ಕಲ್ಪನಾಲೋಕದ ಕನ್ಯೆ
ಚಿನುಕುರುಳಿಯ ಕಿರುನಗೆಯಲಿ ಚಂಚಲತೆಯ ಚಲನೆಯೊಂದು ಚಲಿಸುತ್ತಿತ್ತು ಚೆಲುವೆಯಲಿ ಚಿಲುಮೆಯೊಂದು,
ನಡುಪಟ್ಟಿಯ ತೊಟ್ಟು ಮುತ್ತಂತೆ ಹೊಳೆಯುತ್ತಿತ್ತು ಅವಳಿಟ್ಟ ಹಣೆಯ ಬಿಂದಿಗೆಯ ಬೊಟ್ಟು....!!
ನವಿಲ ಗರಿಯಾಂಗ ಕಾಣುತ್ತಿತ್ತು ನಾರಿತೊಟ್ಟ ಆ ಹಸಿರ ಸೀರೆಯ ಸೆರಗ,
ನೋಡಿ ಮರುಗಿ ಸೊರಗಿದೇನಾ ಅವಳಂದಕ ಹೋದಾಗ ನಾ ಹೊರಗ.....!!
ನೀಳ ಜಡೆಯ ನವಿಲ ನಡಿಗೆಯ ಕೋಗಿಲೆಯ ಧ್ವನಿಯು ಬರುತ್ತಿತ್ತು ಪ್ರತಿಸಲವೂ ಅವಳು ನುಡಿದಾಗ,
ಮನಸ್ಸು ಮಧುರವಾಗಿ ಮಿಡಿಯುತ್ತಿತ್ತು ಎನಗೆ ಮಕರಂದದಿ ಅವಳು ನಗೆಬೀರಿದಾಗ....!!
ಬಹು ಮೈಮಾಟದ ಬಂಗಾರದ ಜಿಂಕೆಗೆ ಬೆರಗಾಗಿ ಹೇಳಿತು ನನ್ನ ಬರಿದಾದ ಬದುಕ,
ಸೇರಲು ಬಯಸುತಿದೆ ಎನ್ನಮನ ಒಲಿದು ಬರುವೆಯಾ ಈ ಬಡಹೃದಯದ ಅಂಗಳಕ.....!!
ಕ್ಷಣಹೊತ್ತು ತಡೆದು ನುಡಿದು ಹೇಳಿದಳು ಕಡೆವರೆಗೂ ಕಾಯುವೆ ನಿನ್ನೊಂದಿಗೆ ನಾ ಸೇರಲು ಬಯಸಿ,
ಬಂದಾಗ ನಾ ಬರಿದಾದ ಹೃದಯಕೆ ತುಂಬುವೆ ಎಂದೆಂದಿಗೂ ಬರಿದಾಗದ ಹೊಂಬೆಳಕ ಎಂದಳರಸಿ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ