗಣತಿ*
ಇಂದು ಶಾಲೆಗಳಲ್ಲಿ ಮಕ್ಕಳಿಗೆ ಪಾಠ ಹೇಳಿ ಕೊಡುವ ಬದಲಿಗೆ ಇತರೆ ಕೆಲಸಗಳಿಗೆ ನಿಯೋಜಿತ ನಿರ್ದೇಶಕರಾಗಿದ್ದೇವೆ. ಐದು ವರ್ಷ ಒಂದು ತಿಂಗಳ ಪೂರ್ಣಗೊಂಡ ಮಗು ಶಾಲೆಗೆ ದಾಖಲಾಗಬೇಕು.ಇಂತಹ ಮಕ್ಕಳನ್ನು ಇಡೀ ಊರೆಲ್ಲ ಸುತ್ತಿ ಶಾಲೆಗೆ ಸೇರಿಸಬೇಕು. ನಮ್ಮ ಮಕ್ಕಳಿಗೆ ಯಾವಾಗ ಐದು ವರ್ಷ ತುಂಬುತ್ತದೆ?ಯಾವ ಶಾಲೆಗೆ ಸೇರಿಸಬೇಕು ಎನ್ನುವ ಚಿಕ್ಕ ಪರಿಜ್ಞಾನ ಇಲ್ಲ. ಇದಕ್ಕಾಗಿ ಪಾಲಕರ ಮನವೊಲಿಸುವ ಪ್ರಯತ್ನ ಮಾಡಿ ಆ ಮೂಲಕ ಮಗುವನ್ನು ಶಾಲೆಗೆ ಸೇರಿಸಬೇಕು. ಇಲ್ಲದಿದ್ದಲ್ಲಿ ಇದಕ್ಕೆ ಆ ವ್ಯಾಪ್ತಿಯಲ್ಲಿ ಬರುವ ಶಿಕ್ಷಕರು ಹೊಣೆಗಾರಿಕೆಯನ್ನು ಪಡೆಯಬೇಕು.
*ಜನಗಣತಿ*
ದೇಶದ ಪ್ರತಿ ಹತ್ತು ವರ್ಷಕ್ಕೊಮ್ಮೆ ನಡೆಯುವ ಜನಗಣತಿಗೂ ಶಿಕ್ಷಕರೇ ಅಧಿಕಾರಿಗಳು.ಪ್ರತಿ ಮನೆಯ ಸದಸ್ಯರನ್ನು, ಅವರ ಮನೆಯ ಇಡೀ ಇತಿಹಾಸವನ್ನು ಬರೆಯಬೇಕು.ಇದರಲ್ಲಿ ಕೊಂಚ ವ್ಯತ್ಯಾಸವಾದರೂ ತಲೆದಂಡ ಶಿಕ್ಷಕರಿಗೆ. ಹಾಗಾದರೆ ನಾವು ಶಿಕ್ಷಕರು ಜನಗಣತಿ ನಾವು ಮಾಡುತ್ತೇವೆ ಎಂದು ಎಲ್ಲಿಯಾದರೂ ಹೇಳಿದ್ದೇವೆಯೇ? ಇಲ್ಲ. ಆದರೆ ನಮ್ಮ ಮೇಲೆ ಸಂಪೂರ್ಣ ನಂಬಿಕೆ ಇದೆ. ಜೊತೆಗೆ ತಪ್ಪಾದರೆ ತಲೆ ಕೊಡಬೇಕು. ಅದೇ ನಂಬಿಕೆ. ಮತ್ತೆ ಈ ಕುರಿತು ಚಕಾರ ಎತ್ತಿದರೆ ನೀವು ಸ್ಮಾರ್ಟ್ ಮತ್ತು ಹಾರ್ಡ್ ವರ್ಕರ್ ಎನ್ನುವ ಎರಡು ಆಂಗ್ಲ ಪದಗಳು.
*ಮತದಾನ*
ಪ್ರಜಾಪ್ರಭುತ್ವ ರಾಷ್ಟ್ರಗಳ ಪೈಕಿ ಅತಿದೊಡ್ಡ ದೇಶ ಭಾರತ. ಇದರ ಕುರಿತು ನಮಗೆ ಯಾವ ಜನ್ಮಕ್ಕೂ ಮುರಿಯದ ಹೆಮ್ಮೆ ನಮ್ಮದು.ಆದರೆ ಈ ಕಾರ್ಯವನ್ನು ಮೊದಲು ಮತದಾರರ ಗುರುತಿನ ಚೀಟಿ ಮಾಡಿಸುವುದರಿಂದ ಪ್ರಾರಂಭಗೊಂಡು ಪ್ರಮಾಣ ವಚನ ಸ್ವೀಕರಿಸುವವರೆಗೂ ಶಿಕ್ಷಕರೇ ಬೇಕು. ಗುರುತಿನ ಚೀಟಿ ಮಾಡುವುದು ಮತಗಟ್ಟೆ ಮಟ್ಟದ ಅಧಿಕಾರಿಗಳು.ಎಂದರೆ ಇವರೂ ಶಿಕ್ಷಕರು. ಚುನಾವಣಾ ಆಯೋಗ ಕೊಡುವ ತಾರೀಖಿನಂದು ಹದಿನೆಂಟು ವರ್ಷ ತುಂಬಿದ ಯುವಕ ಯುವತಿಯರಿಗೆ ಗುರುತಿನ ಚೀಟಿ ಮಾಡಿಕೊಡುವವರೇ ಶಿಕ್ಷಕರು. ಅಲ್ಲಿಂದ ಮುಂದೆ ಚುನಾವಣಾ ಕಾರ್ಯದಲ್ಲಿ ಜನ ಜಾಗೃತಿ ಮೂಡಿಸಲು ಶಿಕ್ಷಕರು. ಮತದಾನ ನಡೆಯುವ ಹಿಂದಿನ ದಿನವೇ ಬರುವ ಸೈನ್ಯ ಶಿಕ್ಷಕರದು.ಅದಕ್ಕೂ ಮೊದಲು ಒಂದೆರಡು ಬಾರಿ ತರಬೇತಿ ನೀಡುತ್ತಾರೆ. ತರಬೇತಿ ಕೊಡುವವರು ಮತ್ತು ತೆಗೆದುಕೊಳ್ಳುವವರು ಇಬ್ಬರೂ ಶಿಕ್ಷಕರು. ಮತದಾನದ ದಿನ ಕೈಗೊಳ್ಳುವ ಕಾರ್ಯಕ್ರಮದಲ್ಲಿ ಒಂದಷ್ಟು ಹೆಚ್ಚು ಕಡಿಮೆ ಆದರೂ ತಪ್ಪು ಶಿಕ್ಷಕರದ್ದೆ.ಹೀಗೆ ಮತ ಎಣಿಕೆ ಮಾಡಲು ಶಿಕ್ಷಕರು ಬೇಕು.ಮತದಾನ ನಡೆಯುವ ಹಿಂದಿನ ದಿನ ತಾಲ್ಲೂಕು ಕೇಂದ್ರಕ್ಕೆ ಹಾಜರಾಗಬೇಕು.ಅಲ್ಲಿಗೆ ಸರಿಯಾದ ವೇಳೆಯಲ್ಲಿ ಹಾಜರಾಗದಿದ್ದರೆ ಕ್ರಮ ಅದರಲ್ಲೂ ಶಿಸ್ತು ಕ್ರಮ ಶಿಕ್ಷಕರಿಗೆ.ಆದರೆ ಈ ಶಿಕ್ಷಕರನ್ನು ಚುನಾವಣಾ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡ ಮೇಲೆ ಅವರನ್ನು ಪುನಃ ಸುರಕ್ಷಿತವಾಗಿ ಅವರ ಮನೆಗಳಿಗೆ ಬಿಡುವ ವ್ಯವಸ್ಥೆ ಇಲ್ಲ. ಮತದಾನ ಮುಗಿಸಿ ಅವೆಲ್ಲ ದಾಖಲೆಗಳನ್ನು ಸರಿಯಾಗಿ ಚುನಾವಣಾ ಆಯೋಗ ಹೇಳಿದಂತೆ ಹಿಂತಿರುಗಿಸಿದ ಮೇಲೆ ಶಿಕ್ಷಕರ ಪಾಡೇನು? ತಡರಾತ್ರಿಯಾದರೆ ಹೋಗುವುದು ಹೇಗೆ ಎಂಬುದನ್ನು ಇಲ್ಲಿಯವರೆಗೂ ಯಾವುದೇ ರೀತಿಯ ನಿರ್ಣಯ ಕೈಗೊಂಡಿಲ್ಲ.ಒಟ್ಟು ಸರಿಯಾಗಿ ಕೆಲಸ ಮಾಡಲು ಬೇಕು. ಆದರೆ ನಮ್ಮನ್ನು ಸುರಕ್ಷಿತವಾಗಿ ನೋಡಿಕೊಳ್ಳಲು ಇಲ್ಲ. ಇದು ನಮ್ಮ ಅಸಹಾಯಕತೆ.
*ಚುನಾವಣಾ ಗುರುತಿನ ಚೀಟಿ ಮಾಡುವುದು*
ಈ ಮೊದಲು ತಿಳಿಸಿದಂತೆ ಭಾರತೀಯ ಚುನಾವಣಾ ಆಯೋಗ ಬಳಸುವ ಮತ್ತೊಂದು ಪ್ರಮುಖ ಅಸ್ತ್ರ.ಶಿಕ್ಷಕ ತನ್ನ ವ್ಯಾಪ್ತಿಯಲ್ಲಿ ಬರುವ ಹದಿನೆಂಟು ತುಂಬಿದ ಯುವ ಜನತೆಯನ್ನು ಚುನಾವಣಾ ಗುರುತಿನ ಚೀಟಿ ಮಾಡಿಸಲು ಗುಡ್ಡೆ ಹಾಕಬೇಕು. ಅದೂ ಚುನಾವಣಾ ಆಯೋಗ ನೀಡಿದ ದಿನಾಂಕಕ್ಕೆ ಅವನಿಗೆ ಅಥವಾ ಅವಳಿಗೆ ಹದಿನೆಂಟು ವರ್ಷಗಳಾಗಿರಬೇಕು.ಇದು ಆ ಭಾಗದ ಶಾಲಾ ಶಿಕ್ಷಕರ ಅದರಲ್ಲೂ ಮತಗಟ್ಟೆ ಮಟ್ಟದ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕ ಮಾಡಿಸಬೇಕು.ಒಂದು ವೇಳೆ ಈ ಕಾರ್ಯದಲ್ಲಿ ಸ್ವಲ್ಪ ಲೋಪ ದೋಷ ಉಂಟಾದರೆ ಆ ಶಿಕ್ಷಕ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಒಂದು ವೇಳೆ ಈ ಕೆಲಸ ನಿರ್ವಹಿಸುವ ಶಿಕ್ಷಕ ಏನಾದರೂ ವರ್ಗಾವಣೆಗೊಂಡರೆ, ಅಲ್ಲಿಗೆ ಮುಂದೆ ಬರುವ ಆ ಶಿಕ್ಷಕ ಈ ಕೆಲಸವನ್ನು ಮಾಡಬೇಕು. ಅವನಿಗೆ ಗೊತ್ತಿಲ್ಲದಿದ್ದರೂ ಮಾಡಬೇಕು. ಏಕೆಂದರೆ ಅದು ದೇಶದ ಕೆಲಸ.
ಹೀಗೆ ಸಮಾಜದಲ್ಲಿ ಅತ್ಯುನ್ನತ ಮಟ್ಟದ ಸ್ಥಾನ ಶಿಕ್ಷಕರದ್ದು.ಮತ್ತೊಮ್ಮೆ ಕಲಿಸಿದ ಗುರುಗಳಿಗೆ ನಮನ.
- ಶ್ರೀ ಇಂಗಳಗಿ ದಾವಲಮಲೀಕ
ಶಿಕ್ಷಕ ಸಾಹಿತಿಗಳು ಹತ್ತಿಮತ್ತೂರು.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ