ಮಂಗಳವಾರ, ಅಕ್ಟೋಬರ್ 5, 2021

ಹೆಣ್ಣಿನ ಮನದ ಕೂಗು (ಕವಿತೆ) - ದಾನೇಶ್ವರಿ ಬಸವರಾಜ ಶಿಗ್ಗಾoವಿ.

ಹೆಣ್ಣಿನ ಮನದ ಕೂಗು

ಬದುಕುವ ಬಯಕೆ ಅವಳದು
ಬೆರಳ ಹಿಡಿದು ಸಮಾಜ ಎಂದು ಅವಳನ್ನು ಮೇಲೆತ್ತಲಿಲ್ಲ

ಕಾಲ್ ಕೆಳಗೆ ಹಾಕಿ ತುಳಿಯಲು ಪ್ರಯತ್ನಿಸುತ್ತ, ನಾಲ್ಕು ಗೋಡೆಗಳ ಮಧ್ಯೆ ಬಂಧಿಸುತ್ತಾ ಬಂದಿತ್ತು

ಮೌನಿಯಾಗಿ ಸೋತರು ಮೆಲ್ಲನೆ ಎದ್ದು ನಿಂತಳು. ಅತ್ಯಾಚಾರದಲ್ಲಿ ಕ್ರೂರಿಗಳ ಮಧ್ಯೆ ಕೊರಗುತ್ತಾ ನಿಂತಿ ಹೇಳು

ಅಮ್ಮ ಎಂದು ಕೂಗುವ ಮುಗ್ಧ ಹಸುಗೂಸನ್ನು ಬಿಡುತ್ತಿಲ್ಲವಲ್ಲ,
ಮಾನವೀಯತೆಯ ಮನಸ್ಸಿಗೆ ಮಂಕು ಬಡೆದು, ರೌದ್ರತೆಯ ರೂಪ ತಾಳಿದೆ

ಕೆಟ್ಟ ಪ್ರಪಂಚದ, ಕರುಣೆಯಿಲ್ಲದ ಮನದ ಸಮಾಜಕ್ಕೆ ಮೌನದಿ ದಿಕ್ಕಾರ ಸಲ್ಲಿಸುತ್ತಿಹಳು, ಬದುಕುವ ಹಂಬಲ ಮಣ್ಣಾಗುತಿಹದಲ್ಲ.

- ದಾನೇಶ್ವರಿ ಬಸವರಾಜ ಶಿಗ್ಗಾoವಿ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...