ಮಂಗಳವಾರ, ಅಕ್ಟೋಬರ್ 5, 2021

ಹಾರಬಯಸಿದ ಮೀನು (ಕವಿತೆ) - -ಗೌತಮ್ ಗೌಡ, ಕೀರಣಗೆರೆ.

ಹಾರಬಯಸಿದ ಮೀನು 

ಸದಾ ನೀರೊಳಗೆ
ಈಜಿ ಈಜಿ ಸಕಾದ ಮೀನಿಗೆ,
ನೆಲಕ್ಕಿಳಿದು
ಆಗಸದಲ್ಲಿ ಹಾರುವಾಸೆ

ತನ್ನ ಸಂಗಾತಿ ಬಿಟ್ಟು
ಸಹಚರರ ಬಿಟ್ಟು
ನೆಲಕ್ಕಿಳಿದು ಆಗಸದಿ ಹಾರಿ,
 ಭುವಿಯಲ್ಲ ನೋಡುವಾಸೆ..!!

ಹಕ್ಕಿಯ ಹಾಗೆ ನನಗೂ
ರೆಕ್ಕೆ ಇರುವುದಲ್ಲ!
ಹಾರ ಬಲ್ಲೆನೆಂಬ ಹುಂಬು
ಹುಟ್ಟಿದಾಗಿನಿಂದ ಸಾಯುವವರೆಗೂ
ಎಷ್ಟೇಂದು ಈಜಲಿ ನೀರಲಿ..!!

ಹಕ್ಕಿಯ ಹಾಗೆ
ನಾನು ಹಾರುವೆ, ಬಾನಲಿ..!!
ಎಂದ ಮೀನು ಆಸೆಗಳ ತಾಸೊತ್ತಿನಾದಿಯಲಿ
ತಡ ಮಾಡದೆ ಹಾರಲೋರಟಿತು

ನೀರಿನಿಂದ ಆಚೆಗೆ ಜಿಗಿದ ಮೀನು, 
ಮತ್ತೆ ಇತ್ತ ನೀರಿಗಿಳಿಯಲಾಗದೆ,
ಅತ್ತ ಬಾನಿಗಾರಲಾಗದೆ
ನೆಲದ ಮೇಲೆ ಹೊಯ್ದಾಡುತ್ತಿತ್ತು.

ಆಸೆಯ ತಾಸೋತ್ತಿನಾದಿಯಲಿ
ಪ್ರಾಣದ ಉಳಿವು ಅಳಿವಿನ
ಗುದ್ದಾಟ..!!
 -ಗೌತಮ್ ಗೌಡ, ಕೀರಣಗೆರೆ.

(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...